ವಿಜಯನಗರ ಜಿಲ್ಲೆ ಕೊಟ್ಟೂರು : ನಗರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಜಯನಗರ ಶಿಶು ಅಭಿವೃದ್ಧಿ ಯೋಜನೆ ಕೂಡ್ಲಿಗಿ ಕೊಟ್ಟೂರು ವಲಯದ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು ಅಂಗನವಾಡಿ ಕೇಂದ್ರದ ತಮ್ಮ ಸರ್ವೆ ವ್ಯಾಪ್ತಿಯಲ್ಲಿ ಮನೆ ಮನೆ ಸರ್ವೆ ಮಾಡಲು ಅಂಗನವಾಡಿ ಕೇಂದ್ರಕ್ಕೆ ಸಂಬಂಧಪಟ್ಟಂತೆ ಫಲಾನುಭವಿಗಳ ನೋಂದಣಿ ಮಾಡಿಕೊಳ್ಳಲು ಸಮೀಕ್ಷೆ ಆಂದೋಲನ ಕಾರ್ಯಕ್ರಮ ವಲಯ ಮೇಲ್ವಿಚಾರಕರಾದ ಶ್ರೀಮತಿ ಅನ್ನಪೂರ್ಣ ಇವರು ಚಾಲನೆ ನೀಡಿದರು. ಪ್ರತಿಯೊಂದು ವಾರ್ಡುಗಳಲ್ಲಿ ಜನಸಂಖ್ಯೆ ಬಿಟ್ಟು ಹೋಗದಂತೆ ಸರ್ವೆ ಮಾಡಿಕೊಳ್ಳಲು ತಿಳಿಸಿದರು.
ಪಟ್ಟಣದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಜಾಥ ಕಾರ್ಯಕ್ರಮವನ್ನು ನೆರವೇರಿಸಿದರು. ನಂತರ ತಮ್ಮ ವಾರ್ಡ್ ಗಳಲ್ಲಿ ಸರ್ವೆಯನ್ನು ಪ್ರಾರಂಭಿಸಿದರು.
ಕಾರ್ಯಕರ್ತೆಯರಾದ ಕೆ. ಅನ್ನಪೂರ್ಣ, ಎಚ್. ತಿಪ್ಪಮ್ಮ, ಶಾರದಮ್ಮ ಎ ಮಹಾದೇವಿ ಜೆ ಎಸ್ ಲೀಲಾಂಬಿಕ ಪಿ ಗೀತಾ ಅಕ್ಕಮಹಾದೇವಿ ಯೂ ನಿಂಗಮ್ಮ ರುದ್ರಮ್ಮ ಕೆಬಿ ಶೋಭಾ ಎಬಿ ಈಶಮ್ಮ ಬಿ ರೇಣುಕಾ ಹೆಚ್ ಸುಶೀಲ ಸಾವಿತ್ರಮ್ಮ ಎಂ ಜ್ಯೋತಿ ಉಮಾ ಕುಲಕರ್ಣಿ ಹೆಚ್ ಜ್ಯೋತಿ ಹಾಜರಿದ್ದರು.
- ಕರುನಾಡ ಕಂದ ಪತ್ರಿಕೆ




















