ಬಳ್ಳಾರಿ / ಕಂಪ್ಲಿ : ಕಂಪ್ಲಿ ಬಾಲಕಿಯರ ಸರ್ಕಾರಿ
ಪದವಿಪೂರ್ವ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಸೋಮವಾರ ನಡೆದ ದ್ವಿತೀಯ ಪಿಯುಸಿ ಮೂಲ ಗಣಿತ ವಿಷಯಕ್ಕೆ ಒಬ್ಬ ವಿದ್ಯಾರ್ಥಿ ಪರೀಕ್ಷೆ ಬರೆದಿದ್ದು, 12 ಸಿಬ್ಬಂದಿ ಕಾರ್ಯನಿರ್ವಹಿಸಿದರು.
ತಾಲ್ಲೂಕಿನ ಎಮ್ಮಿಗನೂರು ಗ್ರಾಮದ ವಿದ್ಯಾರ್ಥಿ ಸಾಯಿ ಪುನೀತ್ ‘ಮೂಲ ಗಣಿತ’ ಪರೀಕ್ಷೆಗೆ ಏಕೈಕ ಪರೀಕ್ಷಾರ್ಥಿಯಾಗಿ ನೋಂದಾಯಿಸಿಕೊಂಡಿದ್ದರು.
ಈ ಪರೀಕ್ಷಾರ್ಥಿಗೆ ಮುಖ್ಯ ಅಧೀಕ್ಷಕ ಎನ್.ಮಾರೆಪ್ಪ, ಸಹ ಮುಖ್ಯ ಅಧೀಕ್ಷಕ ಶಿವಪ್ಪ, ಕಚೇರಿ ಅಧೀಕ್ಷಕ ಜಗದೀಶ, ಜಾಗೃತ ದಳ ಸದಸ್ಯರಾದ ಜಗದೀಶ್, ಗಜೇಂದ್ರ, ಉತ್ತರ ಪತ್ರಿಕೆ ಪಾಲಕ ಪೆದ್ದ ಸುಬ್ಬಣ್ಣ ಸೇರಿ 12 ಮಂದಿ ಕಾರ್ಯ ನಿರ್ವಹಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್



















