ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿದ್ಯಾರ್ಥಿಗಳಿಂದ ಆಶ್ರಮದ ಆಶ್ರಯದಾತರುಗಳ ಜೊತೆ ಆಪ್ತ ಸಮಾಲೋಚನೆ

ಸಿಂಧನೂರು : ಲಿಂಗಸೂಗೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಂದ ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ.)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂಧ್ಯ ಆಶ್ರಮದಲ್ಲಿ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಆಶ್ರಮದ ಆಶ್ರಯದಾತರುಗಳ ಆಪ್ತ ಸಮಾಲೋಚನೆ ಅವರುಗಳ ಜೀವನದ ಬಗ್ಗೆ ಹಲವಾರು ಅಧ್ಯಯನಗಳನ್ನು ಮಾಡುವ ಮೂಲಕ ಆಶ್ರಯದಾತರುಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಿ ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಆತ್ಮಸ್ಥೈರ್ಯದ ಸಂದೇಶದೊಂದಿಗೆ ಸೇವಾ ಕಾರ್ಯಗಾರ ಅತ್ಯಂತ ಅರ್ಥಪೂರ್ಣವಾಗಿ ನೆರವೇರಿತು.
ಈ ಕಾರ್ಯಗಾರದಲ್ಲಿ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸವಸ್ವಾಮಿ ಹಿರೇಮಠವರಿಂದ ಸಂಸ್ಕೃತಿ ಸಂಸ್ಕಾರ ಹಾಗೂ ವೃದ್ಧರ ಮತ್ತು ವಯಸ್ಕರ ಬುದ್ಧಿಮಾಂದ್ಯರ ಸೇವೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ನಂತರ ಈ ಕಾಲೇಜಿನ ಸಹಪ್ರಾಧ್ಯಾಪಕರಾದ ಸಂಗನಗೌಡ ಮಾತನಾಡಿ ಇಂದು ತಾವೆಲ್ಲರೂ ಕೂಡ ಈ ಆಶ್ರಮದಲ್ಲಿ ಆಶ್ರಯ ಬಿಡದಿರುವ ವೃದ್ಧರ ಆರೋಗ್ಯ ಮತ್ತು ಅವರ ನಿತ್ಯ ನಿರಂತರ ಬದುಕಿನ ಬಗ್ಗೆ ತಾವೆಲ್ಲರೂ ಅರಿತುಕೊಂಡಿದ್ದೀರಿ. ತಾವು ಪಡೆಯುವ ಶಿಕ್ಷಣ ಬರಿ ತಮ್ಮ ಜೀವನಕ್ಕಾಗಬಾರದು ಸಮಾಜಕ್ಕೂ ಕೂಡ ನಿಮ್ಮದೇ ಆದಂತ ಸೇವೆ ಸಲ್ಲಿಸುವ ಮೂಲಕ ಮಾದರಿಯಾಗಬೇಕು ಎನ್ನುವುದು ನಮ್ಮ ಆಶಯ ಮತ್ತು ವಿಶೇಷವಾಗಿ ಮಲಗಿದ್ದೇನೆ ಎಲ್ಲಾ ಚಟುವಟಿಕೆಗಳನ್ನು ಮಾಡಿಕೊಳ್ಳುವ ವೃದ್ಧರ ಸ್ಥಿತಿಯನ್ನು ತಾವೆಲ್ಲರೂ ತಿಳಿದುಕೊಂಡಿದ್ದೀರಿ. ವೈಜ್ಞಾನಿಕ ಜಗತ್ತಿನಲ್ಲಿ ತಾವು ನಮ್ಮ ಸಂಸ್ಕೃತಿ ಸಂಪ್ರದಾಯ ಉಳಿಸುವಂತಹ ಒಳ್ಳೆಯ ಭಾರತ ದೇಶದ ಪ್ರಜೆಗಳಾಗಬೇಕು ಎನ್ನುವುದು ನಮ್ಮ ಶಿಕ್ಷಣದ ಮೂಲ ಉದ್ದೇಶವಾಗಿದೆ ಎಂದು ವಿದ್ಯಾರ್ಥಿಗಳಲ್ಲಿ ಹಲವಾರು ಅನಿಸಿಕೆಗಳನ್ನು ಹಂಚಿಕೊಂಡರು. ನಂತರ ಉಪನ್ಯಾಸಕರಾದ ಡಾ. ನಾಗಮ್ಮ ಮಾತನಾಡಿ ಈ ಆಶ್ರಮದಲ್ಲಿನ ಸೇವಾ ಕಾರ್ಯಗಾರವು ತಮ್ಮ ಬದುಕಿನ ಬಹುದೊಡ್ಡ ಅಂಶವಾಗಿದೆ. ಇಲ್ಲಿರುವಂತ ಸಿಬ್ಬಂದಿಗಳು ಈ ಸಂಸ್ಥೆ ಮಾಡುತ್ತಿರುವಂತಹ ಯುವ ಕಾರ್ಯಗಳನ್ನು ತಾವೆಲ್ಲರೂ ಕೂಡ ಮೈಗೂಡಿಸಿಕೊಂಡು ಇಂತಹ ವೃದ್ಧಾಶ್ರಮಳು ಮುಂದಿನ ದಿನಮಾನಗಳಲ್ಲಿ ಇರಬಾರದು ಎನ್ನುವ ಸಂಕಲ್ಪ ಮಾಡಿಕೊಳ್ಳಿ ತಮ್ಮ ಹೆತ್ತವರನ್ನು ಸಮಾಜದಲ್ಲಿನ ಗುರುಹಿರಿಯರನ್ನು ಪೂಜಿಸಿ ಪ್ರೀತಿಸಿ ಅವರುಗಳಿಗೆ ಗೌರವ ನೀಡಿದಾಗ ಮಾತ್ರ ನಿಮ್ಮ ಶೀಕ್ಷಣಕ್ಕೆ ಅರ್ಥ ಸಿಗುತ್ತದೆ ಎಂದು ಹಲವಾರು ವಿಷಯಗಳನ್ನು ಪ್ರಸ್ತಾಪಿಸಿದರು.
ಈ ಕಾರ್ಯಗಾರದಲ್ಲಿ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಶ್ರೀಮಠ ಸೇವಾ ಟ್ರಸ್ಟ್ ನ ಸದಸ್ಯರಾದ ಸುಜಾತ ಹಿರೇಮಠ. ಆಶ್ರಮದ ಸಿಬ್ಬಂದಿಗಳಾದ ಸುಜಾತ ಮಲದ ಗುಡ್ಡ ಸಿದ್ದಯ್ಯ ಸ್ವಾಮಿ. ಮರಿಯಪ್ಪ. ಜ್ಯೋತಿ. ಮೀನಾಕ್ಷಮ್ಮ. ಲಕ್ಷ್ಮಿ. ಹಾಗೂ ಕಾಲೇಜಿನ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!