ಸಿರುಗುಪ್ಪ- ವಚನಗಳು ಸಮಾಜದ ಪರಿವರ್ತನೆಗೆ ಮಾರ್ಗದರ್ಶಕವಾಗಿವೆ ಎಂದು ಕೊಟ್ಟೂರು ಶ್ರೀದೇಶಿ ಕೇಂದ್ರ ಸ್ವಾಮೀಜಿ ಹೇಳಿದರು. ಸಿರುಗುಪ್ಪ ನಗರದ ಶ್ರೀ ಗುರು ಸಾಂಸ್ಕೃತಿಕ ಭವನದಲ್ಲಿ ಸಿರುಗುಪ್ಪ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಬಸವ ಬಳಗದಿಂದ ಜರುಗಿದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಕಾಯಕ ತತ್ವ ಕುರಿತು ಹೇಳಿದರು.
ಬಸವರಾಜಪ್ಪ ಶರಣರು ನಿಲಯ ಪಾಲಕಿ ಅಮರೇಶ್ವರಿ ಮಲ್ಲಿಕಾರ್ಜುನ ಸುಮಂಗಳ ಶಿವಪ್ರಕಾಶ್ ದತ್ತಿ ಉಪನ್ಯಾಸಕ ನೀಡಿದರು. ಬಸವ ಮಠದ ಬಸವ ಭೂಷಣ ಸ್ವಾಮೀಜಿ ಡಾ. ನಾ. ಮಾ. ಶಿವ ಪ್ರಕಾಶ ಕನ್ನಡ ಸಾಹಿತ್ಯ ಪರಿಷತ್ ತಾಲೂಕ ಅಧ್ಯಕ್ಷ ಡಾ. ಮಧುಸೂದನ್ ಕಾರಿಗನೂರ್ ಅವರು ಮಾತನಾಡಿದರು.
ಸಾಹಿತಿ ಶಿವಕುಮಾರ ಬಳೆಗಾರ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರು ಚೊಕ್ಕ ಬಸವನಗೌಡ ಮಹರ್ಷಿ ವಾಲ್ಮೀಕಿ ವಿದ್ಯಾಭಿವೃದ್ಧಿ ತಾಲೂಕ ಅಧ್ಯಕ್ಷ ಬಿಎಂ ಸತೀಶ್ ರಾಷ್ಟ್ರೀಯ ಸಾಕ್ಷರತಾ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು ಸಾಹಿತಿ ಅಬ್ದುಲ್ ನಬಿ ನಾಗನಗೌಡ ಮಲ್ಲಿಕಾರ್ಜುನ ಸ್ವಾಮಿ ನಾಂಚರಯ್ಯ ಸೇರಿದಂತೆ ಮತ್ತಿತರರು ಇದ್ದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















