ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ದ್ಯಾಮವ್ವಮ್ಮ ದುರ್ಗಮ್ಮರ ಜಾತ್ರೆ ಪ್ರಾರಂಭಭಕ್ತ ಸಾಗರದಲ್ಲಿ ತೆಗ್ಗಿ ಗ್ರಾಮದೇವತೆಗಳ ಮಹಾರಥೋತ್ಸವ

ಬಾಗಲಕೋಟೆ/ ಗುಳೇದಗುಡ್ಡ ಸಮೀಪದ ತೆಗ್ಗಿ ಗ್ರಾಮದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಗ್ರಾಮದೇವತೆಗಳಾದ ದ್ಯಾಮವ್ವಮ್ಮ ಮತ್ತು ದುರ್ಗವ್ವಮ್ಮರ ಜಾತ್ರೆ ಇಂದು ಸಂಭ್ರಮ ಸಡಗರದಿಂದ ಪ್ರಾರಂಭಗೊಂಡಿದೆ. ಮುಂಜಾನೆ ಗ್ರಾಮದೇವತೆಗಳ ತವರ ಮನೆಯಾದ ಬಡಿಗೇರ ಅವರ ಮನೆತನದವರಿಂದ ಗ್ರಾಮದೇವತೆಗಳು ಉಡಿ ತುಂಬಿಸಿಕೊಂಡು, ನಂತರ ಒಂಬತ್ತು ಬಾಬದ ಮನೆಯವರು ಹಾಗೂ ಗ್ರಾಮದ ಪ್ರತಿಯೊಂದು ಮನೆತನದವರು ಗ್ರಾಮದೇವತೆಗಳಿಗೆ ಬಂಗಾರ, ಬೆಳ್ಳಿ, ಹೂವು, ಹಣ್ಣು, ಸೀರೆ, ಹಸಿರು ಬಳೆ, ಎಲೆ, ಅಡಿಕೆ, ಉತ್ತತ್ತಿ, ಅರಸಿನಕೊಂಬು, ಬಾಳೆಹಣ್ಣು ಸೇರಿದಂತೆ ಸಾವಿರಾರು ಭಕ್ತರ ಸಮೂಹದವರು ದೇವತೆಗಳಿಗೆ ಸಂಭ್ರಮ ಸಡಗರ ಹಾಗೂ ಭಕ್ತಿಭಾವದಿಂದ ಉಡಿ ತುಂಬಿದರು.
ತೆಗ್ಗಿ ಗ್ರಾಮದ ಕುರಿಯವರ ಮನೆಯಿಂದ ರಥದ ಕಳಸವನ್ನು ತಂದು, ಮೇಟಿ ಅವರ ಮನೆಯಿಂದ ರಥದ ಹಗ್ಗವನ್ನು ಡೊಳ್ಳಿನ ವಾದ್ಯಗಳೊಂದಿಗೆ ತಂದು ಗ್ರಾಮದೇವತೆಗಳನ್ನು ರಥದಲ್ಲಿ ಎರಿಸಿಕೊಂಡು ತೆಗ್ಗಿ, ರಾಘಾಪೂರು, ತಿಮ್ಮಸಾಗರ, ಕೆಲವಡಿ, ನಿಂಗಾಪೂರ, ತೋಗಣಸಿ, ಹಂಸನೂರು, ಹಿರೇಬೂದಿಹಾಳ, ರೈಲ್ವೆ ಸ್ಟೇಶನ್ ಗ್ರಾಮಗಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಭಕ್ತರು ಹಾಗೂ ಗೋವಾ ರಾಜ್ಯದಿಂದ ಬಂದ ಭಕ್ತರು ಸೇರಿದಂತೆ ಸಾವಿರಾರು ಭಕ್ತಿ ಸಾಗರದಲ್ಲಿ ಗ್ರಾಮ ದೇವತೆಗಳ ಮಹಾರಥೋತ್ಸವ ಸಂಭ್ರಮ ಸಡಗರದಿಂದ ಜರುಗಿತು.
ರಥೋತ್ಸವದ ನಂತರ ಒಂದೊತ್ತು ಇದ್ದ ಗ್ರಾಮದ ಪ್ರತಿಯೊಂದು ಮನೆತನದವರಿಗೆ ಗ್ರಾಮದೇವತೆಗಳ ಹಂದರದಲ್ಲಿ ಉಡಿ ತುಂಬಿಸಿಕೊಂಡು ಪ್ರಸಾದ ಸ್ವೀಕರಿಸಿದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!