ಸಿರುಗುಪ್ಪ – ತಾಲೂಕು ಉತ್ತನೂರು ಗ್ರಾಮದಲ್ಲಿ ಶ್ರೀ ಉತ್ತರೇಶ್ವರ ಸ್ವಾಮಿ ಜಾತ್ರಾ ರಥೋತ್ಸವ ಸಂಭ್ರಮದಿಂದ ನೆರವೇರಿತು.
ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು ಸ್ವಾಮಿಗೆ ಪಂಚಾಮೃತ ಅಭಿಷೇಕ ವಿಶೇಷ ಅಲಂಕಾರ ಮಹಾಮಂಗಳಾರತಿ ನೆರವೇರಿತು. ಉತ್ತನೂರು ಗ್ರಾಮಸ್ಥರು ಸುತ್ತಮುತ್ತ ಹಳ್ಳಿಗಳ ಭಕ್ತರು ಮುಂಜಾನೆಯಿಂದಲೇ ದೇವಸ್ಥಾನಕ್ಕೆ ಆಗಮಿಸಿ ಉತ್ತರೇಶ್ವರ ಸ್ವಾಮಿಯ ದರ್ಶನ ಪಡೆದರು.
ಸಂಜೆ ನಿಗದಿತ ಶುಭ ಮುಹೂರ್ತದಲ್ಲಿ ಜಾತ್ರಾ ಮಹಾ ರಥೋತ್ಸವಕ್ಕೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು ಭಕ್ತರು ಭಕ್ತಿಯ ಜಯ ಘೋಷಗಳೊಂದಿಗೆ ತೇರನ್ನು ಎಳೆದರು ರಥ ಸಾಗುವ ಮಾರ್ಗದ ಉದ್ದಕ್ಕೂ ಭಕ್ತರು ಬಾಳೆಹಣ್ಣು ಉತ್ತುತ್ತಿ ಹೂ ಎಸೆಯುವ ಮೂಲಕ ತಮ್ಮ ಹರಕೆ ತೀರಿಸಿದರು ಮಂಗಳ ವಾದ್ಯ ಭಜನಾ ಹಾಡುಗಳ ಗಮನ ಸೆಳೆಯಿತು ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















