ಸಿರುಗುಪ್ಪ- ತಾಲೂಕಿನ ರಾರಾವಿ ವ್ಯಾಪ್ತಿಯ ಕೆ.ಬೆಳಗಲ್ಲು ಗ್ರಾಮದಲ್ಲಿ ವಿಶ್ವ ಆರೋಗ್ಯ ದಿನಾಚರಣೆಯನ್ನು ಹಮ್ಮಿಕೊಂಡು ಸಾರ್ವಜನಿಕರಿಗೆ ನಿರ್ಜಲೀಕರಣ ಮತ್ತು ಶಾಕಾ ಘಾತ ಚಿಕಿತ್ಸೆ ಪರಿಹಾರ, ಬೇಸಿಗೆ ಕಾಲದಲ್ಲಾಗುವ ವಾಂತಿ ಭೇದಿ, ಮಕ್ಕಳಲ್ಲಿ ದಡಾರ, ಕ್ಷಯರೋಗದ ಬಗ್ಗೆ ಮಧುಮೇಹ ಅಧಿಕ ರಕ್ತದ ಒತ್ತಡ ಎಚ್ ಪಿ ವಿ ಲಸಿಕೆಯ ಮಹತ್ವದ ಡೆಂಗ್ಯೂ ಜ್ವರದ ಬಗ್ಗೆ ಮಾಹಿತಿಯನ್ನು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮೊಹಮ್ಮದ್ ಖಾಸಿಂ ಅವರು ಮಾಹಿತಿ ನೀಡಿದರು.
ಕೆ.ಬೆಳಗಲ್ ಗ್ರಾಮ ಪಂಚಾಯತ್ ಪಿ ಡಿ ಓ ರವರು ಕೆರೆಗೆ ಕಾಲುವೆ ನೀರನ್ನು ನೇರವಾಗಿ ಬಿಡುತ್ತಿರುವುದು ಅದಕ್ಕೆ ಫಿಲ್ಟರ್ ಗಳನ್ನು ಅಳವಡಿಸಿ ಶುದ್ಧೀಕರಿಸಿದ ನೀರನ್ನು ಬಿಡುವುದಾಗಿ ಭರವಸೆ ನೀಡಿದರು.
ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ರಾಷ್ಟ್ರೀಯ ಸಾಕ್ಷರತಾ ಸದಸ್ಯ ಅಬ್ದುಲ್ ನಬಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪಂಪಾಪತಿ ಸಮುದಾಯ ಆರೋಗ್ಯ ಅಧಿಕಾರಿ ಸಾಯಿರಾಬಾನು ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ನಾಗವೇಣಿ ಆಶಾ ಕಾರ್ಯಕರ್ತೆ ಹೇಮಾವತಿ ಹಾಗೂ ಊರಿನ ಹಿರಿಯರು ಹಾಜರಿದ್ದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















