೧.
ಬೇಗ ತೊಲಗಲಿ ಬಲ್ಡೋಟ.
ಉದ್ಯೋಗ ಕೊಡುವ ನೆಪದಲಿ,
ನಮ್ಮ ಜನರ ಜೊತೆ
ಆಡುತಿದೆ ಚೆಲ್ಲಾಟ,
ಇದು ಬಲ್ಡೋಟ,
ಎಲ್ಲೆಲ್ಲೂ ಧೂಳು,
ಜನ ಜೀವ ಹಾಳು,
ವಿಷ, ಹೊಗೆ ಕುಡಿಯುತ್ತಾ
ಸಾಗಿದೆ ಬಾಳು,
ಕೇಳುವರಾರು ನಮ್ಮಯ ಗೋಳು,
ಹೀಗಿದ್ದರೆ, ಏನಿದ್ದರೇನು?
ಎಲ್ಲವೂ ಹಾಳು!.
೨.
ಇದೇನು ಕೊಪ್ಪಳದ
ಹಣೆಬರಹವೋ,
ಕಾರ್ಖಾನೆ ಮಾಲೀಕರ
ಅಟ್ಟಹಾಸವೋ,
ಕಾರ್ಮಿಕ ಬಂಧುಗಳ
ಜೀವ ನಾಶವೋ,
ಮೇಲೆ ಬಿಸಿಲ ಧಗೆ,
ಸುತ್ತೆಲ್ಲಾ ವಿಷದ ಹೊಗೆ,
ಮಾಲಿನ್ಯವಾಗಿದೆ ಸುತ್ತೆಲ್ಲಾ,
ಜೀವಂತ ಶವಗಳೇ ಇಲ್ಲೆಲ್ಲ!.
- ಶಿವಪ್ರಸಾದ್ ಹಾದಿಮನಿ.
ಕನ್ನಡ ಉಪನ್ಯಾಸಕರು.
ಕೊಪ್ಪಳ. 583231.




















