ಬಳ್ಳಾರಿ / ಕುರುಗೋಡು : ಪಟ್ಟಣದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿದ್ದ ಮಾಲಾ ಗೆಣಿಕೆಹಾಳ್ ಎಂಬ ವಿದ್ಯಾರ್ಥಿನಿ ಇಂದು ಶುಕ್ರವಾರ ನಡೆಯುತ್ತಿದ್ದ ರಾಜ್ಯಶಾಸ್ತ್ರ ವಿಷಯದ ಪರೀಕ್ಷೆ ಬರೆಯುತ್ತಿದ್ದ ಸಂದರ್ಭದಲ್ಲಿ ವಿದ್ಯಾರ್ಥಿನಿಗೆ ತೀವ್ರ ತಲೆನೋವು, ಕಡಿಮೆ ರಕ್ತದೊತ್ತಡ ಮತ್ತು ದೈಹಿಕ ಅಸ್ವಸ್ಥತೆ ಕಾಣಿಸಿಕೊಂಡಿದೆ.
ಪರೀಕ್ಷಾ ಕೇಂದ್ರದಲ್ಲಿದ್ದ ಸಿಬ್ಬಂದಿ ಮತ್ತು ಆರೋಗ್ಯ ಸಹಾಯಕರು ಕೂಡಲೇ ವಿದ್ಯಾರ್ಥಿನಿಯನ್ನು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ.
ವಿದ್ಯಾರ್ಥಿನಿಗೆ ವೈದ್ಯರು ತುರ್ತು ಚಿಕಿತ್ಸೆ ನೀಡುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.
ಪರೀಕ್ಷೆಯ ಒತ್ತಡ ಅಥವಾ ಹವಾಮಾನದ ವೈಪರೀತ್ಯದಿಂದ ಈ ಅಸ್ವಸ್ಥತೆ ಉಂಟಾಗಿರಬಹುದು ಎಂದು ಶಂಕಿಸಲಾಗಿದೆ.
ಕಾಲೇಜಿನ ಪ್ರಾಂಶುಪಾಲರಾದ ವೇಣುಗೋಪಾಲ ಸಹ ಉಪನ್ಯಾಸಕರು ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಲಕ್ಷ್ಮಣ್ ನಾಯಕ್ ಅಂಬುಲೆನ್ಸ್ ಡ್ರೈವರ್ ಸುಲೇಮಾನ್, ಶುಶ್ರೂಷಣಾ ಅಧಿಕಾರಿಗಳಾದ ಶೈಲಜಾ, ವಿಶಾಲಾಕ್ಷಿ, ಆಶಾ ಕುಮಾರಿ ಅವರಿಗೆ ಪಾಲಕರು ಹಾಗೂ ಸಾರ್ವಜನಿಕರು ವಿದ್ಯಾರ್ಥಿನಿಗೆ ಆಸ್ಪತ್ರೆಗೆ ದಾಖಲು ಮಾಡಿ ಸಹಕರಿಸಿದ್ದಕ್ಕಾಗಿ ಶ್ಲಾಘಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್




















