ಬೆಂಗಳೂರು ನಗರ ತುಂಬಾ ಬೆಳೆದಿದೆ ಜನಸಂಖ್ಯೆ ಹೆಚ್ಚಾಗಿದೆ ಮೊದಲು ನಗರ ಭಾಗದಲ್ಲಿ ದಿನನಿತ್ಯ ಬೇರೆ ಊರುಗಳಿಂದ ಆಸ್ಪತ್ರೆಗೆ ವ್ಯಾಪಾರಕ್ಕೆ ಅಥವಾ ಇನ್ನಿತರ ಬೇರೆ ಬೇರೆ ಕೆಲಸಗಳಿಗೆ ತುಂಬಾ ಜನ ಬರುತ್ತಾರೆ .ಇದರಿಂದ ವ್ಯಾಪಾರಸ್ಥರು ತುಂಬಾ ಚೆನ್ನಾಗೆ ದುಡಿಮೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇವರು ಮಾಡುವುದಾದರೂ ಏನು ? ತಮ್ಮ ಮಳಿಗೆ ಎದುರೇ ರಸ್ತೆ ಬದಿ ಕಸ ಹಾಕುವವರನ್ನು ಗಮನಿಸುವುದಿಲ್ಲ ಮತ್ತು ಹಾಕಿದ ಕಸಗಳನ್ನು ನಾಯಿ ,ದಾನ, ಚಿಂದಿ ಆಯುವವರು ರಸ್ತೆ ಮದ್ಯಕ್ಕೆ ಎಳೆಯುವುದನ್ನು ಕೂಡಾ ಗಮನಿಸದೆ ತಾವು ತಮ್ಮದು ಎಂಬಷ್ಟೇ ಭಾವನೆಗಳನ್ನು ಇಟ್ಟುಕೊಂಡಿದ್ದಾರೆ.
ಬೆಂಗಳೂರಿನ ಮಹದೇವಪುರ ಪ್ರದೇಶದ ಕೃಷ್ಣರಾಜಪುರಂ ಮೆಟ್ರೋ ಸ್ಟೇಷನ್ ಅಕ್ಕ ಪಕ್ಕದ ಬಿ ನಾರಾಯಣಪುರ ಮತ್ತು ಎ. ನಾರಾಯಣಪುರ ರಸ್ತೆ ಉದ್ದಕ್ಕೂ ಪುಟ್ ಪಾತ್ (ಕಾಲು ದಾರಿ) ಅತಿಕ್ರಮಣ ಮಾಡಲಾಗಿದ್ದು ಸಾರ್ವಜನಿಕರು ರಸ್ತೆ ನಡುವೆ ಓಡಾಡುವ ಪರಿಸ್ಥಿತಿ ಇದೆ. ಇದರಿಂದಾಗಿ ವಿಕಲಚೇತನರು ಇಂತಹ ರಸ್ತೆಯಲ್ಲಿ ಓಡಾಡುವುದು ದುಸ್ತರವಾಗಿದ್ದು ಈ ಅರೆಯಾಗಲು ೫೦ ವರ್ಷದ ಹಳೆಯ ಸ್ಥಿತಿಯಲ್ಲಿಯೇ ಇವೆ. ವಿದ್ಯುತ್ ಕಂಬಗಳು ತಲೆಗೆ ತಾಗುವಂತೆ ಮತ್ತು ನಡು ರಸ್ತೆಯಲ್ಲಿ ಇದ್ದು ಭಾರತದ ಆಧುನಿಕ ಪರಿಸ್ಥಿತಿ ನಗು ತರಿಸುವಂತಿದೆ.
