ಸಿರುಗುಪ್ಪ – ತಾಲೂಕು ತೆಕ್ಕಲಕೋಟೆ ಪಟ್ಟಣದ ಹೋಟೆಲ್ ಈರಣ್ಣ ಎಂಬವರಿಗೆ ಸೇರಿದ್ದ ಎರಡು ಸಿಲಿಂಡರ್ ಏಕಾಏಕಿ ಬ್ಲಾಸ್ಟ್ ಸಿಲಿಂಡರ್ ಬ್ಲಾಸ್ಟ್ ಆದ ಪರಿಣಾಮ ಹೋಟೆಲ್ ಹೊತ್ತಿ ಉರಿದ ಘಟನೆ ನಡೆದಿದೆ ಬುಧವಾರ ರಾತ್ರಿ ಎರಡು ಗಂಟೆಗೆ ಅವಘಡ ಸಂಭವಿಸಿದೆ ಹೋಟೆಲ್ ನಲ್ಲಿ ಈರಣ್ಣನ ಕುಟುಂಬಸ್ಥರು ಒಂಬತ್ತು ಜನ ಮಲಗಿದ್ದರು 9 ಜನರ ಪೈಕಿ ಸಂಪೂರ್ಣವಾಗಿ ಓರ್ವ ಬಾಲಕನಿದ್ದಾನೆ ಸಿಲಿಂಡರ್ ಸ್ಫೋಟದಲ್ಲಿ ಹತ್ತು ವರ್ಷದ ಶ್ರೀನಿವಾಸ್ ಗೆ ಗಂಭೀರ ಗಾಯವಾಗಿದೆ ಗಾಯಾಳು ಬಾಲಕನನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಕೊಡಿಸಲಾಗುತ್ತಿದ್ದು ಉಳಿದವರೆಲ್ಲಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಆಕಸ್ಮಿಕ ಬೆಂಕಿಯ ಕೆನ್ನಾಲಿಗೆಗೆ ಸಿಕ್ಕು ಹೋಟೆಲ್ ನ ವಸ್ತುಗಳೆಲ್ಲವೂ ಸುಟ್ಟು ಕರಕಲವಾಗಿವೆ ಅಲ್ಲದೆ ಜೀವನೋಪಾಯಕ್ಕೆ ಇದ್ದ ಹೋಟೆಲ್ ಗೆ ಬೆಂಕಿ ಬಿದ್ದಿದೆ ಹಾಗಾಗಿ ಹೋಟೆಲ್ ಮಾಲೀಕರು ಕಂಗಾಲಾಗಿದ್ದಾರೆ ಸಿಲಿಂಡರ್ ಬ್ಲಾಸ್ಟ್ ಆದ ಅಕ್ಕ ಪಕ್ಕದ ಎರಡು ಮೂರು ಹೋಟೆಲ್ ಗಳಿಗೆ ಬೆಂಕಿ ವ್ಯಾಪಿಸಿದೆ ಇದರ ಪರಿಣಾಮ ಟೈಯರ್ ಅಂಗಡಿಯೂ ಬೆಂಕಿಯಿಂದ ಹೊತ್ತಿ ಉರಿದಿದೆ ಘಟನೆ ಸಂಭಂದ ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ಮಸೀದಿ,ಅಬ್ದುಲ್ ಗೌಸ್, ಸಿರುಗುಪ್ಪ




















