ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನ್ಯಾಯದ ಪರ ಗಟ್ಟಿ ಧ್ವನಿ ನೊಂದಿರುವ ಕಕ್ಷಿದಾರರ ಜೀವನಕ್ಕೆ ಬೆಳಕಾದ ಸರ್ಕಾರಿ ಅಭಿಯೋಜಕಿ ಸವಿತಾ ಶಿಗ್ಲಿ

ಗದಗ: ಇಲ್ಲಿನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ಸರ್ಕಾರಿ ಅಭಿಯೋಜಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸವಿತಾ ಎಂ. ಶಿಗ್ಲಿ ಅವರು ನ್ಯಾಯದ ಪರ ಗಟ್ಟಿಯಾಗಿ ನಿಲ್ಲುವ ಮೂಲಕ ನೊಂದಿರುವ ಹಲವಾರು ಮಂದಿ ಕಕ್ಷಿದಾರರ ಜೀವನಕ್ಕೆ ಬೆಳಕಾಗಿದ್ದಾರೆ.

ವಕೀಲರೆಂದರೆ ಸತ್ಯವನ್ನು ಸುಳ್ಳು ಮಾಡುವರು, ಸುಳ್ಳನ್ನು ಸತ್ಯ ಎಂದು ಬಿಂಬಿಸುವವರು ಎಂಬ ಕುರುಡು ನಂಬಿಕೆ ಜನರ ಮನಸ್ಸಿನಲ್ಲಿ ಇಂದಿಗೂ ಬೇರೂರಿದೆ.

ಆದರೆ, ಈ ನಂಬಿಕೆಯನ್ನು ಒಡೆದು ಹಾಕಿ, ಸತ್ಯದ ಪರ, ನ್ಯಾಯದ ಪರ ನಿಲ್ಲುವ ಮೂಲಕ ನೊಂದವರ ಕಣ್ಣೀರು ಒರೆಸುತ್ತಿದ್ದಾರೆ. ಹಾಗಾಗಿ, ಗದಗ ಜಿಲ್ಲೆಯಲ್ಲಿ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿರುವವರ ಪೈಕಿ ಮುಂಚೂಣಿಯಲ್ಲಿರುವ ಹೆಸರು ಸವಿತಾ ಶಿಗ್ಲಿ ಅವರದ್ದು.

ಸಾಕಷ್ಟು ಪ್ರಕರಣಗಳಲ್ಲಿ ಎದುರು ಪಾರ್ಟಿಯಿಂದ ಪ್ರಾಣ ಬೆದರಿಕೆಗಳನ್ನು ಎದುರಿಸಿದರೂ, ‘ನ್ಯಾಯರೇಖೆ’ಯನ್ನು ದಾಟಿ ಆಚೀಚೆ ಬಂದವರಲ್ಲ. ಇವರು, ಈವರೆಗೆ ನಿಭಾಯಿಸಿರುವ ಕೇಸುಗಳಲ್ಲಿ ಬಡವರಿಗೆ ನ್ಯಾಯ ಸಿಕ್ಕಿದೆ. ಈ ಕಾರಣಕ್ಕೆ ಸವಿತಾ ಶಿಗ್ಲಿ ಅವರು ಇಂದಿನ ಭ್ರಷ್ಟ ವ್ಯವಸ್ಥೆಯಲ್ಲಿ ಭರವಸೆ ಕೋಲ್ಮಿಂಚಿನಂತೆ ಗೋಚರಿಸುತ್ತಾರೆ ಎಂಬುದು ಕಕ್ಷಿದಾರರ ಮೆಚ್ಚುಗೆಯ ಮಾತುಗಳಾಗಿವೆ.

