ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ್ದಾರೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಈ ಕಾರ್ಯಾಚರಣೆ ಕೈಗೊಂಡಿದ್ದಾರೆ. ಇಲ್ಲಿನ ಸಿದ್ದಾರ್ಥ್ ನಗರದಲ್ಲಿರುವ ಶಿವಣ್ಣ ಅವರ ಮನೆ ಹಾಗೂ ಅವರ ಕಚೇರಿ ಸೇರಿದಂತೆ ಒಟ್ಟು ನಾಲ್ಕು ಕಡೆಗಳಲ್ಲಿ ಅಧಿಕಾರಿಗಳ ತಂಡ ಶೋಧ ಕಾರ್ಯ ನಡೆಸಿದೆ.
ಅಕ್ರಮ ಆಸ್ತಿ ಪತ್ತೆ:
ಶಿವಣ್ಣ ಅವರ ಸಿದ್ಧಾರ್ಥ ನಗರದ ನಿವಾಸ ಮತ್ತು ಕಚೇರಿ ಸೇರಿದಂತೆ ನಾಲ್ಕು ಸ್ಥಳಗಳಲ್ಲಿ ನಡೆದ ಶೋಧನೆಯಲ್ಲಿ ನಗದು, ಚಿನ್ನಾಭರಣ ಮತ್ತು ಆಸ್ತಿ ಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ವಸ್ತುಗಳು:
ಸುಮಾರು 8.5 ಲಕ್ಷ ರೂ. ನಗದು.
ಸುಮಾರು 600 ಗ್ರಾಂ ಚಿನ್ನಾಭರಣ.
3 ದ್ವಿಚಕ್ರ ವಾಹನಗಳು.
ಬಳ್ಳಾರಿ ನಗರದಲ್ಲಿ 14 ವಸತಿ ನಿವೇಶನಗಳು ಮತ್ತು 3 ಮನೆಗಳಿಗೆ ಸಂಬಂಧಿಸಿದ ದಾಖಲೆಗಳು ಲಭಿಸಿವೆ.
ತನಿಖೆ: ಬೇನಾಮಿ ಆಸ್ತಿಗಳ ಬಗ್ಗೆಯೂ ದಾಖಲೆಗಳು ಪತ್ತೆಯಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ವರದಿ : ಜಿಲಾನಸಾಬ್ ಬಡಿಗೇರ್




















