ಸಿರುಗುಪ್ಪ – ಶೇಖೇ ದಖನ್ ಹಜರತ್ ಸೈಯದ್ ಷಾ ಆರಿಫುಲ್ಲಾಹ್ ಖಾದ್ರಿ ರ.ಅ.207 ನೇ ಉರುಸ್ ಮುಬಾರಕ್ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕು ಹಟ್ಟಿ ವಿರುಪಾಪುರ ಗ್ರಾಮದಲ್ಲಿ ಪ್ರತಿ ವರ್ಷದ ಪ್ರಕಾರ ಗಂಧ ಮಹೋತ್ಸವ ಉರುಸ್ ಮುಬಾರಕ್ ಜಿಯಾರತ್ ಷರೀಫ್ ದರ್ಗಾದ ಮುಖ್ಯಸ್ಥರು ಸಜ್ಜಾದ ನಷೀನ್ ದರ್ಗಾದ ಮುತುವಲ್ಲಿ ಶರಣರ ಮೊಮ್ಮಗರಾದ ಪರಮಪೂಜ್ಯ ಗುರುಗಳಾದ ಹಜರತ್ ಸೈಯದ್ ಷಾ ಮೆಹೆಮೂದ್ ಖಾದ್ರಿ ಉರುಫ್ ರಯೀಸ್ ಸಾಹೇಬ್ ಇವರ ನೇತೃತ್ವದಲ್ಲಿ ಸಂದಲ್ ಉರುಸ್ ಜಿಯಾರತ್ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಂಪ್ಲಿ ಸೈಯದ್ ಅಬ್ದುಲ್ ಹಸೇನ್ ಖಾದ್ರಿ ಸಜ್ಜಾದ ನಷೀನ್, ಗಂಗಾವತಿ ಸೈಯದ್ ತೌಫಿಕ್ ಸಾಹೇಬ್, ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಬಳ್ಳಾರಿ ಜಿಲ್ಲಾ ಸಲಹಾ ಸಮಿತಿಯ ಉಪಾಧ್ಯಕ್ಷರು ಹಜರತ್ ಸೈಯದ್ ಷಾ ಮೋಹಿಯುದ್ದೀನ್ ಖಾದ್ರಿ ಸಾಹೇಬ್ ತೆಕ್ಕಲಕೋಟೆ ಜಮೀನ್ದಾರ್ ಸಾಹುಕಾರ್ ಸಜ್ಜಾದ ನಷೀನ್ ಮುತುವಲ್ಲಿ ದರ್ಗಾ ಹಜರತ್ ಸೈಯದ್ ಷಾ ಸಿರಾಜುದ್ದೀನ್ ಖಾದ್ರಿ ಉರುಫ್ ಖಾದರ್ ಷಾ ಮೌಲಾ ರ.ಅ. ಸಿರುಗುಪ್ಪ ಅವರಿಂದ ಖುರಾನ್ ಫಾತೆಹಾ ಮಹೇಫೀಲೆ ಮೀಲಾದ್ ನಾತೇ ರಸೂಲ್ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿದವು ಮತ್ತು ಜಿಯಾರತ್ ದರ್ಶನ ಪಡೆದರು ಸರ್ವರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















