
ಹನೂರು: ತಾಲ್ಲೂಕಿನ ಬಂಡಳ್ಳಿ ಮದರ್ ಮುಜೀದ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಶ್ರೀ ಅಂಜುಮ್ ರವರ ಮಾರ್ಗದರ್ಶನದಲ್ಲಿ ನನ್ನ ಭವಿಷ್ಯ ನನ್ನ ಕೈಯಲ್ಲಿ ಎಂಬ ವಿನೂತನ ಕಾರ್ಯಕ್ರಮವನ್ನು ಬಂಡಳ್ಳಿ ಗ್ರಾಮದ ಮದರ್ ಮುಜಿದ ಶಾಲೆಯ ಶಿಕ್ಷಕರು ಹಮ್ಮಿಕೊಂಡಿದ್ದಾರೆ. ಮಕ್ಕಳ ಮನೆ ಮನೆಗೆ ಭೇಟಿ ನೀಡಿ ಮಕ್ಕಳ ಕಲಿಕಾಭಿವೃದ್ಧಿಗೆ ಮತ್ತು ಪರೀಕ್ಷೆಯ ಬಗ್ಗೆ ಭರವಸೆಯ ಬೆಳಕನ್ನು ಮತ್ತು ಅರಿವನ್ನು ಮೂಡಿಸುತ್ತಿದ್ದಾರೆ. ಅಕ್ಷರ ಅಸ್ತ್ರವಾಗಲಿ ಪರೀಕ್ಷೆ ಹಬ್ಬವಾಗಲಿ ಎಂದು ಮಕ್ಕಳಲ್ಲಿ ಪರೀಕ್ಷೆಯ ಬಗ್ಗೆ ಧೈರ್ಯ ತುಂಬುತ್ತಿದ್ದಾರೆ. ಶಿಕ್ಷಕರ ಈ ಕಾರ್ಯವನ್ನು ಪೋಷಕರು ತುಂಬು ಹೃದಯದಿಂದ ಸ್ವಾಗತಿಸುತ್ತ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ.
ಮಕ್ಕಳಿಗಾಗಿ ಮನೆಯಲ್ಲಿ ಓದುವ ವಿಶೇಷ ವೇಳಾಪಟ್ಟಿಯನ್ನು ತಯಾರಿಸಿ ಅದರಂತೆ ಓದಲು ತಿಳಿಸಿದ್ದಾರೆ. ಇದರೊಂದಿಗೆ ಪ್ರತಿನಿತ್ಯ ರಾತ್ರಿ ಮತ್ತು ಬೆಳಗಿನ ಜಾವ ಎಲ್ ಕೆ ಜಿ ಯಿಂದ ಎಂಟನೇ ತರಗತಿವರೆಗೂ ದೂರವಾಣಿ ಮೂಲಕ ತಮ್ಮ ಮಕ್ಕಳು ಓದುತ್ತಿರುವ ಬಗ್ಗೆ ಪೋಷಕರಿಂದ ಸಮಾಲೋಚನೆ ನಡೆಸುತ್ತಿದ್ದಾರೆ. ಕಾರ್ಯಕ್ರಮಕ್ಕೆ ಪೋಷಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ರವರು ತಿಳಿಸಿರುತ್ತಾರೆ.
ಈ ಸಂಧರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಬಸವರಾಜು, ನಟರಾಜು, ಬಸವಣ್ಣ, ಅಪ್ಸಾನ ಹಾಜರಿದ್ದರು.
ವರದಿ ಉಸ್ಮಾನ್ ಖಾನ್



















