
ಶ್ರೀಮತಿ ಶೋಭಾಸತೀಶ್ ಇವರು ಬಹುಮುಖ ಪ್ರತಿಭೆಯ ಕಣ್ಮಣಿ. ನಗು ಮೊಗದ ಶೋಭಾ ಅವರು ಯತಿರಾಜ್ ಕೆ. ಬಿ ಮತ್ತು ಎಸ್ ಇಂದುಮತಿ ದಂಪತಿಗಳ ಮಗಳಾಗಿ 10/06/1978 ರಲ್ಲಿ ಜನಿಸಿದರು.
ಪ್ರಾರ್ಥಮಿಕ ಶಿಕ್ಷಣ: ಸ.ಹಿ. ಪ್ರಾ.ಆವಿನಹಳ್ಳಿ ಹಾಗೂ
ಪ್ರೌಢ ಶಿಕ್ಷಣ: ಸರ್ಕಾರಿ ಪ್ರೌಢಶಾಲೆ ಆವಿನಹಳ್ಳಿಯಲ್ಲಿ ಜೊತೆಗೆ
ಪದವಿ ಶಿಕ್ಷಣ ಕೂಡ ಸರ್ಕಾರಿ ಪದವಿ ಪೂರ್ವ ಕಾಲೇಜು ಆವಿನಹಳ್ಳಿಯಲ್ಲಿ ಪಡೆದು ಕೊಂಡಿದ್ದಾರೆ.
ಸ್ನಾತಕೋತ್ತರ ಪದವಿ: BA.MA ಮಾನಸಗಂಗೋತ್ರಿ ವಿದ್ಯಾನಿಲಯ ಮೈಸೂರನಲ್ಲಿ ಪೂರೈಸಿದ್ದಾರೆ.
ಕಥೆ,ಕವನ ,ಚುಟುಕು,ರುಬಾಯಿ,ಟಂಕ ಭಾಷಣ, ನಿರೂಪಣೆ ,ಸಂಗೀತ, ಸಾಮಾಜ ಸೇವೆಯಂತಹ ಅತ್ಯುತ್ತಮ ಹವ್ಯಾಸಗಳನ್ನು ರೂಢಿಸಿಕೊಂಡಿದ್ದಾರೆ.
ಸರಳ ಸಜ್ಜನಿಕೆಯ ಸತೀಶ್ ಅವರೊಂದಿಗೆ ವಿವಾಹವಾಗುತ್ತಾರೆ. ಬಾಲ್ಯದ ಕನಸಿನಂತೆ ಸರ್ಕಾರಿ ಶಾಲೆಗಳಲ್ಲಿಯೇ ವಿದ್ಯಾಭ್ಯಾಸವನ್ನು ಮುಗಿಸಿ 1 /8/2002 ರಂದು ಪ್ರಥಮ ಬಾರಿ ಸಿ.ಇ.ಟಿ ಪರೀಕ್ಷೆಯಲ್ಲಿ ಪ್ರಥಮ ಹಂತದಲ್ಲಿ ಜ್ಯೋತಿ ನಗರ ಎಂಬ ಸರ್ಕಾರಿ ಶಾಲೆಗೆ ಶಿಕ್ಷಕಿಯಾಗಿ ನೇಮಕಗೊಂಡರು. ಪುಟ್ಟಗುಡಿಸಿಲಿನಲ್ಲಿ ಪಾಠ ಪ್ರವಚವನ್ನು ಪ್ರಾರಂಭಿಸಿ ಗ್ರಾಮದವರ ಇಲಾಖೆಯ ಎಲ್ಲರ ಸಹಕಾರದೊಂದಿಗೆ ಸುಸಜ್ಜಿತ ಸಕಲ ಸೌಲಭ್ಯಗಳುಳ್ಳ ಕಟ್ಟಡ ನಿರ್ಮಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ ಮಕ್ಕಳಿಗೆ ಪಾಠ ಪ್ರವಚನಗಳೊಂದಿಗೆ ಪ್ರತಿಭಾ ಕಾರಂಜಿ ಕಲಿಕೋತ್ಸವದೊಂದಿಗೆ ವಿವಿಧ ಸಂಸ್ಥೆಗಳು ಆಯೋಜಿಸುವ ಕಥೆ, ಕವನ, ಚಿತ್ರಕಲೆ ,ಭಾಷಣ, ಛದ್ಮವೇಷ, ಭಾವಗೀತೆ, ಭಕ್ತಿಗೀತೆ, ಜನಪದ ಗೀತೆ, ಏಕಪಾತ್ರ ಅಭಿನಯ, ರೇಡಿಯೋ ಕಾರ್ಯಕ್ರಮ ರಸಪ್ರಶ್ನೆಗಳಲ್ಲಿ ಎಲ್ಲಾ ಮಕ್ಕಳು ಭಾಗವಹಿಸಿ ಬಹುಮಾನ ಗಳಿಸಿ ವಿವಿಧ ಕ್ಷೇತ್ರದಲ್ಲಿ ತಮ್ಮದೇ ಆದ ಚಾಪನ್ನು ಅಂತರಾಷ್ಟ್ರೀಯಮಟ್ಟದವರಿಗೂ ಮೂಡಿಸಿರುವುದು ಹಾಗೂ ಇವೆಲ್ಲವುಗಳಿಗೆ ಪೋಷಕರು ಕೂಡ ಭಾಗವಹಿಸಿಸುತ್ತಿರುವುದು ಇವರ ವೃತ್ತಿ ಬದುಕಿನ ಒಂದು ಮೈಲಿಗಲ್ಲೆ ಆಗಿದೆ. ಸತತ 23 ವರ್ಷಗಳ ಕಾಲ ಅಲ್ಲಿಯೆ ಸೇವೆ ಸಲ್ಲಿಸುತ್ತಿರುವುದರಿಂದ ಮನೆ ಮಗಳಂತೆ ಕಾಣುವ ಅಲ್ಲಿನ ಜನ ಸಮುದಾಯದೊಂದಿಗೆ ಸೇರಿ ಇಡೀ ಶಿವಮೊಗ್ಗ ಜಿಲ್ಲೆಯಲ್ಲಿಯೆ ಆ ಶಾಲೆಯನ್ನು ಗುರುತಿಸುವಂತೆ ಮಾಡಿರುವುದು ಇವರ ವಿಶೇಷವಾದ ಕಾರ್ಯವಾಗಿದೆ. ಮುಖ್ಯೋಪಾಧ್ಯಾಯರ ಸಹಕಾರದೊಂದಿಗೆ ಭೌತಿಕವಾಗಿ ಹಲವಾರು ವಸ್ತುಗಳನ್ನ ದಾನಿಗಳಿಂದ ಸಂಗ್ರಹಿಸಿ ಶಾಲೆಯ ಸರ್ವತೋಮುಖ ಬೆಳವಣಿಗೆಗೆ ಪ್ರತಿಯೊಬ್ಬರೂ ಶ್ರಮಿಸುವಂತೆ ಮಾಡಿದ್ದಾರೆ. ಪ್ರತಿ ವಿದ್ಯಾರ್ಥಿಗೂ ಕೂಡ ಗುಣಾತ್ಮಕ ಶಿಕ್ಷಣವನ್ನು ನೀಡಲು ಇಲಾಖೆಯ ಎಲ್ಲಾ ಚಟುವಟಿಕೆಗಳನ್ನು ಶಿಕ್ಷಕರ ಸಹಭಾಗಿತ್ವದೊಂದಿಗೆ ಚಟುವಟಿಕೆ ಆಧಾರಿತವಾಗಿ ಬೋಧಿಸಿ ಯಶಸ್ವಿಯಾಗಿದ್ದೇನೆ. ವಿಶೇಷವಾದ ಆಸಕ್ತಿದಾಯಕ ನಾವಿನ್ಯತೆಯುಳ್ಳ ಚಟುವಟಿಗಳಾದ ಕಥೆ .ಕವನ .ಚುಟುಕು .ಭಾಷಣ ಚಿತ್ರಕಲೆ ಭಾಷಣ . ಇಂತಹ 10 ಹಲವಾರು ಚಟುವಟಿಕೆಗಳಲ್ಲಿ ಮಕ್ಕಳು ಹಾಗೂ ಪೋಷಕರು ಮುಕ್ತವಾಗಿ ಭಾಗವಹಿಸುವಂತೆ ತಯಾರುಗೊಳಿಸಿದ್ದಾರೆ,ಹಾಗೆಯೇ ನಮ್ಮ ಶಾಲೆಯ ವಿದ್ಯಾರ್ಥಿಗಳನ್ನು ನಿರಂತರವಾಗಿ ಕಲಿಕೆಯಲ್ಲಿ ತೊಡಗಿಸುತ್ತಾ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಅಂತರಾಷ್ಟ್ರೀಯ ಮಟ್ಟದವರೆಗೂ ಪ್ರಖ್ಯಾತಿಯಾಗುವಂತೆ ಮಾಡಿದ್ದಾರೆ. ಅದೆಷ್ಟು ಸ್ಪರ್ಧೆಗಳಲ್ಲಿ ಪ್ರಥಮ ಬಹುಮಾನವನ್ನು ಗಳಿಸಿ ವಿವಿಧ ಪತ್ರಿಕೆಗಳಲ್ಲಿ ಇವರ ವಿದ್ಯಾರ್ಥಿಗಳು ರಾರಾಜಿಸಿದ್ದು ಇಡೀ ಗ್ರಾಮಕ್ಕೆ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಹಾಗೆಯೇ ಕಳೆದ ಆಗಸ್ಟ್ 8ರಂದು ಸ.ಹಿ.ಪ್ರಾ ಶಾಲೆ ಚಿಲಕಾದ್ರಿಹಳ್ಳಿಗೆ ಪರಸ್ಪರ ವರ್ಗಾವಣೆಯ ಮೂಲಕ ಬಂದಿದ್ದು ಅಲ್ಲಿನ ಇಡೀ ಶಿಕ್ಷಕ ತಂಡದ ಸಹಕಾರದೊಂದಿಗೆ ಸಮುದಾಯದ ಸಹಕಾರದೊಂದಿಗೆ ನಿರಂತರ ಕಲಿಕೆಯೊಂದಿಗೆ ಕಥೆ ಕವನ ಭಾಷಣ ಒಗಟು ಗಾದೆ ಮಾತುಗಳು ಚಿತ್ರಕಲೆ ಕಿರು ನಾಟಕ ಹೀಗೆ ಹತ್ತು ಹಲವಾರು ಚಟುವಟಿಕೆಗಳಲ್ಲಿ ಪಠ್ಯಪೂರಕವಾಗಿ ಬಳಸಿಕೊಂಡು ಮಕ್ಕಳು ಅತ್ಯಂತ ಕ್ರಿಯಾಶೀಲವಾಗಿ ಭಾಗವಹಿಸುವಂತೆ ಪ್ರೇರೇಪಿಸಿದ್ದಾರೆ . ಮಕ್ಕಳನ್ನು ತಯಾರುಗೊಳಿಸುತ್ತಾ… ಇವರು ಕೂಡ ಯುವ ಬರಹಗಾರಳಾಗಿ ಅನೇಕ ಕಥೆ ಕವನ ಚುಟುಕು ಹನಿಗವನಗಳನ್ನ ಸ್ವರಚಿತವಾಗಿ ರಚಿಸಿದ್ದಾರೆ. ಗ್ರೀಕ್ ಸಾಹಿತ್ಯ ಪ್ರಕಾರಗಳಾದ ಹಾಯ್ಕು, ಟಂಕ ರುಬಾಯಿಗಳನ್ನ ಕೂಡ ಬರೆದಿದ್ದಾರೆ .
ಪುಸ್ತಕ ರೂಪವಾಗಿ ಹೊರಬಂದ ಶೋಭಾ ಅವರ ಬರಹಗಳು
ಸಂಕ್ರಾಂತಿ ಸಂಪ್ರೀತಿ
ಕರುನಾಡ ಕಲಿಗಳ ಕಥನ
ಕಪ್ಪುನಾಡಿನ ಸಾವಿರಾರು ನದಿಗಳು
ನೆನಪುಗಳು
ಶಿವಮೆಚ್ಚಿದ ಬೆಟ್ಟದ ಹೂ
ಸಂಬಂಧಗಳು
ಅನನ್ಯ ರತ್ನ
ಶೋಭಾ ಅವರ ಕಾರ್ಯ ದಕ್ಷತೆಗೆ ಹರಸಿ ಬಂದ ಪ್ರಶಸ್ತಿಗಳು.
