ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಗಾಯಿತ್ರಿ ವಿದ್ಯಾ ಮಂದಿರದಲ್ಲಿ ವಿಶೇಷ ಮಹಿಳಾ ದಿನಾಚರಣೆ ಕಾರ್ಯಕ್ರಮ.

ಸಿರುಗುಪ್ಪ – ನಗರದ ಗಾಯಿತ್ರಿ ವಿದ್ಯಾ ಮಂದಿರದಲ್ಲಿ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ದಿನಾಚರಣೆಯನ್ನು ಏರ್ಪಡಿಸಿದ್ದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನಿರೂಪಕರು ಹಾಸ್ಯ ಕಲಾವಿದರು ಜೆ. ನರಸಿಂಹಮೂರ್ತಿ ಮಾತನಾಡಿ ರಾಷ್ಟ್ರದ ಶಕ್ತಿ ಮಹಿಳಾ ಶಕ್ತಿ ಅದಕ್ಕೆ ಸರ್ಕಾರಗಳು ಮಹಿಳೆಯರ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ಹಮ್ಮಿಕೊಂಡಿದೆ.
ಭ್ರೂಣ ಹತ್ಯೆ ತಡೆಯಿರಿ, ಇಂದಿನ ದಿನಗಳಲ್ಲಿ ಯುವಕರಿಗೆ ಕನ್ಯೆಗಳು ಸಿಗದೇ ಹೆಣ್ಣಿನ ಅನುಪಾತ ಕಡಿಮೆಯಾಗಿ ಪರಿತಪಿಸುವಂಥಾಗಿದೆ. ಆದ್ದರಿಂದ ಹೆಣ್ಣು ಹುಟ್ಟಿದಾಗ, ಸಂತೋಷ ಸಂಭ್ರಮದಿಂದ ಬರಮಾಡಿಕೊಳ್ಳಿ. ಮಹಿಳೆಯರು ಮನೆಯಲ್ಲಿ ಜಾಗೃತರಾಗಿ ಮಕ್ಕಳನ್ನು ದುಶ್ಚಟಗಳಿಂದ ದೂರವಿರಲು ಪ್ರೇರೇಪಣೆ ನೀಡಿ ಒಬ್ಬ ಉತ್ತಮ ಮಹಿಳೆ ಉತ್ತಮ ಕುಟುಂಬ ಸಮಾಜವನ್ನು ನಿರ್ಮಿಸಬಲ್ಲಳು ಎಂದು ತಿಳಿಸಿದರು.
ವಿಶೇಷವೆಂದರೆ ಈ ದಿನ ಮಹಿಳೆಯರಿಗೆ ಗಾಯಿತ್ರಿ ಶಾಲೆಯು ಸನ್ಮಾನ ಹಮ್ಮಿಕೊಂಡಿದ್ದು ಆದರ್ಶ ಅಂಗನವಾಡಿ ಶಿಕ್ಷಕಿಯಾಗಿ ಬಡತನದಲ್ಲಿ ಬದುಕು ರೂಪಿಸಿಕೊಂಡ ಉತ್ತಮ ಕೆಲಸಗಾತಿ೯ಎಂದು ಅಧಿಕಾರಿಗಳಿಂದ ಹೆಸರು ಪಡೆದ ತಾಳೂರಿನ ಐದನೇ ಕೇಂದ್ರದ ಈರಮ್ಮನನ್ನು, ದೇಶನೂರಿನ ಅಂಗನವಾಡಿ ಕೇಂದ್ರದ ಸಹಾಯಕಿಯಾಗಿ ಊರಿನಲ್ಲಿ ಯಾರಿಗೆ ಹೆರಿಗೆ ನೋವಾದರೂ ತಕ್ಷಣವೇ ಅವರ ಮನೆಗೆ ತೆರಳಿ ಸುಸೂತ್ರ ಹೆರಿಗೆ ಮಾಡಿಸುವ ಕಲೆಯನ್ನು, ರೂಢಿಸಿಕೊಂಡಿರುವ ಹಾಗೂ ನೂರಾರು ಹೆರಿಗೆಗಳನ್ನು ಮಾಡಿಸಿದ ಅವರಿಂದ ಯಾವುದೇ ಪ್ರತಿಫಲವನ್ನು ಆಪೇಕ್ಷಿಸದ ನಾಗಮ್ಮನನ್ನು, ಆಶಾಕಾಯಾ೯ಕತೆ೯ಯಾಗಿ ಸಮಾಜ ಸೇವೆಗೆ ದುಡಿಯುತ್ತಿರುವ ಬಿಂದು ಇವರನ್ನು ಹಾಗೂ ಶಾಲೆಗಳಲ್ಲಿ, ಸಹಾಯಕಿಯಾಗಿ ಕಾರ್ಯನಿರ್ವಹಿಸಿದ ಸತ್ಯಮ್ಮನನ್ನು ಮಹಿಳಾ ಸಾಧಕಿಯರೆಂದು ಗುರುತಿಸಿ ಗೌರವಿಸಿದ್ದು ವಿಶೇಷವೆನಿಸಿತು.
ಗಾಯತ್ರಿ ಶಾಲೆಯ ಕಾರ್ಯದರ್ಶಿಗಳಾದ ನಸರೀನ ಸುಲ್ತಾನ ಮಾತನಾಡಿ ನಮ್ಮ ಶಾಲೆ ಇನ್ನು ಮುಂದೆ ಎಲೆ ಮರಿಯ ಕಾಯಿಯಾಗಿ ಕಾರ್ಯನಿರ್ವಹಿಸುವವರನ್ನು ಗುರುತಿಸಿ ಸನ್ಮಾನಿಸುತ್ತದೆ ಎಂದು ತಿಳಿಸಿದ್ದಲ್ಲದೆ ತಾವು ಇಂಥವರನ್ನು ಗುರುತಿಸಿದರೆ ತಮಗೆ ತಿಳಿಸಬೇಕೆಂದು ಹೇಳಿದರು ಶಾಲೆ ಕಟ್ಟಿ ಬೆಳೆಸಿದ ನಸರೀನ ಅವರಿಗೆ ಶಿಕ್ಷಣ ಮಹಿಳಾ ಸಾಧಕಿ ಎಂದು ಗೌರವಿಸಿ ಸನ್ಮಾನಿಸಲಾಯಿತು. ಅಧ್ಯಕ್ಷರಾದ ಶಕೀಲ್ ರವರು ಶಿಕ್ಷಕರು ಹಾಗೂ ಆಡಳಿತ ಮಂಡಳಿ ಸದಸ್ಯರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಮೈನಾವತಿ ಇವರಿಗೂ ಸನ್ಮಾನ ಮಾಡಲಾಯಿತು.

ವರದಿ : ಮಸೀದಿ.ಅಬ್ದುಲ್ ಗೌಸ್. ಸಿರುಗುಪ್ಪ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!