ಕಾಳಗಿ: ರಟಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 2025-26ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಈಗಾಗಲೇ ನೊಂದಣಿ ಮಾಡಿದ ರೈತರ ತೊಗರಿ ಖರೀದಿ ಕೇಂದ್ರವನ್ನು ಅಧಿಕೃತವಾಗಿ ಪ್ರಾರಂಭಿಸಲಾಗಿದೆ. ರೈತರು ಸರ್ಕಾರದ ಬೆಂಬಲ ಬೆಲೆಯ ಸೌಲಭ್ಯವನ್ನು ಪಡೆದುಕೊಳ್ಳಲು ಸಂಘದ ಅಧ್ಯಕ್ಷರಾದ ರೇವಣಸಿದ್ದಪ್ಪ ಬಡಾ ಅವರು ತಿಳಿಸಿದ್ದಾರೆ .
ಪ್ರತಿ ಕ್ವಿಂಟಾಲ್ ತೊಗರಿಗೆ ₹8,000 ಬೆಲೆ ನಿಗದಿಪಡಿಸಲಾಗಿದ್ದು, “ನಮ್ಮ ಭಾಗದ ರೈತರಿಗೆ ಅನುಕೂಲವಾಗಲೆಂದು ಈ ಕೇಂದ್ರ ತೆರೆಯಲಾಗಿದ್ದು, ಈಗಾಗಲೇ ನೊಂದಣಿ ಮಾಡಿದ ರೈತರು ಇದರ ಸದುಪಯೋಗ ಪಡೆಯಬೇಕು” ಎಂದು ಸಂಘದ ಅಧ್ಯಕ್ಷರಾದ ರೇವಣಸಿದ್ಧ ಬಡಾ ತಿಳಿಸಿರುತ್ತಾರೆ.
ವರದಿ ಚಂದ್ರಶೇಖರ್ ಆರ್. ಪಾಟೀಲ್




