ಕೊಲೆ ಪ್ರಯತ್ನ, ಸುಲಿಗೆ, ಒಂಟಿ ಮಹಿಳೆ ಕೊಲೆ ಮತ್ತು ದರೋಡೆ, ಅತ್ಯಾಚಾರ ಹಾಗೂ ಮಹಿಳಾ ದೌರ್ಜನ್ಯ ಪ್ರಕರಣಗಳಲ್ಲಿ ನೊಂದ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಗರಿಷ್ಠ ಪ್ರಯತ್ನ ಮಾಡಿದ್ದಾರೆ. ಎರಡು ವಿರಳಾತಿ ವಿರಳ ಗಂಭೀರ ಕೊಲೆ ಪ್ರಕರಣಗಳಲ್ಲಿ ಐವರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಮಾಡಿದ್ದು ಸವಿತಾ ಎಂ.ಶಿಗ್ಲಿ ಅವರ ಸಾಧನೆಗಳಲ್ಲಿ ಮುಖ್ಯವಾದುದು.

ಸವಿತಾ ಶಿಗ್ಲಿ ಅವರು ವಕೀಲಿಕೆಗೆ ಮಾತ್ರ ಸೀಮಿತಗೊಳ್ಳದೇ ಸಮಾಜಮುಖಿ ಕೆಲಸಗಳಲ್ಲೂ ತೊಡಿಗಿಸಿಕೊಂಡಿದ್ದಾರೆ. ಕಾಲೇಜು ಯುವತಿಯರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಲೈಂಗಿಕ ಕಿರುಕುಳ ವಿರೋಧಿ ಕಾನೂನು ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಕಾನೂನು ಪರಿವಾರ :

ಈಗಿನ ಕಲಬುರಗಿ ಜಿಲ್ಲೆ ಸುರಪುರ ತಾಲ್ಲೂಕಿನ ನಾರಾಯಣಪುರದಲ್ಲಿ ಜನಿಸಿದ ಸವಿತಾ ಎಂ. ಶಿಗ್ಲಿ ಅವರು ಬಿಎಸ್‌ಸಿ ಪದವಿ ಜತೆಗೆ ಎಲ್‌ಎಲ್‌ಬಿ ಪದವೀಧರರು. ಧಾರವಾಡದ ಖ್ಯಾತ ವಕೀಲ ಕೆ.ಬಿ.ನಾವಲಗಿಮಠ ಅವರ ಬಳಿ ಮೂರು ವರ್ಷಗಳ ಕಾಲ ವಕೀಲ ವೃತ್ತಿ ಮಾಡಿದ್ದರು. ಬಳಿದ ಎಂ.ಐ.ಶಿಗ್ಲಿ ಅವರನ್ನು 1997ರಲ್ಲಿ ವಿವಾಹವಾದರು. 2004ರಲ್ಲಿ ಮುಂಡರಗಿ ನ್ಯಾಯಾಲಯದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರಾಗಿ ವೃತ್ತಿ ಆರಂಭ. 2014ರಲ್ಲಿ ಪದೋನ್ನತಿ ಹೊಂದಿದರು. ಈ ನಡುವೆ ಧಾರವಾಡ, ಕೊಪ್ಪಳದಲ್ಲೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಇವರು ಗದಗ ಪ್ರಧಾನ ಜಿಲ್ಲಾ ಸೆಷನ್ಸ್‌ ನ್ಯಾಯಾಲಯದಲ್ಲಿ ಪ್ರಧಾನ ಸರ್ಕಾರಿ ಅಭಿಯೋಜಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸವಿತಾ ಶಿಗ್ಲಿ ಅವರ ಪತಿ ಪ್ರಸ್ತುತ ಬೆಳಗಾವಿಯಲ್ಲಿ ಗ್ರಾಹಕವ್ಯಾಜ್ಯ ಪರಿಹಾರ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಇಬ್ಬರು ಮಕ್ಕಳು ಸಹ ಕಾನೂನು ಪದವಿ ಅಭ್ಯಾಸ ಮಾಡುತ್ತಿದ್ದಾರೆ. ಹೀಗಾಗಿ ಇವರ ಕುಟುಂಬವನ್ನು ಕಾನೂನು ಪರಿವಾರ ಎನ್ನಲು ಅಡ್ಡಿ ಇಲ್ಲ.

ವರದಿ: ಹನಮಂತ ದಾಸರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!