ಯಾದಗಿರಿ: ಹಿಂದಿನಿಂದ ಬರುತ್ತಿರುವ ವಾಹನ ಬೈಕ್ ಸವರನ ತಲೆ ಮೇಲೆ ಹಾದುಹೋಗಿದೆ.
ಮನೆಯಿಂದ ಕಾಲೇಜಿಗೆ ಹೋಗುವ ಸಮಯದಲ್ಲಿ ಮುಂಜಾನೆ 9:20 ಕ್ಕೆ ನಡೆದ ಈ ದುರ್ಘಟನೆ ಯಾದಗಿರಿ ನಗರದ ಹೈದರಾಬಾದ್-ವಿಜಯಪುರ ರಸ್ತೆಯ ಎಲ್ಐಸಿ ಆಫೀಸ್ ಎದುರುಗಡೆ ನಡೆದಿದೆ. ವಾಹನ ಸವಾರ, ನಗರದ ನಿವಾಸಿ ನವಮಾನ್ 18 ವರ್ಷದವನು ಎಂದು ತಿಳಿದು ಬಂದಿದೆ.
ಎರಡು ದಿನಗಳ ಹಿಂದೆ ಅಷ್ಟೇ, ರಾಯಲ್ ಗ್ರಾಂಡ್ ಫ್ಯಾಮಿಲಿ ರೆಸ್ಟೋರೆಂಟ್ ಓಪನಿಂಗ್ ಮಾಡಿ ಖುಷಿಯಲ್ಲಿದ್ದ ಮನೆಯರು ಈಗ ಮನೆಯಲ್ಲಿ ಸಾವಿನ ಸೂತಕ ಆವರಿಸಿಕೊಂಡಿದೆ. ಕುಟುಂಬಸ್ಥರ ಆಕ್ರಂದನ
ಮುಗಿಲು ಮುಟ್ಟಿದ. ಯಾದಗಿರಿ ನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಆಗಿದೆ.
ವರದಿ-ರಾಜಶೇಖರ ಮಾಲಿ ಪಾಟೀಲ್,ಶಹಾಪುರ