
ಬೆಂಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (ರಿ.) ಇದರ ಸರ್ವ ಸದಸ್ಯರ ಸಭೆಯು ಇದೇ ಬರುವ ದಿನಾಂಕ 15.03.2026ರ ಭಾನುವಾರ ಬೆಳಿಗ್ಗೆ 10.30ರಿಂದ ಶ್ರೀ ಚಂದ್ರಶೇಖರ ಭಾರತೀ ಕಲ್ಯಾಣ ಮಂಟಪ, ಶಂಕರಪುರಂ, ಪಂಪ ಮಹಾ ಕವಿ ರಸ್ತೆ, ಬೆಂಗಳೂರು 560004 ಇಲ್ಲಿ ಜರುಗುವುದಿದ್ದು ಮಹಾಸಭಾ ಅಧ್ಯಕ್ಷ ಶ್ರೀ ಎಸ್ ರಘುನಾಥ್ ಇವರು ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ಮಹಾಸಭೆಯ ಸದಸ್ಯರು ಸಮಯಕ್ಕೆ ಸರಿಯಾಗಿ ಕಾರ್ಯಕಲಾಪದಲ್ಲಿ ಭಾಗವಹಿಸಿ ಬ್ರಾಹ್ಮಣ ಸಂಘಟನೆಯನ್ನು ಬಲಪಡಿಸಬೇಕೆಂದು ಶ್ರೀ ರಘುನಾಥ್ ಅವರು ವಿನಂತಿಸಿದ್ದಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ/ಬೆಂಗಳೂರು.




















