ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಿರುಗುಪ್ಪ : ಮುಖ್ಯ ಅಂಚೆ ಕಚೇರಿಯಲ್ಲಿ ಪೋಸ್ಟ್ ಫೋರಂ ಸರ್ವ ಸದಸ್ಯರ ಸಭೆ

ಸಿರುಗುಪ್ಪ – ನಗರದ ಮುಖ್ಯ ಅಂಚೆ ಕಚೇರಿಯ ಎಲ್ಲಾ ಕೌಂಟರ್ ಸೇವೆಗಳ ಸೇವೆಯನ್ನು ಎಂ ಡಿ ಜಿ ಎಸ್ ಜಿ ಪಿ ಪೋಸ್ಟ್ ಫೋರಂ ಸದಸ್ಯರು ಅಬ್ದುಲ್ ನಬಿ ಅವರು ಶ್ಲಾಘಿಸಿದರು. ಪೋಸ್ಟ್ ಆಫೀಸ್ ನಲ್ಲಿ ರೈಲ್ವೆ ಟಿಕೆಟ್ ಕೌಂಟರ್ ಪುನರ್ ಆರಂಭಿಸಬೇಕು ಎಂದರು ಅಂಚೆ ಕಚೇರಿಯಲ್ಲಿ ಸಾಮಾನ್ಯ ಜನರು 5 ವರ್ಷಗಳ ಅವಧಿಗೆ ಸಣ್ಣ ಉಳಿತಾಯ ಪ್ರತಿನಿಧಿಗಳ ಮೂಲಕ ಆರ್ ಡಿ ಮಾಡಿರುತ್ತಾರೆ ಅವಧಿ ಮುಗಿದ ಮೇಲೆ ಮೆಚುರಿಟಿ ಹಣವನ್ನು ಹಿಂದಕ್ಕೆ ಪಡೆಯಲು ಆರ್ ಡಿ ಮಾಡಿದ ವ್ಯಕ್ತಿಯೇ ತಾನು ಆರ್ ಡಿ ಮಾಡಿರುವ ಅಂಚೆ ಕಚೇರಿಗೆ ಖುದ್ದು ಭೇಟಿ ನೀಡಿ ಸಹಿ ಮಾಡಿ ಹಣ ವಾಪಸ್ ಪಡೆಯಬೇಕೆಂಬ ಕಟ್ಟುನಿಟ್ಟಿನ ಸೂಚನೆ ಇದೆ ಕೆಲವು ಸಂದರ್ಭಗಳಲ್ಲಿ ಗರ್ಭಿಣಿಯರು, ಬಾಣಂತಿಯರು, ವಯಸ್ಸಾದ ಹಿರಿಯ ನಾಗರಿಕರು, ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಅಂಚೆ ಕಚೇರಿಗೆ ಹೋಗಲು ಸಾಧ್ಯವೇ ಇಲ್ಲ ಆಗಲೂ ಸಹ ಅಂಚೆ ಕಚೇರಿಗೆ ಬಂದು ಹಣ ಪಡೆಯಬೇಕೆಂದರೆ ಹೇಗೆ? ಕಡೆಗೆ ಅವರೇ ಪೋಸ್ಟ್ ಆಫೀಸಿಗೆ ಹೋಗಿ ಹಣ ಡ್ರಾ ಮಾಡುವ ಪರಿಸ್ಥಿತಿ ಬಂದಿತು ನಮ್ಮ ಭಾರತ ದೇಶದ ಅಂಚೆ ಕಚೇರಿಗಳು ಇನ್ನೂ ಹಿಂದಿನ ಕಾಲದ ಕಾನೂನುಗಳನ್ನೇ ಪಾಲಿಸುತ್ತಿವೆ ಕೇಂದ್ರ ಸರ್ಕಾರದ ಹಣಕಾಸು ಸಚಿವರು ಈ ಬಗ್ಗೆ ಗಮನಹರಿಸಬೇಕು ಸಿರುಗುಪ್ಪ ನಗರದ ಮುಖ್ಯ ಅಂಚೆ ಕಚೇರಿಯನ್ನು ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿ ಇರಿಸಿದ್ದಕ್ಕಾಗಿ ಅಬ್ದುಲ್ ನಬಿಯವರು ಶ್ಲಾಘಿಸಿದರು. ಅದೇ ರೀತಿ ಸಾರ್ವಜನಿಕರಿಗೆ ಜಿಎಪಿ ಪಿ ಹೆಚ್ ಪಿ ಡಿ ಡಬ್ಲ್ಯೂ ಪಿ ಪಿಂಚಣಿ ಪಾವತಿಗಳ ಬಗ್ಗೆ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು ಜಯ್ ಸಿಂಗ್ ಅಲ್ವರಿ ಅವರು ಮಾತನಾಡಿ ಅಂಚೆ ಕಚೇರಿಯನ್ನು ಪ್ರತಿವಾರ ಶ್ರಮದಾನವನ್ನು ನಡೆಸುವ ಮೂಲಕ ಪೋಸ್ಟ್ ಆಫೀಸ್ ಸ್ವಚ್ಛವಾಗಿ ಅಚ್ಚುಕಟ್ಟಾಗಿ ಇರಿಸಿದ್ದಕ್ಕೆ ಸಿಬ್ಬಂದಿಯನ್ನು ಶ್ಲಾಘಿಸಿದರು ಮುಖ್ಯಮಂತ್ರಿ ಕಚೇರಿಯ ಪಿ ಎ ಶಾಮ ಸುಂದರ್ ಅವರು ಸರ್ವರನ್ನು ಸ್ವಾಗತಿಸಿದರು ಮುಖ್ಯ ಅಂಚೆ ಕಚೇರಿಯ ಸಂಚಾಲಕರು ಮತ್ತು ಪೋಸ್ಟ್ ಮಾಸ್ಟರ್ ಎಂ ಕುಮಾರಸ್ವಾಮಿ ಅವರು ಪ್ರಸ್ತಾವಿಕವಾಗಿ ಮಾತನಾಡಿದರು ಹಂಚಿ ಶೇಖಣ್ಣ ಹಂಡಿ ಸಲೀಂ ಪಾಂಡುರಂಗ ಸಾಮಾಜಿಕ ಕಾರ್ಯಕರ್ತ ಮಹಮ್ಮದ್ ನೌಶಾದ್ ಅಲಿ ಉಪಸ್ಥಿತರಿದ್ದರು. ಪೋಸ್ಟ್ ಮಾಸ್ಟರ್ ಕುಮಾರಸ್ವಾಮಿ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ವರದಿ : ಮಸೀದಿ.ಅಬ್ದುಲ್ ಗೌಸ್. ಸಿರುಗುಪ್ಪ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!