
ಕೊಟ್ಟೂರು : ಅಸಂಖ್ಯಾತ ಭಕ್ತರ ಸಮ್ಮುಖದಲ್ಲಿ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ರಥದ ಗಡ್ಡಿಯನ್ನು
ಯುಗಾದಿ ಹಬ್ಬದ ಪಾಡ್ಯದಿನ ಶುಕ್ರವಾರ 4.30ರ ಇಳಿ ಸಂಜೆ ವೇಳೆಗೆ ತೇರುಗಡ್ಡೆ ಬಳಿ ತಾತ್ಕಾಲಿಕವಾಗಿ ನಿರ್ಮಿಸಿದ ತಗಡಿನ ಶೇಡ್ ಗೆ ಹಾಕಿದರು.
ಪ್ರತಿವರ್ಷ ಪದ್ದತಿಯಂತೆ ಈ ವರ್ಷ ಕೊಟ್ಟೂರೇಶ್ವರ ಸ್ವಾಮಿ ದೇವಾಲಯದಲ್ಲಿ ಮಧ್ಯಾಹ್ನ 3-30 ರ ಸುಮಾರಿಗೆ ಶ್ರೀ ಸ್ವಾಮಿಗೆ ಇಲ್ಲಿನ ಕ್ರಿಯಾ ಮೂರ್ತಿಗಳು ಆರ್ ಎಂ ಶಿವಪ್ರಕಾಶ್ ಸ್ವಾಮಿಗಳು ಕೊಟ್ಟೂರು ದೇವರ ವಿಶೇಷವಾದ ಪೂಜೆಯನ್ನು ಕೈಗೊಂಡರು. ವಾದ್ಯ ಮೇಳ ಮೆರವಣಿಗೆ
ಕಾಲು ನಡುಗೆ ಮೂಲಕ ತೇರುಗಡ್ಡೆ ಸಾಗಿದ ನಂತರ ರಥ ಏರಿದರು. ಶೇಖರಯ್ಯ ಧರ್ಮಕರ್ತರು ಚಾಮರ ಬೀಸುವ ಮೂಲಕ ಚಾಲನೆಗೊಂಡು ಬಂದು ತಲುಪಿತು. ಭಕ್ತಾದಿಗಳು ಜಯಘೊಷಣೆಯನ್ನು ಹೇಳಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಮತ್ತೆ ಶ್ರೀ ಮಠಕ್ಕೆ ಬಂದರು.
ದೇವಾಲಯದಲ್ಲಿ ಪಂಚಾಂಗ ಓದುವ ಕಾರ್ಯಕ್ರಮ ನಡೆಯಿತು.
ಈ ಸಂಧರ್ಭದಲ್ಲಿ ಕಟ್ಟಿಮನಿ ದೈವದವರು, ಆಯಾಗಾರರು ,ದೇವಾಲಯದ ಸಿಬ್ಬಂದಿಗಳು, ಭಕ್ತಾದಿಗಳು ಇತರರು ಇದ್ದರು.
- ಕರುನಾಡ ಕಂದ ಪತ್ರಿಕೆ




















