ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಂಪ್ಲಿಯಿಂದ ಶ್ರೀಶೈಲ ಭ್ರಮರಾಂಭದೇವಿ ಸಹಿತ ಮಲ್ಲಿಕಾರ್ಜನಸ್ವಾಮಿ ದರ್ಶನದ ಪಾದಯಾತ್ರೆ

ಬಳ್ಳಾರಿ / ಕಂಪ್ಲಿ : ಪಟ್ಟಣದ ಶ್ರೀ ಕಲ್ಯಾಣಚೌಕಿಮಠದ ಕೆ.ಎಂ.ಬಸವರಾಜ ಶಾಸ್ತ್ರಿ ಹೊಸಪೇಟೆಯ ಮರುಳಸಿದ್ಧಾಶ್ರಮದ ಸಿದ್ಧಲಿಂಗಸ್ವಾಮಿಗಳ ಮಾರ್ಗದರ್ಶನದಲ್ಲಿ ಕಂಪ್ಲಿಯ ವೀರಶೈವ ಸಮಾಜದ ಯುವ ಮುಖಂಡರಾದ ಪುಟ್ಟಿ ಸಚಿನ್, ಅರವಿ ಅಮರೇಶಗೌಡ ನೇತೃತ್ವದಲ್ಲಿ ಪಟ್ಟಣದ ಸುಮಾರು ಐವತ್ತಕ್ಕೂ ಅಧಿಕ ಭಕ್ತರು ಶುಕ್ರವಾರ ಬೆಳಗಿನ ಜಾವ ಶ್ರೀಶೈಲ ಭ್ರಮರಾಂಭದೇವಿ ಸಹಿತ ಮಲ್ಲಿಕಾರ್ಜನಸ್ವಾಮಿ ದರ್ಶನಕ್ಕೆ ತೆರಳಿದರು. ಪಟ್ಟಣದ ಸಾಂಗತ್ರಯ ಸಂಸ್ಕೃತ ಪಾಠಶಾಲೆ ಮತ್ತು ಕಲ್ಯಾಣ ಚೌಕಿಮಠದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದ ನಂತರ ಕಲ್ಯಾಣ ಚೌಕಿಮಠದ ಕೆ.ಎಂ.ಬಸವರಾಜ ಶಾಸ್ತ್ರೀಗಳು ಮತ್ತು ಹೊಸಪೇಟೆಯ ಮರುಳಸಿದ್ಧಾಶ್ರಮದ ಸಿದ್ಧಲಿಂಗ ತಾತನವರು ಪಾದಯಾತ್ರೆಗೆ ಚಾಲನೆ ನೀಡಿದರು. ಮಾರ್ಗಮಧ್ಯೆ ಕುರುಗೋಡು ದೊಡ್ಡಬಸವೇಶ್ವರ ಮತ್ತು ಬಳ್ಳಾರಿಯ ಅಧಿದೇವತೆ ಕನಕದುರ್ಗಮ್ಮ ದೇವಿಯ ದರ್ಶನ ಪಡೆದು ಯಾತ್ರೆಯನ್ನು ಆರಂಭಿಸಿದರು.
ಶ್ರೀಶೈಲ ತಲುಪಿದ ನಂತರ ಶ್ರೀಶೈಲ ಮಲ್ಲಿ ಕಾರ್ಜುನನ ಸ್ಪರ್ಷ ದರ್ಶನ ಮಾಡಿ ನಂತರ ಭ್ರಮಾರಾಂಭ ದೇವಿಯ ದರ್ಶನ ಪಡೆದು ಹಿಂತಿರುಗುವುದಾಗಿ ತಿಳಿಸಿದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!