ಬಳ್ಳಾರಿ / ಕಂಪ್ಲಿ : ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅವರಿಗೆ ಚಿತ್ರದುರ್ಗದಲ್ಲಿ ಮೇ.9ರಂದು ಅಭಿಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಂಪ್ಲಿ ತಾಲೂಕು ಸೇರಿದಂತೆ ಜಿಲ್ಲೆಯ ವೀರಶೈವ ಲಿಂಗಾಯತ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ವೀರಶೈವ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎಂ. ನಾಗರಾಜಸ್ವಾಮಿ ಮನವಿ ಮಾಡಿದರು.
ಅವರು ಪಟ್ಟಣದ ಶಾರದಾ ಶಾಲೆಯ ವೀರಶೈವ ಸಂಘದ ಕಚೇರಿಯಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜನಪರ ಸೇವೆಗಾಗಿ ಇಡೀ ಜೀವನವನ್ನೇ ಮಾನ್ಯ ಯಡಿಯೂರಪ್ಪ ಅವರು ಮುಡುಪಾಗಿಟ್ಟಿದ್ದಾರೆ. ಆದ್ದರಿಂದ ಇವರ ಜನ್ಮದಿನದ ಅಂಗವಾಗಿ ಚಿತ್ರದುರ್ಗದಲ್ಲಿ ಅಭಿಮಾನೋತ್ಸವ ನಡೆಯಲಿದ್ದು, ಆ ಕಾರ್ಯಕ್ರಮಕ್ಕೆ ತೆರಳಲು ಕಂಪ್ಲಿ ಪಟ್ಟಣದ ಶಾರದಾ ಶಾಲೆ ಆವರಣದಿಂದ ಮೇ.9ರ ಬೆಳಿಗ್ಗೆ 7ಕ್ಕೆ ಚಿತ್ರದುರ್ಗಕ್ಕೆ ಮೂರು ಉಚಿತ ಬಸ್ ವ್ಯವಸ್ಥೆ ಜೊತೆಗೆ ಉಪಹಾರ ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ಅಭಿಮಾನೊತ್ಸವದಲ್ಲಿ ಪಾಲ್ಗೊಳ್ಳುವ ಆಸಕ್ತ ವೀರಶೈವ ಲಿಂಗಾಯತರು ಮೊ-ಎಲಿಗಾರ ವೆಂಕಟ ರೆಡ್ಡಿ(ಮೊ.ನಂ-98801 02196), ಎಚ್.ಎಸ್. ವೀರೇಶ್(ಮೊ.ನಂ+70193 53636) ಇವರನ್ನು ಸಂಪರ್ಕಿಸಿ ಹೆಸರು ನೋಂದಾಯಿಸುವಂತೆ ತಿಳಿಸಿದ್ದಾರೆ.
ಈ ಸಭೆಯಲ್ಲಿ ಮುಖಂಡರಾದ ಕೆ.ಎಂ. ಹೇಮಯ್ಯಸ್ವಾಮಿ, ಶಿವಪುತ್ರಪ್ಪ ಹೊನ್ನಳ್ಳಿ, ಇಟಗಿ ಬಸವ ರಾಜಗೌಡ, ಅಳ್ಳಳ್ಳಿ ವೀರೇಶ, ವಾಗೀಶ ಪಂಡಿತಾರಾಧ್ಯ, ಪುಟ್ಟಿ ಸಚಿನ್, ರೇಣುಕ ಯ್ಯಸ್ವಾಮಿ, ಸಂಘದ ಪದಾಧಿಕಾರಿಗಳು, ಸಮುದಾಯದವರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















