ಕೊಡಗು/ ಮಡಿಕೇರಿ: ನಗರದ ಪತ್ರಿಕಾ ಭವನದಲ್ಲಿ ಈ ಕಾರ್ಯಕ್ರಮ ನಡೆಯಿತು. ಬಳಗದಲ್ಲಿ ಪ್ರಾರಂಭ ಹಂತದಿಂದಲೂ ಸದಸ್ಯರಾಗಿ ಬಳಗದ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಕಾರ್ಯ ನಿರ್ವಹಿಸಿ ಬಳಗದ ಯಶಸ್ಸಿಗೆ ಕಾರಣರಾಗಿ , ಇತ್ತೀಚಿನ ದಿನಗಳಲ್ಲಿ ನಮ್ಮೆಲ್ಲರನ್ನು ಅಗಲಿದ ಹಿರಿಯ ಚೇತನ ಕುಶಾಲನಗರದಲ್ಲಿ ವಾಸವಿದ್ದ ಕಮಲ ಕರಿಯಪ್ಪ , ಹಿರಿಯ ಗಾಯಕರು ಬಳಗದ ನಿರ್ದೇಶಕರು ಆಗಿದ್ದ ಮಡಿಕೇರಿಯ ಲಿಯಾಕತ್ ಅಲಿ ಹಾಗೂ ಬಳಗದ ಸಕ್ರಿಯ ಸದಸ್ಯರಾಗಿದ್ದ ತಮ್ಮಯ್ಯ ನವರಿಗೆ ಸಂತಾಪ ಸೂಚಿಸಲಾಯಿತು . ಟಿ.ಪಿ ರಮೇಶ್ ರವರು ಇವರುಗಳ ಸಾಹಿತ್ಯ ಪರಿಷತ್ತಿನ ಬಳಗದ ಸೇವೆಯನ್ನು ಸ್ಮರಿಸಿ ಮಾತನಾಡಿದರು. ಬಳಗದ ವತಿಯಿಂದ ಸ್ಥಾಪಿಸಲ್ಪಟ್ಟಿರುವ ಟಿ.ಪಿ ರಮೇಶ್ ಧತ್ತಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಹಾಗೂ ಮಹಾ ಸಭೆಯನ್ನು ನಡೆಸುವುದರ ಬಗ್ಗೆ ಚರ್ಚಿಸಲಾಯಿತು. ಲೋಕನಾಥ್ ಅಮೇಚೂರ್ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಕೇಶವ ಕಾಮತ್ ,ಟಿ.ಪಿ ರಮೇಶ್ , ಕೆ.ಟಿ ಬೇಬಿ ಮ್ಯಾಥ್ಯೂ, ಉಮೇಶ್ , ಕೋಶಾಧಿಕಾರಿ ಕಡ್ಲೇರ ತುಳಸಿ ಮೋಹನ್ , ಸುನಿತಾ ಪ್ರೀತು ಸಭೆಯಲ್ಲಿ ಹಾಜರಿದ್ದರು. ಕಾರ್ಯದರ್ಶಿ ಭಾರತಿ ರಮೇಶ್ ಸರ್ವರನ್ನು ವಂದಿಸಿದರು .
ವರದಿ: ಪ್ರಿತುನ್ ಪೂವಣ್ಣ




















