ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಜನಗಣತಿ ಮೊದಲನೆ ಬ್ಯಾಚ್ ತರಬೇತಿ ಕಾರ್ಯಾಗಾರ

ಬೈಲಹೊಂಗಲ : ದಿನಾಂಕ: ೦೧-೦೪-೨೦೨೬ ರಂದು ಜನಗಣತಿ ೨೦೨೭ ರ ಪ್ರಯುಕ್ತ ಬೈಲಹೊಂಗಲ ನಗರಸಭೆ ವ್ಯಾಪ್ತಿಯ ಜನಗಣತಿ ಕಾರ್ಯ ಕೈಗೊಳ್ಳುವ ಕುರಿತು ನಗರದ ಗಣತಿದಾರರು ಮತ್ತು ಮೇಲ್ವಿಚಾರಕರುಗಳಿಗೆ ದಿನಾಂಕ: ೦೧-೦೪-೨೦೨೬, ೦೩-೦೪-೨೦೨೬, ೦೪-೦೪-೨೦೨೬ ರವರೆಗೆ ೩ ದಿನಗಳ ಕಾಲ ನಗರದ ಗಣಾಚಾರಿ ಶಿಕ್ಷಣ ಸಂಸ್ಥೆಯ ಶ್ರೀ ಬಸವೇಶ್ವರ ಎಜ್ಯೂಕೇಶನ್ ಸೊಸೈಟಿ ಇಲ್ಲಿ ಆಯೋಜಿಸಿದ ಮೊದಲನೆ ಬ್ಯಾಚ್ ತರಬೇತಿ ಕಾರ್ಯಾಗಾರವನ್ನು  ತಹಶೀಲ್ದಾರರಾದ ಶ್ರೀ ಹಣಮಂತ ಶಿರಹಟ್ಟಿ ಇವರು ಉದ್ಘಾಟಿಸಿ ಮಾತನಾಡಿ ತರಬೇತಿದಾರರಿಗೆ ಜನಗಣತಿಯ ಮಹತ್ವವನ್ನು ತಿಳಿಸಿ ಜನಗಣತಿ ಕುರಿತಾಗಿ ತಮಗೆ ಹಂಚಿಕೆ ಮಾಡಿದ ಬ್ಲಾಕ್‌ನಲ್ಲಿ ಇಂದಿನಿಂದ ದಿನಾಂಕ:೧೫-೦೪-೨೦೨೬ ರವರೆಗೆ ಸಂಚರಿಸಿ ಬ್ಲಾಕ್‌ನ ವ್ಯಾಪ್ತಿ ತಿಳಿದುಕೊಳ್ಳಲು ಹಾಗೂ ದಿನಾಂಕ:೦೧-೦೪-೨೦೨೬ ರಿಂದ ೧೫-೦೪-೨೦೨೬ ರವರೆಗೆ ಸ್ವಯಂ-ಗಣತಿ ಮಾಡಿಕೊಳ್ಳುವಂತೆ ನಾಗರೀಕರಿಗೆ ತಿಳಿಸುವುದರೊಂದಿಗೆ ಸಾಕಷ್ಟು ಪ್ರಮಾಣದಲ್ಲಿ ಸ್ವಯಂ-ಗಣತಿ ಕೈಗೊಂಡು ಪ್ರಗತಿ ಸಾಧಿಸಲು ತಿಳಿಸಿದರು ಹಾಗೂ ದಿನಾಂಕ: ೧೬-೦೪-೨೦೨೬ ರಿಂದ ೧೫-೦೫-೨೦೨೬ ರವರೆಗೆ ಜನವಸತಿ ಕಟ್ಟಡದ ಸ್ಥಿತಿಗತಿ ಲಭ್ಯವಿರುವ ಸೌಲಭ್ಯಗಳು ಮತ್ತು ಸ್ವತ್ತುಗಳ ಬಗೆಗಿನ ವಿಸ್ತೃತ ಮಾಹಿತಿಯನ್ನು ಕಲೆ ಹಾಕಿ ಗಣತಿ ಕಾರ್ಯವನ್ನು ಕೈಗೊಳ್ಳಲು ತಿಳಿಸಿ ಇದು ಗಣತಿಗಾಗಿ ಅಗತ್ಯವಾದ ತಳಪಾಯವಾಗಿದೆ. ಕಾರಣ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುವಂತೆ ತಿಳಿಸಿದರು.

ಇದೇ ವೇಳೆ ಪೌರಾಯುಕ್ತರಾದ ಶ್ರೀಮತಿ ಭಾಗ್ಯಶ್ರೀ ಆರ್. ಹುಗ್ಗಿ ರವರು ಮಾತನಾಡಿ ಗಣತಿ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿ ಯಶಸ್ವಿಗೊಳಿಸುವಂತೆ ತಿಳಿಸಿದರು.
ಫೀಲ್ಡ್ ಟ್ರೇನರ್ ಆದ ಶ್ರೀ ರಾಜು ಹಕ್ಕಿ ಇವರು ಗಣತಿ ಕಾರ್ಯದ ತರಬೇತಿ ನೀಡಿದರು. ಶ್ರೀ ಆರ್. ಎಸ್. ಹಿಟ್ಟಣಗಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಕಛೇರಿ ವ್ಯವಸ್ಥಾಪಕರಾದ ಶ್ರೀ ಎಮ್. ಆಯ್. ಕುಟ್ರಿ, ಪ್ರ.ದ.ಸ. ಶ್ರೀ ಬಿ. ಆಯ್. ಗುಡಿಮನಿ, ಶ್ರೀ ಬಿ. ಎನ್. ಪಾಟೀಲ, ಶ್ರೀ ಎ. ವಾಯ್. ಹೆಗಡೆ, ಶ್ರೀ ಎಸ್. ಎನ್. ಪಾಟೀಲ, ಶ್ರೀ ಎಸ್. ಎಸ್. ನರಗುಂದ ಉಪಸ್ಥಿತರಿದ್ದರು.

– ಮಂಜು ಎಂ. ಚಿಕ್ಕಣ್ಣವರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!