ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶನಿವಾರಸಂತೆ ಭಾರತ್ ಗ್ಯಾಸ್ ಅವ್ಯವಸ್ಥೆಗೆ ಕರವೇ ಸ್ವಾಭಿಮಾನಿ ಬಣದಿಂದ ಬ್ರೇಕ್

ಜಿಲ್ಲಾಧ್ಯಕ್ಷ ಪ್ರಾನ್ಸಿಸ್ ಡಿಸೋಜ ಅವರಿಂದ ದೂರು
ಅಧಿಕಾರಿಗಳ ಖಡಕ್ ವಾರ್ನಿಂಗ್ ಏಜೆನ್ಸಿ ಸೀಜ್ ಎಚ್ಚರಿಕೆ

ಶನಿವಾರಸಂತೆ : ಸ್ಥಳೀಯ ಭಾರತ್ ಗ್ಯಾಸ್ ಏಜೆನ್ಸಿಯ ಬೇಜವಾಬ್ದಾರಿತನ ಹಾಗೂ ಗ್ರಾಹಕರಿಗೆ ಸತತವಾಗಿ ಉಂಟಾಗುತ್ತಿದ್ದ ಅಡುಗೆ ಅನಿಲದ ಕೊರತೆಯ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ನಡೆಸಿದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಕರವೇ ದೂರಿನ ಹಿನ್ನೆಲೆಯಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಏಜೆನ್ಸಿ ಮಾಲೀಕರಿಗೆ ತೀವ್ರ ತರಾಟೆ ತೆಗೆದುಕೊಂಡ ಘಟನೆ ನಡೆದಿದೆ.

ಹೈರಾಣಾದ ಗ್ರಾಹಕರು :

ಶನಿವಾರಸಂತೆಯ ಈ ಭಾರತ್ ಗ್ಯಾಸ್ ಕಚೇರಿ ಸದಾ ಬೀಗ ಹಾಕಿಕೊಂಡಿರುತ್ತಿತ್ತು. ಇದರಿಂದಾಗಿ ದೂರದ ಊರುಗಳಿಂದ ಬರುವ ರೈತರು, ಹಿರಿಯ ನಾಗರಿಕರು, ಮಹಿಳೆಯರು ಗ್ಯಾಸ್‌ಗಾಗಿ ಅಲೆದಾಡಿ ಸುಸ್ತಾಗಿದ್ದರು. ಕಳೆದ ಎರಡು ತಿಂಗಳಿನಿಂದ ಅಡುಗೆ ಅನಿಲ ಸಿಗದೆ ಪರದಾಡುತ್ತಿದ್ದ ಗ್ರಾಹಕರು ತಮ್ಮ ನೋವನ್ನು ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜಾ ಅವರ ಮುಂದೆ ತೋಡಿಕೊಂಡಿದ್ದರು.

ಗ್ರಾಹಕರ ಮನವಿಗೆ ಸ್ಪಂದಿಸಿದ ಫ್ರಾನ್ಸಿಸ್ ಡಿಸೋಜಾ ಅವರು ಜಿಲ್ಲಾಧಿಕಾರಿಗಳಿಗೆ ಹಾಗೂ ಆಹಾರ ಇಲಾಖೆಯ ಉಪನಿರ್ದೇಶಕರಿಗೆ ಮತ್ತು ಸೋಮವಾರಪೇಟೆ ತಹಶೀಲ್ದಾರ್ ತುರ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಇದಕ್ಕೆ ತಕ್ಷಣ ಸ್ಪಂದಿಸಿದ ಮಡಿಕೇರಿಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರು ಶನಿವಾರಸಂತೆಗೆ ಭೇಟಿ ನೀಡಿದಾಗಲೂ ಕಚೇರಿ ಬೀಗ ಹಾಕಿದ್ದು ಕಂಡು ಬಂದಿದೆ. ಕೂಡಲೇ ಸಂಬಂಧಪಟ್ಟವರನ್ನು ಕರೆಸಿ ಬಾಗಿಲು ತೆಗೆಸಿದ ಅಧಿಕಾರಿಗಳು ಸಾರ್ವಜನಿಕರಿಗೆ ಸೇವೆ ನೀಡದಿದ್ದರೆ ನಿಮ್ಮ ಲೈಸೆನ್ಸ್ ರದ್ದುಗೊಳಿಸಿ, ಅಂಗಡಿ ಸೀಜ್ ಮಾಡುತ್ತೇವೆ ಎಂದು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಗೋದಾಮಿನ ಬಳಿ ಗ್ರಾಹಕರ ಆಕ್ರೋಶ
ಅಧಿಕಾರಿಗಳು ಏಜೆನ್ಸಿಯ ಗೋದಾಮಿಗೆ ಭೇಟಿ ನೀಡಿದಾಗ ಅಲ್ಲೂ ಕೂಡ ಬೀಗ ಹಾಕಿರುವುದು ಕಂಡುಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಹತ್ತಾರು ಗ್ರಾಹಕರು, ತಾವು ಅನುಭವಿಸುತ್ತಿರುವ ನರಕಯಾತನೆಯನ್ನು ಅಧಿಕಾರಿಗಳ ಮುಂದೆ ಬಿಚ್ಚಿಟ್ಟರು. “ನಮಗೆ ಎರಡು ತಿಂಗಳಿನಿಂದ ಗ್ಯಾಸ್ ಕೊಟ್ಟಿಲ್ಲ, ನ್ಯಾಯ ಕೊಡಿಸಿ” ಎಂದು
ಭಾರತ್ ಗ್ಯಾಸ್ ನ ಗ್ರಾಹಕರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕರಿಗೆ ಕೈಗೆ ಮನವಿ ಪತ್ರ ನೀಡಿದರು.

ಭಾರತ್ ಗ್ಯಾಸ್ ಡಿಸ್ಟ್ರಿಬ್ಯೂಟರ್ ಮೋಹನ್ ಅವರನ್ನು ಕರೆಸಿದ ಅಧಿಕಾರಿಗಳು, “ಗ್ರಾಹಕರಿಗೆ ಇನ್ನು ಮುಂದೆ ಇಂತಹ ತೊಂದರೆಯಾಗಬಾರದು. ಕೂಡಲೇ ವಿತರಣೆ ಸುಗಮಗೊಳಿಸಬೇಕು, ಇಲ್ಲವಾದಲ್ಲಿ ಕಾನೂನು ಕ್ರಮ ಅನಿವಾರ್ಯ” ಎಂದು ಖಡಕ್ ಸೂಚನೆ ನೀಡಿದರು. ಜನಸಾಮಾನ್ಯರ ಪರವಾಗಿ ನಿಂತ ಕರವೇ ಸ್ವಾಭಿಮಾನಿ ಬಣದಂದಿ ಜನಸಾಮಾನ್ಯರ ಪರವಾಗಿ ಗಟ್ಟಿಯಾಗಿ ಧ್ವನಿ ಎತ್ತಿದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವರದಿ : ಪ್ರಿತುನ್ ಪೂವಣ್ಣ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!