ಬಾಗಲಕೋಟೆ : ಮುಧೋಳ ತಾಲೂಕಿನ ಸುಕ್ಷೇತ್ರ ಮುಗಳಖೋಡ ಗ್ರಾಮದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ರವಿವಾರ ದಿ.8 ರಂದು ಮುಂಜಾನೆ 8.30 ಕ್ಕೆ 138 ನೇ ರವಿವಾರದ ಸತ್ಸಂಗ, ಆರೂಢರ ಅಭಿಷೇಕ, ಪೂಜಾ ಕಾರ್ಯಕ್ರಮ ಜರುಗುವುದು.
ಇದೇ ಸಮಯದಲ್ಲಿ ರಾಷ್ಟ್ರೀಯ ಮಹಿಳಾ ದಿನೋತ್ಸವವನ್ನು ಆಚರಿಸಲಾಗುವುದು ಎಂದು ಶ್ರೀ ಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಮುಖಂಡ ಎಲ್.ಶ್ರೀನಿವಾಸ್ ಪ್ರಸಾದ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪತ್ರಿಕಾ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ನಮ್ಮ ನಾಡಿನ ಹೆಸರಾಂತ “ಶ್ರೀ ಕೃಷ್ಣ ಪಾರಿಜಾತ” ಕಲಾವಿದೆ ಸುನಂದಾ ಲೋಕಾಪೂರ [ಮೆಟಗುಡ್ಡ] ಅವರನ್ನು ಗೌರವಿಸಿ ಅಭಿನಂದಿಸಲಾಗುವುದು. ಶ್ರೀಸಿದ್ಧಾರೂಢರ ಪಾರಾಯಣ .ಪ್ರವಚನ.ಭಜನೆ ಹಾಗೂ ವಿವಿಧ. ಜಾನಪದ ಕಾಯ೯ಕ್ರಮಗಳು ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳ ಸಮ್ಮುಖದಲ್ಲಿ ಜರುಗುವವು ಎಂದು ಶ್ರೀ ನಿವಾಸ ಪ್ರಸಾದ್ ಅವರು ತಿಳಿಸಿದರು.
ಹಿರಿಯ ಜನಪದ ಕಲಾವಿದೆ ಶ್ರೀಮತಿ ಮುತ್ತವ್ವ ಲಕ್ಷ್ಮೇಶ್ವರ.ಬಾಗಲಕೋಟೆ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ನಿಂಗನಗೌಡ ಮಂಟೂರ.ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಪರಮಾನಂದ ಭೀ.ಸುಣಗಾರ.ಶಂಕರಗೌಡ ಪಾಟೀಲ ಮುಂತಾದವರು ಉಪಸ್ಥಿತರಿರುವರೆಂದು ತಿಳಿಸಿದ್ದಾರೆ.
- ಕರುನಾಡ ಕಂದ ಪತ್ರಿಕೆ




