ವಿಪರ್ಯಾಸವೇನೆಂದರೆ ರಸ್ತೆ ಬದಿಯಲ್ಲಿ ಕಸ ಹಾಕಿದರೆ ೨೦೦೦ ರೂಪಾಯಿ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ಬೋರ್ಡ್ ಹಾಕಿದರೂ ಸಾರ್ವಜನಿಕರು ಸ್ಕೂಟರ್ ಇತ್ಯಾದಿ ವಾಹನಗಳಲ್ಲಿ ಬಂದು ರಸ್ತೆ ಪಕ್ಕ ಕಸ ಎಸೆದು ಏನೂ ಆಗಲಿಲ್ಲವೆನ್ನುವಂತೆ ಅಷ್ಟೇ ರಭಸವಾಗಿ ಪರಾರಿಯಾಗುತ್ತಾರೆ. ಇದನ್ನು ತಪ್ಪಿಸಲು ಕ್ಯಾಮೆರಾ ಫೂಟೇಜ್ ಫೋಟೋವನ್ನು ಕಸ ಹಾಕಿದ ಜಾಗದಲ್ಲಿ ನೇತಾಡಿಸಿ ಎಚ್ಚರಿಕೆಯ ಭೀಕರತೆ ತೋರಿಸಿದರೂ ಜಪ್ಪಯ್ಯ ಎನ್ನದ ನಾರೀಕರ ಅನಾಗರಿಕತೆಗೆ ಹೇಸಿಗೆ ಪಡಬೇಕಾದ ಸ್ಥಿತಿ ಇಂದು ಬೆಂಗಳೂರಿನಾದ್ಯಂತ ಪಸರಿಸಿದೆ. ಇದರಿಂದ ವಾಯು ವಿಹಾರಿಗಳಿಗೆ, ಆರೋಗ್ಯ ಸಮಸ್ಯೆ ಇರುವವರಿಗೆ ನುಂಗಲಾರದ ತುತ್ತಾಗಿ ವಿವಿಧ ಸಮಸ್ಯೆಗಳು ಕಾಡುವಂತಾಗಿದೆ.
ಈ ಬಗ್ಗೆ ಹಲವಾರು ಪತ್ರಿಕೆಗಳಲ್ಲಿ ಫೋಟೋ ಸಮೇತ ಕಸ ಹಾಕುವವರಿಗೆ ಇಂಡಿಯನ್ ದಿವ್ಯಾಂಗ್ ಎಂಪವರ್ಮೆಂಟ್ ಅಸೋಸಿಯೇಷನ್ ಇದರ ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದರು ಹಲವಾರು ಸಲ ಸುದ್ದಿ ಪ್ರಕಟಿಸಿದ್ದರೂ ಇನ್ನೂ ಬರೀರಿ ಎನ್ನುವಂತೆ ಅವರು ಓಡಾಡುವ ಸಮಯಕ್ಕೆ ಸರಿಯಾಗಿ ಅವರ ಎದುರೇ ಕಸ ಹಾಕುವ ಉದ್ಧಟತನವನ್ನು ತೋರಿಸುತ್ತಿದ್ದಾರಲ್ಲದೆ ಪ್ರದೇಶದಲ್ಲಿ ಅರಾಜಕತೆಯನ್ನು ಬೆಳೆಸುವ ಮತ್ತೊಂದು ಘನಂದಾರಿ ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ನಗರ ಮಹಾ ಪಾಲಿಕೆ ಸೂಚನೆ ಕೊಟ್ಟು ಅದನ್ನು ಎಸ್ ಪಿ ಅವರು ಕಾರ್ಯಗತಗೊಳಿಸುವ ಸಮಯದಲ್ಲಿ ಇಲ್ಲಿಂದ ಇತ್ತೀಚೆಗೆ ಬೇರೆ ಕಡೆ ವರ್ಗಾವಣೆಯಾಗಿದ್ದಾರೆ ಅದರರ್ಥ ಫುಟ್ಪಾತ್ ಮೇಲೆ ಯಾವುದೇ ಹೆಸರಿನ ಬೋರ್ಡ್ ಗಳು ಇರಬಾರದು. ಇದು ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಅಂತ ತಿಳಿಸಿದ್ದಾರೆ .