1.ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ 2023
- ಉತ್ತಮ ಶಿಕ್ಷಕಿ ಪ್ರಶಸ್ತಿ ರೋಟರಿ ಕ್ಲಬ್ ಶಿವಮೊಗ್ಗ
3 ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಕರ್ನಾಟಕ ಸಾಹಿತ್ಯ ಪರಿಷತ್ತು ಶಿವಮೊಗ್ಗ
4 ಶಿಕ್ಷಕರತ್ನ ಪ್ರಶಸ್ತಿ ತಾಯಿ ಮಡಿಲು ಸಂಸ್ಥೆ ಭದ್ರಾವತಿ
5 ಮಕ್ಕಳ ಮೆಚ್ಚಿದ ಶಿಕ್ಷಕಿ ಪ್ರಜ್ಞಾ ಸಂಸ್ಥೆ ಕಲ್ಬುರ್ಗಿ
6 ಕ್ರಿಯಾ ಶೀಲ ಶಿಕ್ಷಕಿ ಪ್ರಶಸ್ತಿ ವಾಸವಿ ಮಹಿಳಾ ಸಂಘ ವಿನೋಬನಗರ
7 ಸಾವಿತ್ರಿಬಾಯಿ ಪುಲೆ ಉತ್ತಮ
8 ಶಿಕ್ಷಣ ಸುಧೆ ಪ್ರಶಸ್ತಿ
ಭಾರತಾಂಬೆಭಾವಸುಧೆ ಸಂಸ್ಥೆ, ಶಿವಮೊಗ್ಗ
9 ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ
10.ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ಮೈಸೂರು
11.ಪಯಶ್ವಿನಿ ಅಚೈವ್ ಮೆಂಟ್ ಅವಾರ್ಡ್ 2006-ಕಾಸರಗೋಡಿನ ಕನ್ನಡ ಭವನ(ರಿ )ಅಂತಾರಾಜ್ಯ ಪ್ರಶಸ್ತಿ
ಶೋಭಾ ಅವರಿಗೆ ಭರತ್ ಮತ್ತು ಭೂಮಿಕಾ ಎಂಬ ಮುದ್ದು ಅವಳಿ ಮಕ್ಕಳಿದ್ದಾರೆ. ಆದ್ರೂ ಅವರು ಕಡು ಬಡತನದ ಹತ್ತಾರು ಮಕ್ಕಳನ್ನು ದತ್ತು ತೆಗೆದುಕೊಂಡು ಇವರ ಸ್ವಂತ ಖರ್ಚಿನಲ್ಲಿ ಶಿಕ್ಷಣ ಕೊಡಿಸುತ್ತಿದ್ದಾರೆ. ಕೊರೋನ ಸಮಯದಲ್ಲಿ ಕ್ರೂರ ವಿಧಿಯು ಇವರ ಪತಿಯನ್ನು ಬಲಿ ಪಡೆದದ್ದು ತುಂಬಾ ಸಂಗತಿಯಾಗಿದೆ. ಜೀವನದಲ್ಲಿ ಎದುರಾದ ಸಂಕಷ್ಟಕ್ಕೆ ಎದೆಗುಂದದೆ ಹುಟ್ಟಿದ ಮನೆ ಮೆಟ್ಟಿದ ಮನೆಯ ಎಲ್ಲರೊಂದಿಗೆ ಖುಷಿಯಿಂದ ಬೆರೆಯುತ್ತ ಬಾಳ ಪಯಣ ಮುನ್ನೆಡೆಸುತ್ತಿದ್ದಾರೆ. ಅಷ್ಟೇ ಅಲ್ಲದೆ ತುಂಬಾ ಸಂಕಷ್ಟದಲ್ಲಿರುವ ಸಾಕಷ್ಟು ಮಹಿಳೆಯರಿಗೆ ಆರ್ಥಿಕವಾಗಿ ಕೈಲಾದ ಸಹಾಯ ಮಾಡಿ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಲು ಸೂಕ್ತ ಸಲಹೆಯೊಂದಿಗೆ ನೇರವಾಗಿದ್ದಾರೆ. ಶಿವಮೊಗ್ಗದ ಹಲವು ಸಂಘಟನೆಗಳಿಗೆ ಸಕ್ರಿಯ ಸಂಘಟಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶೋಭಾ ಅವರು ಯಾರಿಗೆ ಯಾವುದೇ ಸಹಾಯ ಮಾಡಿದರೂ ಅದನ್ನು ಯಾರೊಂದಿಗೂ ಹೇಳಿಕೊಳ್ಳುವುದಿಲ್ಲ ಇದುವೆ ಅವರ ನಿಸ್ವಾರ್ಥ ಸಹಾಯಗುಣಕ್ಕೆ ಸಾಕ್ಷಿಯಾಗಿದೆ. ಶ್ರೀಮತಿ ಶೋಭಾ ಸತೀಶ್ ಇವರಿಂದ ಇನ್ನೂ ಸಾಕಷ್ಟು ಸಮಾಜ ಮುಖಿ ಕೆಲಸಗಳು ಆಗಲಿ, ಹತ್ತು ಹಲವು ಪ್ರಶಸ್ತಿಗಳು ಅವರ ಮಡಿಲು ತುಂಬುತ್ತಿರಲಿ ಎಂದು ಶುಭ ಹಾರೈಸೋಣ. ಶೋಭಾ ಅವರ ಬಗ್ಗೆ ಎಷ್ಟು ಬರೆದರೂ ಕೇವಲ ಸಂಬಳಕ್ಕಾಗಿ ದುಡಿಯುತ್ತಿರುವ ಶಿಕ್ಷಕರೇ ಹೆಚ್ಚು ಆದರೆ ಶೋಭಾ ಅವರು ಶಿಕ್ಷಣಸೇವೆಯೇ ಉಸಿರಾಗಿಸಿಕೊಂಡು ಅದಕ್ಕಾಗಿ ಅವಿರತ ಶ್ರಮಿಸುತ್ತಿದ್ದಾರೆ.ಸಾಲದು ಅವರ ಕಾರ್ಯವೈಖರಿಗೆ ಅವರ ವಿದ್ಯಾರ್ಥಿಗಳ ಸಾಧನೆಯೇ ಕೈ ದೀವಿಗೆಯಾಗಿದೆ. ಶೋಭಾರವರು ಸದಾ ಉತ್ಸಾಹದ ಚಿಲುಮೆಯಾಗಿದ್ದು ಮಕ್ಕಳಲ್ಲಿ ಎಲ್ಲಾ ರೀತಿಯ ಅರಿವು ಮೂಡಿಸುವ ಚಟುವಟಿಕೆ ಮಾಡುತ್ತಿರುತ್ತಾರೆ. ಅವರ ಸಮರ್ಪಣ ಸೇವಾ ಮನೋಭಾವನೆ ಸರ್ವರಿಗೂ ಪ್ರೇರಣೆಯ ಪ್ರತೀಕವಾಗಿದೆ. ಪ್ರತಿಯೊಬ್ಬ ಶಿಕ್ಷಕರು ಇವರಂತೆ ಇದ್ದರೆ ಮಕ್ಕಳು ಒಳ್ಳೆಯವರಾಗಿ ಮುಂದೆ ನಾಡಿನ ಉತ್ತಮ ಉತ್ತಮ ಪ್ರಜೆಗಳಾಗಿ ಎಲ್ಲೆಡೆ ನೆಮ್ಮದಿ ನೆಲೆಸುತ್ತದೆ ಎಂದು ನಿಸ್ಸಂದೇಹವಾಗಿ ಹೇಳಬಹುದು. ✍️ಭವ್ಯ ಸುಧಾಕರ ಜಗಮನೆ.



















