ಹನೂರು :ಆರ್. ಧ್ರುವ ನಾರಾಯಣ್ ಅವರ 3ನೇ ವರ್ಷದ ಪುಣ್ಯ ಸ್ಮರಣೆಯ ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡರಾದ ಪ್ರದೀಪ್ ಕುಮಾರ್ ಅವರು ಧ್ರುವ ನಾರಾಯಣ್ ಅವರ ಸೇವೆ ಮತ್ತು ಜನಪರ ಕಾರ್ಯಗಳನ್ನು ಸ್ಮರಿಸಿ ಅವರಿಗೆ ಗೌರವ ನಮನ ಸಲ್ಲಿಸಿದರು. ಸಮಾಜದ ಅಭಿವೃದ್ಧಿಗಾಗಿ ಅವರು ಮಾಡಿದ ಸೇವೆ ಸದಾ ಸ್ಮರಣೀಯವಾಗಿರುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರದೀಪ್ ಕುಮಾರ್ ಅವರು ಮಾತನಾಡಿ, ಧ್ರುವ ನಾರಾಯಣ್ ಅವರು ಜನಸಾಮಾನ್ಯರ ಸಮಸ್ಯೆಗಳಿಗೆ ಸದಾ ಸ್ಪಂದಿಸಿದ ಸರಳ ಮತ್ತು ಜನಪರ ನಾಯಕರು ಎಂದು ಹೇಳಿದರು. ಸಮಾಜದ ಹಿತಕ್ಕಾಗಿ ಅವರು ಮಾಡಿದ ಸೇವೆ ಮತ್ತು ಅಭಿವೃದ್ಧಿ ಕಾರ್ಯಗಳು ಎಲ್ಲರಿಗೂ ಮಾದರಿಯಾಗಿವೆ ಎಂದು ಹೇಳಿದರು.
ಧ್ರುವ ನಾರಾಯಣ್ ಅವರು ರಾಜಕೀಯ ಜೀವನದಲ್ಲಿ ಸದಾ ಪ್ರಾಮಾಣಿಕತೆ ಮತ್ತು ಜನಸೇವೆಯನ್ನು ಮುಖ್ಯವಾಗಿಟ್ಟುಕೊಂಡು ಕಾರ್ಯನಿರ್ವಹಿಸಿದ್ದರು. ಅವರ ಸೌಮ್ಯ ಸ್ವಭಾವ, ಜನರೊಂದಿಗೆ ಹೊಂದಿದ್ದ ಆತ್ಮೀಯತೆ ಮತ್ತು ಸೇವಾ ಮನೋಭಾವವನ್ನು ಜನರು ಇನ್ನೂ ಸ್ಮರಿಸುತ್ತಿದ್ದಾರೆ. ಅವರ ಆದರ್ಶಗಳು ಯುವ ಪೀಳಿಗೆಗೆ ದಾರಿದೀಪವಾಗಲಿ ಎಂದು ಪ್ರದೀಪ್ ಕುಮಾರ್ ಅವರು ಆಶಿಸಿದರು.
ವರದಿ: ಉಸ್ಮಾನ್ ಖಾನ್




















