ಬೆಳಗಾವಿ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುತ್ತಿದ್ದಂತೆ, ಹೊರಹೊಮ್ಮಿದ ಕನಸು ಇಂದು ಸಾಧನೆಯ ಶಿಖರ ತಲುಪಿದೆ.
ಕಾಮರ್ಸ್ ವಿಭಾಗದಲ್ಲಿ 600ಕ್ಕೆ 599 ಅಂಕಗಳನ್ನು ಪಡೆದು, ರಾಜ್ಯಕ್ಕೆ ಎರಡನೆಯ ಸ್ಥಾನ ಪಡೆದು ವಿದ್ಯಾರ್ಥಿನಿ ಅಪೂರ್ವ ಸಾಧನೆ ಮೆರೆದಿದ್ದಾರೆ.
ನಗರದ ಗೋಗಟೆ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿ ಧ್ವನಿ ಸಂತೋಷ್ ಕುಲಕರ್ಣಿ ಕೂಡ 599 ಅಂಕಗಳನ್ನು ಪಡೆದು ತನ್ನ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ.
ಪರಿಶ್ರಮಕ್ಕೆ ಸದಾ ಫಲ ಸಿಗುತ್ತದೆ ಎಂಬುದನ್ನು ಮತ್ತೊಮ್ಮೆ ಅವರು ತೋರಿಸಿದ್ದಾರೆ.
ಇಂಗ್ಲಿಷ್ ವಿಷಯದಲ್ಲಿ 100ಕ್ಕೆ 99 ಅಂಕಗಳನ್ನು ಪಡೆದು, ಉಳಿದ ವಿಷಯಗಳಲ್ಲಿ ಶತಕಗಳ ಸುರಿಮಳೆಯನ್ನೇ ಸುರಿಸಿದ ವಿದ್ಯಾರ್ಥಿನಿ ತಮ್ಮ ಪ್ರತಿಭೆಯಿಂದ ಮಿಂಚಿದ್ದಾರೆ.
ಒಟ್ಟಿನಲ್ಲಿ, ಈ ವರ್ಷದ ಫಲಿತಾಂಶ ಬೆಳಗಾವಿ ಜಿಲ್ಲೆಯ ವಿದ್ಯಾರ್ಥಿಗಳ ಪರಿಶ್ರಮ, ತ್ಯಾಗ ಮತ್ತು ಕನಸುಗಳ ಗೆಲುವಿನ ಕಥೆಯಾಗಿದ್ದು, ಜಿಲ್ಲೆಯ ಹೆಸರನ್ನು ಇನ್ನಷ್ಟು ಎತ್ತರಕ್ಕೆ ತೆಗೆದುಕೊಂಡಿದೆ.
ವರದಿ ವಿಠ್ಠಲ ಖೋಕಾಟೆ




















