ಸಿರುಗುಪ್ಪ- ತಾಲೂಕಿನ ಹಚ್ಚೊಳ್ಳಿ ಮತ್ತು ಅಗಸನೂರು ಗ್ರಾಮಗಳಲ್ಲಿ ಭಾರತೀಯ ಜನತಾ ಪಕ್ಷ ತಾಲೂಕ ಘಟಕದಿಂದ ವಿಕಸಿತ ಭಾರತ – ಜಿ ರಾಮ್ ಜಿ (ರಾಷ್ಟ್ರೀಯ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ನರೇಗಾ) ಕುರಿತು ಹಮ್ಮಿಕೊಂಡಿದ್ದ ಜನ ಜಾಗೃತಿಗಾಗಿ ಪಾದಯಾತ್ರೆಗೆ ಮಾಜಿ ಸಚಿವರಾದ ಬಿ. ಶ್ರೀರಾಮುಲು ಚಾಲನೆ ನೀಡಿದರು.
ಮಾಜಿ ಶಾಸಕರಾದ ಎಂ ಎಸ್ ಸೋಮಲಿಂಗಪ್ಪ ಬಳ್ಳಾರಿ ಜಿಲ್ಲಾಧ್ಯಕ್ಷ ಅನಿಲ್ ನಾಯ್ಡು ಸಿರುಗುಪ್ಪ ತಾಲೂಕ ಅಧ್ಯಕ್ಷ ಕೆ ಮಲ್ಲಿಕಾರ್ಜುನ ಸ್ವಾಮಿ ಎಸ್ ಟಿ ಮೋರ್ಚಾ ಜಿಲ್ಲಾಧ್ಯಕ್ಷ ಧರಪ್ಪ ನಾಯಕ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಎಂಎಸ್ ಸಿದ್ದಪ್ಪ, ರೈತ ಮೋರ್ಚಾ ಅಧ್ಯಕ್ಷ ವೀರನಗೌಡ, ಕಾರ್ಯಕರ್ತರಾದ ಎಂ ಆರ್ ಗೌಡ ಎಂ ವೀರೇಶ್ ಶಿವರಾಮಗೌಡ ದೊಡ್ಡ ಹುಲಗಪ್ಪ ಹನುಮಂತರೆಡ್ಡಿ ಶೇಖರ ಗೌಡ ಸಿದ್ದಯ್ಯ ಸ್ವಾಮಿ, ಶರಣಬಸವ ವೀರೇಂದ್ರ ಅಯ್ಯಪ್ಪ ರಾಮ ನಾಯಕ ಚಿದಾನಂದ ಗೌಡ ಮೋಹನ್ ರೆಡ್ಡಿ ಮಹಾದೇವಪ್ಪ ರಾಮಕೃಷ್ಣ ಬಸವರಾಜ ಚನ್ನಬಸವನಗೌಡ ಕುಮಾರಪ್ಪ ನಾಗರಾಜ ವೀರೇಶ ಗ್ರಾಮಸ್ಥರು ಇದ್ದರು.
ಸಿರುಗುಪ್ಪ ತಾಲೂಕಿನ ಹಚ್ಚೊಳ್ಳಿ ಬಸ್ ನಿಲ್ದಾಣದಿಂದ ಮಾರೆಮ್ಮ ದೇವಿ ದೇವಸ್ಥಾನದವರೆಗೆ ಪಾದಯಾತ್ರೆ ನಡೆಯಿತು.
ಆಗಸನೂರು ಗ್ರಾಮದಲ್ಲಿ ಜಗನ್ನಾಥ್ ರೆಡ್ಡಿ ಅವರ ಮನೆಯಿಂದ ಶೇಷಮ್ಮ ಕಟ್ಟೆವರಗೆ ಜನ ಜಾಗೃತಿ ಪಾದ ಪಾದಯಾತ್ರೆ ನಡೆಯಿತು. ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಇತರರು ಪಾಲ್ಗೊಂಡಿದ್ದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















