ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶಿವಶರಣ ಹೇರೂರು ವಿರುಪಣ್ಣ ತಾತನವರ ವಿಜೃಂಭಣೆಯ ಮಹಾರಥೋತ್ಸವ

ಬಳ್ಳಾರಿ / ಕಂಪ್ಲಿ: ಪಟ್ಟಣದ ಹೊರವಲಯದಲ್ಲಿ ಹಸಿರು ತೋಟಗಳ ಮಧ್ಯೆ ವಿರಾಜಮಾನನಾಗಿರುವ ಶ್ರೀ ಶಿವಾಧ್ವೈತ ಶಿವಶರಣ ಹೇರೂರು ವಿರುಪಣ್ಣ ತಾತನವರ ಮಹಾರಥೋತ್ಸವವು ಸಡಗರ, ಸಂಭ್ರಮ, ಶ್ರದ್ದಾಭಕ್ತಿಯಿಂದ ಜರುಗಿತು.
ಶಿವಾಧ್ವೈತ ಶಿವಶರಣ ಹೇರೂರು ವಿರುಪಣ್ಣ ತಾತನವರು ಮೂಲತಃ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಹೇರೂರು ಗ್ರಾಮದವರಾದರೂ ಸಹಿತ ಅನೇಕ ಪವಾಡಗಳನ್ನು ಮಾಡುತ್ತಾ ಕಂಪ್ಲಿಯಲ್ಲಿ ಬಂದು ನೆಲೆಸಿದ್ದರು. ತನ್ನ ಕಾಯವನ್ನು ಪಂಚಭೂತಗಳಲ್ಲಿ ಲೀನವಾಗಿಸಿ, ಲಿಂಗೈಕ್ಯರಾಗಿದ್ದು ಕಂಪ್ಲಿಯಲ್ಲಿ.ಧರ್ಮಿಯರ ಆಸ್ತಿಕ,ಅಧ್ಯಾತ್ಮ, ತತ್ವಜ್ಞಾನಿಗಳ ಜಾಗೃತ ಕ್ಷೇತ್ರ ಕಂಪ್ಲಿ ವಿರುಪಣ್ಣ ತಾತನವರ ಮಠವಾಗಿದೆ. ತಾತನ ಮಹಾರಥೋತ್ಸವದ ಅಂಗವಾಗಿ ರಥಕ್ಕೆ ಕಂಕಣಧಾರಣೆ, ಕಳಸಧಾರಣೆ ಕಾರ್ಯಕ್ರಮಗಳು ಸಂಭ್ರಮದಿಂದ ಜರುಗಿದವು.
ಬೆಳಿಗ್ಗೆ ತಾತನವರ ಪ್ರತಿಮೆಗೆ ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಅಭಿಷೇಕಗಳು, ಸಹಸ್ರ ಬಿಲ್ವಾರ್ಚನೆ ಹಾಗೂ ವಿವಿಧ ಧರ‍್ಮಿಕ ಕಾರ್ಯಕ್ರಮಗಳು ನಡೆದವು. ನಂತರ ಮಹಾಮಂಗಳಾರತಿಯನ್ನು ನೆರವೇರಿಸಿದ ನಂತರ ಸದ್ಭಕ್ತರು ಹಾಗೂ ವಿವಿಧ ಸ್ವಾಮೀಜಿಗಳ ನೇತೃತ್ವದಲ್ಲಿ ಮಡಿ ತೇರನ್ನು ಎಳೆಯಲಾಯಿತು. ನಂತರ ಅನ್ನಸಂತರ್ಪಣೆಗೆ ಚಾಲನೆ ನೀಡಲಾಯಿತು. ಸಂಜೆಯವರೆಗೂ ನಿರಂತರವಾಗಿ ಅನ್ನ ಸಂತರ್ಪಣೆಗೆ ಜರುಗಿತು.
ಸಂಜೆ ಸಾವಿರಾರು ತಾತನ ಸದ್ಭಕ್ತರು, ವಿವಿಧ ಮಠಗಳ ಸ್ವಾಮೀಜಿಗಳ ನೇತೃತ್ವದಲ್ಲಿ ವಿವಿಧ ಹೂವುಗಳಿಂದ ಅಲಂಕೃತಗೊಂಡಿದ್ದ ರಥದಲ್ಲಿ ಶ್ರೀ ಹೇರೂರು ವಿರುಪಣ್ಣ ತಾತನ ಬೆಳ್ಳಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅತ್ಯಂತ ವಿಜೃಂಭಣೆಯಿಂದ ತಾತನ ಜಯಘೋಷಗಳ ಮಧ್ಯೆ ಮಹಾರಥೋತ್ಸವವು ವೈಭವದಿಂದ ಜರುಗಿತು.
ಮಹಾರಥೋತ್ಸವದಲ್ಲಿ ಪಟ್ಟಣವಷ್ಟೇ ಅಲ್ಲದೇ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಸದ್ಭಕ್ತರು ಭಾಗವಹಿಸಿ ರಥಕ್ಕೆ ಹೂ ಹಣ್ಣು ಎಸೆದು ತಮ್ಮ ಹರಕೆಯನ್ನು ತೀರಿಸಿದರು.ಮಹಾರಥೋತ್ಸವದಲ್ಲಿ ತಾತಾ ಮಠದ ಸಿ.ಎಂ.ವೀರಯ್ಯಸ್ವಾಮಿ, ವಿರುಪಣ್ಣ ತಾತನ ಮಠದ ಅಧ್ಯಕ್ಷರಾದ ಡಿ.ವಿ.ರಮೇಶ್ ಗುಪ್ತಾ ಪದಾಧಿಕಾರಿಗಳು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸುತ್ತಮುತ್ತಲಿನ ಸದಭಕ್ತರು ಪಾಲ್ಗೊಂಡಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!