ಸಿರುಗುಪ್ಪ- ತಾಲೂಕಿನ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರ ಚುನಾವಣೆಯಲ್ಲಿ ಚುನಾಯಿತರಾದ ಗವಿ ಸಿದ್ದಪ್ಪ, ಕುರುಬರ ಮಲ್ಲಿಕಾರ್ಜುನ, ಕೆ. ವಿ.ನಾಗರತ್ನಮ್ಮ,ಟಿ.ರಾಧಿಕಾ ಚಂದ್ರಕಾಂತ ಇವರು ಸ್ಪರ್ಧೆಯಲ್ಲಿ ಆಯ್ಕೆಯಾದ ಇವರ ಯಶಸ್ಸಿಗೆ ದೊರೆತಿರುವ ಗೌರವಕ್ಕೆ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಬಿ ಎಂ ನಾಗರಾಜ ಅವರ ಕಚೇರಿಯಲ್ಲಿ ಶಾಸಕರಿಗೆ ಗೌರವಿಸಿ ಸನ್ಮಾನಿಸಿ ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದರು. ಶಾಸಕ ಬಿ ಎಂ ನಾಗರಾಜ ಅವರು ಅವರ ಸನ್ಮಾನ ಸ್ವೀಕರಿಸಿ ಚುನಾಯಿತರಾದ ಶಿಕ್ಷಕರಿಗೆ ಗೌರವಿಸಿ ಸನ್ಮಾನಿಸಿ ಅಭಿನಂದಿಸಿ ಶುಭ ಹಾರೈಸಿದರು.
ಶಿಕ್ಷಕರ ಸಂಘದ ಮಾಜಿ ತಾಲೂಕಾಧ್ಯಕ್ಷರು ಎಂ. ಅರುಣಾ ಪ್ರತಾಪ್ ರೆಡ್ಡಿ, ಶ್ರೀಧರ, ಹನುಮಂತಪ್ಪ, ಚಂದ್ರಕಾಂತ, ಹನುಮನ ಗೌಡ, ರಾಮಚಂದ್ರ, ಸಾಕ್ಷರತ ಸದಸ್ಯ ಅಬ್ದುಲ್ ನಬಿ, ನಗರ ಸಭೆ ಮಾಜಿ ಸದಸ್ಯ ಹೆಚ್. ಗಣೇಶ್ ಸೇರಿದಂತೆ ಶಿಕ್ಷಕರು ಇದ್ದರು.
ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ




















