ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನೀರಿನ ಟ್ಯಾಂಕ್‌ನಲ್ಲಿ ಯುವಕರ ರೀಲ್ಸ್ ಗಳ ಹುಚ್ಚಾಟ ಜೀವಕ್ಕೆ ಅಪಾಯವಾದರೆ ಯಾರು ಹೊಣೆ?

ಬಳ್ಳಾರಿ / ಕಂಪ್ಲಿ : ಪಟ್ಟಣದ ಜನರ ನೀರಿನ ದಾಹ ನೀಗಿಸಲು ಸರಬರಾಜು ಮಾಡುವ ನೀರು ಸಂಗ್ರಹಣ ಘಟಕದ ಬೃಹತ್ ಟ್ಯಾಂಕ್‌ಗಳು ಈಗಾ ಯುವಕರ ರೀಲ್ಸ್ಗಳಿಗೆ ವೇದಿಕೆಯಂತಾಗಿದ್ದು, ರಕ್ಷಣಾ ಕಂಬಿಗಳಿಲ್ಲದ ಟ್ಯಾಂಕ್ ಮೇಲಿನ ಮೇಲ್ತೊಟ್ಟಿಗಳಲ್ಲಿ ಯುವಕರ ರೀಲ್ಸ್ ಹುಚ್ಚಾಟಕ್ಕೆ ಕಡಿವಾಣ ಇಲ್ಲದಂತಾಗಿದೆ.
ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವುದಕ್ಕಾಗಿ ವಿವಿಧ ಭಾಗಗಳಲ್ಲಿ ನಾಲ್ಕು ನೀರು ಸಂಗ್ರಹ ಮೇಲ್ತೊಟ್ಟಿಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಅಲ್ಲಿ ಸಮರ್ಪಕವಾಗಿ ರಕ್ಷಣಾ ವ್ಯವಸ್ಥೆ ಇಲ್ಲದೇ ಇರುವುದರಿಂದ ಬೃಹತ್ ನೀರು ಸಂಗ್ರಹ ಮೇಲ್ತೊಟ್ಟಿಗಳು ಯುವಕರಿಗೆ ರೀಲ್ಸ್ ಮಾಡಲು ಅನುಕೂಲವಾಗಿದ್ದು, ಸಂಬಂಧ ಪಟ್ಟ ಅಧಿಕಾರಿಗಳು ಮಾತ್ರ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ.
ಪಟ್ಟಣದಲ್ಲಿ ಸರಾಗವಾಗಿ ಕುಡಿಯುವ ನೀರು ಸರಬರಾಜು ಮಾಡಲು ಪಟ್ಟಣದ ನಾಲ್ಕು ಮೂಲೆಗಳನ್ನು ಬೃಹತ್ ನೀರು ಸಂಗ್ರಹ ಮೇಲ್ತೊಟ್ಟಿಗಳನ್ನು ನಿರ್ಮಿಸಲಾಗಿದ್ದು, ಇವುಗಳಿಗೆ ತುಂಗಭದ್ರಾ ನದಿಯಿಂದ ನೀರನ್ನು ಪಟ್ಟಣದ ಮೂಲ ನೀರು ಸಂಗ್ರಹಗಾರಕ್ಕೆ ಸರಬರಾಜು ಮಾಡಿ ಅಲ್ಲಿ ನೀರನ್ನು ಶುದ್ಧೀಕರಿಸಿ ನಂತರ ಮೇಲ್ತೊಟ್ಟಿಗಳಿಗೆ ಸರಬರಾಜು ಮಾಡಿ ನಂತರ ಅಲ್ಲಿಂದ ಪಟ್ಟಣದ ವಿವಿಧ ಭಾಗಗಳಿಗೆ ನೀರನ್ನು ಸರಬರಾಜು ಮಾಡುತ್ತಾರೆ.
ಆದರೆ ನೀರು ಸಂಗ್ರಹ ಮೇಲ್ತೊಟ್ಟಿಗಳನ್ನು ನಿರ್ಮಿಸಿದ ಸ್ಥಳದಲ್ಲಿ ಮುಳ್ಳಿನ ಗಿಡಗಂಟೆಗಳು ಬೆಳೆದು ಪರಿಸರವೆಲ್ಲಾ ಕಾಡಿನಂತಾಗಿದೆ. ಜೊತೆಗೆ ಈ ನೀರು ಸಂಗ್ರಹ ಮೇಲ್ತೊಟ್ಟಿಗಳಿಗೆ ರಕ್ಷಣಾ ಗೋಡೆಗಳು ಇಲ್ಲದೇ ಇರುವುದರಿಂದ ಸಾರ್ವಜನಿಕರು ಬೇಕಾಬಿಟ್ಟಿ ಅಲ್ಲಿ ಸಂಚರಿಸುತ್ತಿದ್ದಾರೆ ಹಾಗೂ ರಾತ್ರಿಯಾದರೆ ಕುಡುಕರ ಅಡ್ಡ ಆಗಿದೆ. ಮೇಲ್ತೊಟ್ಟಿಯ ಸ್ಥಳದಲ್ಲಿ ತಂತಿ ಬೇಲಿ ಹಾಕಿ ಗೇಟುಗಳನ್ನು ಅಳವಡಿಸಿದ್ದಾರೆ, ಆದರೆ ಅದಕ್ಕೆ ಬೀಗಗಳನ್ನು ಹಾಕದೇ ಇರುವುದರಿಂದ ಸಾರ್ವಜನಿಕರು, ಕಿಡಿಗೇಡಿಗಳು ಅಲ್ಲಿ ವಿವಿಧ ಕಾರ್ಯಗಳಲ್ಲಿ ತೊಡಗಿರುತ್ತಾರೆ. ಇನ್ನು ಕೆಲವರಂತೂ ನೀರು ಸಂಗ್ರಹ ಮೇಲ್ತೊಟ್ಟಿಯ ಮೇಲೆ ಹೋಗಿ ರೀಲ್ಸ್ ಮಾಡುವಲ್ಲಿ ನಿರತರಾಗಿರುತ್ತಾರೆ.
ಅಕಸ್ಮಾತ್ ರೀಲ್ಸ್ ಮಾಡುವ ಸಂದರ್ಭದಲ್ಲಿ ಮೇಲಿಂದ ಕೆಳಗೆ ಬಿದ್ದರೆ ಗತಿ ಏನು? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾದ ಪುರಸಭೆಯವರು ಮಾತ್ರ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ, ಜೊತೆಗೆ ನೀರು ಸಂಗ್ರಹ ತೊಟ್ಟಿಗಳಿಗೆ ರಕ್ಷಣಾ ಗೋಡೆಗಳನ್ನು ನಿರ್ಮಿಸುತ್ತಿಲ್ಲ. ಅಪಾಯಗಳು ಸಂಭವಿಸುವ ಮುನ್ನ ಸೂಕ್ತ ಕ್ರಮಗಳನ್ನು ಕೈಗೊಳ್ಳಲಿ ಎನ್ನುವುದು ಸಾರ್ವಜನಿಕರ ಅನಿಸಿಕೆಯಾಗಿದೆ.

