ವಿಜಯನಗರ ಕೊಟ್ಟೂರು: ಡಾ .ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ 111ನೇ ಜನ್ಮ ದಿನಾಚರಣೆ ಅಂಗವಾಗಿ ಪಟ್ಟಣದ ನಾದ ಲಹರಿ ಸಂಗೀತ ಪಾಠ ಶಾಲೆಯಲ್ಲಿ ಮಂಗಳವಾರ ಸಂಜೆ ಪುಟ್ಟರಾಜ ಗವಾಯಿಗಳವರ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಲಾಯಿತು.
ನಾದ ಲಹರಿ ಸಂಗೀತ ಪಾಠಶಾಲೆ ಶಿಕ್ಷಕಿ ಕೆ. ಪ್ರಿಯಾಂಕ ಮಾತನಾಡಿ ಸಂಗೀತ ಕೇಳುವುದರಿಂದ ಅನೇಕ ಲಾಭಗಳು ಇವೆ.
ಸಂಗೀತದಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ನೀಡುವುದು ಎಲ್ಲರಿಗೂ ಸಂಗೀತ ದಿನ ನಿತ್ಯದ ಅವಿಭಾಜ್ಯ ಅಂಗವಾಗಿ ಬೆಳೆದು ನಿಂತಿದೆ ಎಲ್ಲರೂ ಈ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಹಕರಿಸಿ ಎಂದರು.
ಸಂಗೀತದ ಧ್ರುವತಾರೆ ಉಭಯಗಾನ
ಪಂ. ಪುಟ್ಟರಾಜ ಗವಾಯಿಗಳು ಮೇರು ಪಾರ್ವತವಾಗಿ ಮಿಂಚಿ ಅನೇಕ ಅಂಧ ಅನಾಥ ಮಕ್ಕಳಿಗೆ ವಿದ್ಯೆಯನ್ನು ಧಾರೆ ಎರೆದು ಈ ನಾಡಿನ ಆಶಾಕಿರಣವಾಗಿದ್ದಾರೆ ಎಂದರು.
ಸಂಗೀತ ಪ್ರಕಾರಗಳಲ್ಲಿ ಒಂದಾದ ಸುಗಮ ಸಂಗೀತ ಪ್ರಕಾರವನ್ನು ಮಾತ್ರ ನಾವು ಹಾಡುವುದಷ್ಟೇ ಅಲ್ಲದೇ ಸಂಗೀತವನ್ನು ಆಳವಾಗಿ ಅಭ್ಯಾಸ ಮಾಡಬೇಕು. ಗುರುವಿನ ಮೂಲಕ ಅಭ್ಯಾಸ ಮಾಡಿ ಸಂಗೀತದಲ್ಲಿ ಪರೀಕ್ಷೆಗಳನ್ನು ಕಟ್ಟಿಕೊಳ್ಳುವ ನಿಟ್ಟಿನತ್ತ ನೀವೆಲ್ಲಾ ಸಾಗಬೇಕು ಎಂದರು.
ಗುರುವಿನ ಮಾರ್ಗದರ್ಶನದಲ್ಲಿ ಎಂತಹ ಸಾಧನೆಯನ್ನು ಮಾಡಬಹುದು.
ಪಂಡಿತ ಪುಟ್ಟರಾಜ ಗವಾಯಿಗಳು ಕಣ್ಣು
ಇಲ್ಲದಿದ್ದರೂ ತಮ್ಮ ಸಂಗೀತದ ಮೂಲಕ ಇಡೀ ಜಗತ್ತು ತನ್ನೆಡೆಗೆ ನೋಡುವಂತೆ ಮಾಡಿರುವುದು ಶ್ಲಾಘನೀಯ ಸಂಗತಿ ಎಂದು ದೈಹಿಕ ಶಿಕ್ಷಕ ಸತೀಶ್ ಹೇಳಿದರು.
ಸಂಗೀತಕ್ಕೆ ಸಾವಿಲ್ಲ ಈ ನಾಡಿನಲ್ಲಿ ಅನೇಕ ಸಂಗೀತ ಮಹಾನ್ ಕಲಾವಿದರು ಮರಣ ಹೊಂದಿರಬಹುದು.
ಅವರು ಹಾಡಿರುವ ಹಾಡುಗಳು ಇಂದಿಗೂ ಜೀವಂತವಾಗಿವೆ ಎಂದು ಕಲ್ಪತರು ಕಲಾ ಟ್ರಸ್ಟ್ ಅಧ್ಯಕ್ಷರು ಚಿಗಟೇರಿ ಕೊಟ್ರೇಶಿ ತಿಳಿಸಿದರು.
ಮಕ್ಕಳಲ್ಲಿ ವಿದ್ಯಾಭ್ಯಾಸದ ಜೊತೆಗೆ ಸಂಸ್ಕಾರ ,ಸಂಸ್ಕೃತಿಯನ್ನು ನೀಡಲು ಮುಂದಾಗಬೇಕು ಎಂದು ಎಚ್ ನಾಗರಾಜ ಪತ್ರಕರ್ತರು ಹೇಳಿದರು.
ಕೊಟ್ಟೂರು ಎಲ್ಲಾ ರಂಗಗಲ್ಲಿ ಮುಂಚೂಣಿಯಲ್ಲಿ ಇದೆ. ಅದೇ ರೀತಿ ಮಕ್ಕಳಿಗೆ ಬಾಲ್ಯದಿಂದಲೇ ಸಂಗೀತ ಅಭ್ಯಾಸಗಳಿಂದ ಉತ್ತಮ ಸಮಾಜ ನಿರ್ಮಾಣವಾಗಲಿ ನಿಮ್ಮ ಸಂಗೀತ ಪಾಠಶಾಲೆಗೆ ನಮ್ಮ ಸಹಕಾರ ಸದಾ ಇರಲಿದೆ ಎಂದು ಎಸ್ ಡಿ ಎಂಸಿ ಅಧ್ಯಕ್ಷರು ಬಿ ಎಂ ಮಂಜುನಾಥ್ ಹೇಳಿದರು.
ಕೆ ಎಸ್ ನಾಗರಾಜ್ ಗೌಡರು ಬಾಲ್ಯದ ದಿನಗಳು ನೆನೆದರು. ನಾದ ಲಹರಿ ಸಂಗೀತ ಪಾಠ ಶಾಲೆಯ ವಿದ್ಯಾರ್ಥಿಗಳು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಪರಿಮಳ ಅವರು ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರಗಳನ್ನು ನೀಡಿದರು. ಪಟ್ಟಣದ
ಕಲ್ಪತರು ಕಲಾ ಟ್ರಸ್ಟ್ ಚಿಗಟೇರಿ ಕೊಟ್ರೇಶಿ ಅಧ್ಯಕ್ಷರು ಕಾರ್ಯಕ್ರಮ ನಿರೂಪಿಸಿದರು.
- ಕರುನಾಡ ಕಂದ ಪತ್ರಿಕೆ




