ಬಹಳಷ್ಟು ಘಟನೆಗಳನ್ನು ಇಲ್ಲಿವರೆಗೆ ನಡೆದಿದ್ದಾವೆ ಆದರೆ ಪುಟ್ ಪಾತ್ ಜಾಗದಲ್ಲಿ ಬೋರ್ಡ್ ಇಡುವುದು, ಅಂಗಡಿ ವಿಸ್ತರಿಸಿ ಮಾರಾಟದ ಸಾಮಾನು ಪುಟ್ ಪಾತ್ ಮೇಲೆ ಜೋಡಿಸಿ ಇಡುವುದು ಮಾಡುವುದರಿಂದ ಹಲವಾರು ಜನಕ್ಕೆ ತಗಲಿ ಗಾಯಗಳಾಗಿವೆ ಎಂದು ವರದಿಯಾಗಿದ್ದು ಈ ಘಟನೆ ಪಿ ಡಬ್ಲ್ಯೂ ಡಿ ರಸ್ತೆಯ ಅಕ್ಕ ಪಕ್ಕ ಮತ್ತು ಮೇನ್ ರಸ್ತೆಯಲ್ಲಿ ನಡೆಯುತ್ತಿದ್ದರೂ ಪೊಲೀಸರು ಕಣ್ಣು ಮುಚ್ಚಿ ಕುಳಿತಿರುವಂತಿದೆ. ಮುಖ್ಯ ರಸ್ತೆ ಪುಟ್ ಪಾತ್ ಮೇಲೆ ದೋಸೆ , ಮಸಾಲೆ ಮಂಡಕ್ಕಿ ತಯಾರಿಸುವುದು, ಮಾಂಸದ ಅಂಗಡಿ ವಿಸ್ತರಿಸುವುದು ಪ್ರತಿ ದಿನ ಕಾಣುತ್ತಿರುವ ದೃಶ್ಯದಿಂದ ಅಸಹ್ಯ ವಾತಾವರಣ ನಡೆದಿದೆ . ಈ ಸಂಬಂಧ ಸಾರ್ವಜನಿಕರು ಸಿಟ್ಟು ಮಾಡಿಕೊಂಡಿದ್ದು ಇದು ಎಷ್ಟರ ಮಟ್ಟಿಗೆ ಸರಿ, ಆದ್ದರಿಂದ ಇಡೀ ನಗರದಲ್ಲಿ ಫುಟ್ಪಾತಗಳಲ್ಲಿ ಯಾವುದೇ ಹೆಸರಿನ ಅವರವರ ಅಂಗಡಿ ಮುಂದೆ ಬೋರ್ಡ್ ಇಡುವುದಾಗಲಿ , ತರಕಾರಿ ವ್ಯಾಪಾರ ಮಾಡುವುದಾಗಲಿ, ದೋಸೆ ಅಂಗಡಿ ತೆರೆಯುವುದಾಗಲಿ ನಿರ್ಬಂಧಿಸಬೇಕಾಗಿದೆ. ಅಕಸ್ಮಾತ್ ಪುಟ್ಪಾತಿನಲ್ಲಿ ಜಾಹೀರಾತು ಬೋರ್ಡ್ ಕಂಡು ಬಂದು ಅದರಿಂದ ಯಾವುದೇ ಅನಾಹುತ ಆಗಿದ್ದರೆ ಅದಕ್ಕೆ ಸಂಬಂಧಿಸಿದ ಅಂಗಡಿ ಮಾಲಕರು ಜವಾಬ್ದಾರರಾಗ ಬೇಕಾಗಿದೆ ಎಂದು ಸಾರ್ವಜನಿಕರ ಪರವಾಗಿ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಇವರು ವಿನಂತಿಸಿದ್ದಾರೆ.
- ಕರುನಾಡ ಕಂದ ಪತ್ರಿಕೆ



















