ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬೇವು ಮಾವು

ಬೇವು ಬೆಲ್ಲವ ಮೆಲ್ಲುವ ಹಬ್ಬ
ಮಾವಿನ ತೋರಣ ಕಟ್ಟುವ ಹಬ್ಬ
ನಾವಿನ್ಯ ಉಡುಪು ಧರಿಸುವ ಹಬ್ಬ
ಜೀವಭಾವಗಳ ಬೆಸೆಯುವ ಹಬ್ಬ//

ದೇಹಕೆ ತೈಲ ಹಚ್ಚುವ ಹಬ್ಬ
ದಾಹದ ಮನವ ತಣಿಸುವ ಹಬ್ಬ
ನೇಹ ಪ್ರೀತಿ ಹಂಚುವ ಹಬ್ಬ
ಮೋಹ ಮತ್ಸರ ದಹಿಸುವ ಹಬ್ಬ//

ಹೋಳಿಗೆ ತುಪ್ಪ ಸವಿಯುವ ಹಬ್ಬ
ಬಾಳಿಗೆ ಚೇತನ ತುಂಬುವ ಹಬ್ಬ
ಬೋಳು ಮರದಿ ಎಲೆ ಚಿಗುರುವ ಹಬ್ಬ
ಗೋಳನು ಮನದಿ ದೂಡುವ ಹಬ್ಬ//

ಕಾಸಿನ ಆಟ ಆಡುವ ಹಬ್ಬ
ಮೋಸ ವಂಚನೆ ತ್ಯಜಿಸುವ ಹಬ್ಬ
ವೇಷ ಹಾಕಿ ಕುಣಿಯುವ ಹಬ್ಬ
ಭಾಷೆ ದ್ವೇಷ ಮರೆಸುವ ಹಬ್ಬ//

ನೂತನ ಕಳೆಯ ತರುವ ಹಬ್ಬ
ಯಾತನೆ ದೂರ ಮಾಡುವ ಹಬ್ಬ
ಜಾತಿಭೇದವ ಮರೆಸುವ ಹಬ್ಬ
ನೀತಿ ಸಂಸ್ಕೃತಿ ಸಾರುವ ಹಬ್ಬ//

ಆಗಸದಿ ಚಂದ್ರನ ನೋಡುವ ಹಬ್ಬ
ರಾಗದಿ ಕೋಗಿಲೆ ಕೂಗುವ ಹಬ್ಬ
ಬೇಗುದಿ ದೂರ ಮಾಡುವ ಹಬ್ಬ
ಬಾಗಿ ಹಿರಿಯರಿಗೆ ನಮಿಸುವ ಹಬ್ಬ//

  • ಯಶೋಧಮ್ಮ ಎಂ. ಬಿ.
    ತಿರುಮಗೊಂಡಹಳ್ಳಿ.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!