ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಂಪ್ಲಿಯಲ್ಲಿ ಸೋಮನಾಥ ಜ್ಯೋರ್ತೀಲಿಂಗ ದರ್ಶನ ಹಾಗೂ ಸಾಮೂಹಿಕ ರುದ್ರಪೂಜೆ

ಬಳ್ಳಾರಿ / ಕಂಪ್ಲಿ : ಸುಮಾರು ಒಂದು ಸಾವಿರ ವರ್ಷಗಳಷ್ಟು ಪುರಾತನವಾದ ಸೋಮನಾಥ ಜ್ಯೋರ್ತೀಲಿಂಗದ ದರ್ಶನ ಮತ್ತು ಸಾಮೂಹಿಕ ರುದ್ರಪೂಜೆಯನ್ನು ಕಂಪ್ಲಿ ಪಟ್ಟಣದ ಶ್ರೀ ಪೇಟೆ ಬಸವೇಸ್ವರ ದೇವಸ್ಥಾನ ಮತ್ತು ಕುರುಗೋಡು ರಸ್ತೆಯಲ್ಲಿರುವ ಕಮ್ಮವಾರಿ ಸಮುದಾಯ ಭವನದಲ್ಲಿಂದು ಏರ್ಪಡಿಸಲಾಗಿತ್ತು. ರಾಜ್ಯದಲ್ಲಿ ಈಗಾಗಲೇ ಮೊದಲನೇ ಹಂತದ ಸೋಮನಾಥ ಜ್ಯೋರ್ತೀಲಿಂಗ ದರ್ಶನ ಮತ್ತು ಸಾಮೂಹಿಕ ರುದ್ರಪೂಜೆಯನ್ನು ಯಶಸ್ವಿಯಾಗಿ ನಡೆಸಿದ್ದು, ಎರಡನೇ ಹಂತದ ಸೋಮನಾಥ ಜ್ಯೊರ್ತೀಲಿಂಗ ದರ್ಶನ ಹಾಗೂ ಸಾಮೂಹಿಕ ರುದ್ರಪೂಜೆಯುವ ಯಾದಗಿರಿಯಿಂದ ಆರಂಭವಾಗಿದ್ದು, ಕಂಪ್ಲಿ ಪಟ್ಟಣಕ್ಕೆ ಆಗಮಿಸಿತು. ಪಟ್ಟಣಕ್ಕೆ ಆಗಮಿಸಿದ ಸೋಮನಾಥ ಜ್ಯೋರ್ತೀಲಿಂಗವನ್ನು ಪೇಟೆ ಬಸವೇಶ್ವರ ದೇವಸ್ಥಾನದ ಪದಾಧಿಕಾರಿಗಳು ಅದ್ದೂರಿಯಂದ ಸ್ವಾಗತಿಸಿ ಸಭಾಂಗಣದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಯಿತು. ಪಟ್ಟಣದ ಭಕ್ತರು ಸಾಲಾಗಿ ಆಗಮಿಸಿ ಸೋಮನಾಥ ಜ್ಯೋರ್ತೀಲಿಂಗಕ್ಕೆ ಪೂಜೆಯನ್ನು ಸಲ್ಲಿಸಿ ಧರ್ಶನ ಭಾಗ್ಯವನ್ನು ಪಡೆದರು. ನಂತರ ಸಕಲ ಸದ್ಭಕ್ತರಿಗೆ ಪ್ರಸಾದವನ್ನು ವಿತರಿಸಿದರು. ನಂತರ ಸೋಮನಾಥ ಜ್ಯೊರ್ತಿಲಿಂಗವವನ್ನು ಮೆರವಣಿಗೆಯ ಮೂಲಕ ಕುರುಗೋಡು ರಸ್ತೆಯ ಕಮ್ಮವಾರಿ ಸಮುದಾಯ ಭವನಕ್ಕೆ ಬರಮಾಡಿಕೊಂಡು ಅಲ್ಲಿ ವಿಶೇಷ ವೇದಿಕೆಯಲ್ಲಿ ಬೆಂಗಳೂರು ಆರ್ಟ ಅಪ್ ಲಿವೀಂಗ್ ಆಶ್ರಮದ ಸಾಧ್ವಿ ಸ್ವಾಮಿ ಶರಣನಂದ ನೇತೃತ್ವದಲ್ಲಿ ಸೋಮನಾಥ ಜ್ಯೋರ್ತೀಲಿಂಗಗಳನ್ನು ಪ್ರತಿಷ್ಠಾಪಿಸಿ ವಿಶೇಷಪೂಜೆಯನ್ನು ಸಲ್ಲಿಸುವ ಜೊತೆಗೆ ಅನೇಕ ದಂಪತಿಗಳು ಸಾಮೂಹಿಕ ರುದ್ರಪೂಜೆಯನ್ನು ನೆರವೇರಿಸಿದರು. ನಂತರ ಸಂಕಲ್ಪಮಾಡಿದ ದಂಪತಿಗಳಿಗೆ ಸೋಮನಾಥ ಜ್ಯೋರ್ತೀಲಿಂಗದ ಪ್ರಸಾದವನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕೆಎಸ್‌ಎಸ್‌ವಿಬಿ ಅಧ್ಯಕ್ಷ ಸುಬ್ಬಾರಾವ್, ಬಿಎಸ್‌ವಿ ಸಂಸ್ಥೆಯ ಅಧ್ಯಕ್ಷ ಕಲ್ಗುಡಿ ವಿಶ್ವನಾಥ, ಮುಖಂಡರಾದ ಕೆ.ರವಿಚಂದ್ರ, ಎ.ತಾಂಡವ ಕೃಷ್ಣ, ಬಿ.ಜಡೇಶ, ಎ.ಜಮಾ ಮಹೇಶ್ವರಾವ್, ಎ.ಚಂದ್ರಶೆಖರ, ಶಿಕ್ಷಕರಾದ ಕೆ.ರಜನಿ, ಎ.ಸುನೀತಾ, ಮಹೇಶಬಾಬು ಹಾಗೂ ಪೇಟೆ ಬಸವೇಶ್ವರೆ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಹಾಗೂ ಕಮ್ಮವಾರಿ ಸಂಘದ ಪದಾಧಿಕಾರಿಗಳು, ವಿವಿಧ ಸಮಾಜಗಳ ಮುಖಂಡರು, ಮಹಿಳೆಯರು ಮತ್ತು ತಾಲೂಕಿನ ಸಲಕ ಸದ್ಭಕ್ತರು ಭಾಗವಹಿಸಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!