ಶಿವಮೊಗ್ಗ: ಪಿ. ಲಂಕೇಶ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ 2026, ಏಪ್ರಿಲ್ 14ರಂದು ಬೆಳಿಗ್ಗೆ 10.30ಕ್ಕೆ ಶಿವಮೊಗ್ಗದ ಸರ್ಕಾರಿ ನೌಕರರ ಭವನ, ಆರ್‌ಟಿಒ ರಸ್ತೆ, ಶಿವಮೊಗ್ಗ ಏರ್ಪಡಿಸಲಾಗಿದ್ದು ಈ ಸಂಧರ್ಭದಲ್ಲಿ ಬೆಂಗಳೂರಿನ ಹಿರಿಯ ಪತ್ರಕರ್ತ ಶ್ರೀ ಡಿ ಮಹದೇವಪ್ಪ ಇವರಿಗೆ ಪ್ರತಿಷ್ಠಿತ ಪಿ ಲಂಕೇಶ್ ಪ್ರಶಸ್ತಿ ನೀಡಲಾಗುವುದು ಎಂದು ಶಿವಮೊಗ್ಗ ಪ್ರೆಸ್ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.
ಸಮಾರಂಭವನ್ನು ಕಲಬುರ್ಗಿ ಪೀಠದ ರಾಜ್ಯ ಮಾಹಿತಿ ಆಯುಕ್ತರಾದ ಶ್ರೀ ಬಿ. ವೆಂಕಟಸಿಂಗ್
ಅವರು ಉದ್ಘಾಟಿಸುವರು. ಶಿವಮೊಗ್ಗದ ಪ್ರಗತಿ ಪರ ಚಿಂತಕರಾದ ಪ್ರೊ ರಾಜೇಂದ್ರ ಚೆನ್ನಿ ಅವರು ಪ್ರಶಸ್ತಿ ಪ್ರದಾನ ಮಾಡುವರು.
ಈ ಸಂಧರ್ಭದಲ್ಲಿ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಎನ್. ಮಂಜುನಾಥ್ ಅಧ್ಯಕ್ಷರು, ಶಿವಮೊಗ್ಗ ಪ್ರೆಸ್ ಟ್ರಸ್ಟ್ ಇವರು ವಹಿಸುವರಲ್ಲದೆ ಶ್ರೀ ವೈದ್ಯನಾಥ ಯು.ಹೆಚ್. ಅಧ್ಯಕ್ಷರು, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ, ಜಿಲ್ಲಾ ಘಟಕ, ಶಿವಮೊಗ್ಗ ಇವರು ಉಪಸ್ಥಿತರಿರುವರು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ




