” ಪುರಸಭೆ ವ್ಯಾಪ್ತಿಯಲ್ಲಿ ನಾಲ್ಕು ನೀರು ಸಂಗ್ರಹ ಮೇಲ್ತೊಟ್ಟಿಗಳಿವೆ ಅವುಗಳ ಸ್ಥಳದಲ್ಲಿ ಗಿಡಗಂಟೆಗಳು ಬೆಳೆದಿದ್ದು, ತೆರವುಗೊಳಿಸಲು ನೈರ್ಮಲ್ಯ ವಿಭಾಗಕ್ಕೆ ಸೂಚಿಸಲಾಗಿದ್ದು, ಈ ಪ್ರದೇಶಕ್ಕೆ ನಿರ್ಬಂಧಿತ ಪ್ರದೇಶವೆಂದು ನಾಮಫಲಕ ಅಳವಡಿಸಲು ತಿಳಿಸಿದ್ದು, ಸಂಗ್ರಹ ತೊಟ್ಟಿಗಳ ತಂತಿ ಬೇಲಿಯನ್ನು ತಾತ್ಕಾಲಿಕವಾಗಿ ಹಾಕಿಸಿ ಬೀಗಗಳನ್ನು ಹಾಕಲಾಗುವುದು ಮತ್ತು ನಿರಂತರ ಕಾವಲು ಮಾಡಲಾಗುವುದು. ಒಂದು ವೇಳೆ ನೀರು ಸಂಗ್ರಹ ಮೇಲ್ತೊಟ್ಟಿ ಮೇಲೆ ಯುವಕರು, ಕಿಡಿಗೇಡಿಗಳು ರೀಲ್ಸ್ ಮಾಡುವುದು ಕಂಡು ಬಂದರೆ ಪೊಲೀಸ್ ಇಲಾಖೆ ಮೂಲಕ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು “.

  • ಬಿ.ಮಲ್ಲಿಕಾರ್ಜುನ. ಪ್ರಭಾರಿ ಮುಖ್ಯಾಧಿಕಾರಿ, ಪುರಸಭೆ, ಕಂಪ್ಲಿ.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!