ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು.
1933 ರಲ್ಲಿ ನಮ್ಮ ತಾತನವರು ತೀರಿಕೊಂಡರು ಹಾಗೂ ನಮ್ಮ ತಂದೆಯವರು ತಮ್ಮ ಶಿಕ್ಷಣ ಮುಂದುವರಿಸುವುದಕ್ಕಾಗಿ ನಾರಾಯಣಪೇಟೆಗೆ ಹೋಗಬೇಕಾಯಿತು.
ಯಾದಗಿರಿ / ಗುಲ್ಬರ್ಗಾ ಜಿಲ್ಲೆಗಳ ಗಡಿಗೆ ಅಂಟಿಕೊಂಡಿರುವ ನಾರಾಯಣಪೇಟೆ ಊರು ತೆಲಂಗಾಣದ ಮಹಬುಬ ನಗರ ಜಿಲ್ಲೆಗೆ ಒಳಪಟ್ಟಿದೆ. ಅಲ್ಲಿಯ ಶಿಕ್ಷಣದ ಮಾಧ್ಯಮ ಉರ್ದು. ನಮ್ಮ ತಂದೆಯವರು ತಮ್ಮ13 ನೇ ಎಳೆಯ ವಯಸ್ಸಿನಲ್ಲಿ ಉರ್ದು ಅಕ್ಷರಗಳನ್ನು ತಪ್ಪಿಲ್ಲದಂತೆ ಬರೆಯಲು ಕಲಿತರು. ಅವರು” ಹನ್ ರೆ ಅರಬ್ “ ಎಂಬ ಉರ್ದು ನಾಟಕವನ್ನು ಕೂಡಾ ನೋಡಿದರು .
ಮುಂದೆ ಅವರು ಹಿಂದಿಯ ವಿವಿಧ ಪರೀಕ್ಷೆಗಳನ್ನು ತೇರ್ಗಡೆ ಮಾಡಿದರು. ಅವರು ಹಿಂದಿ ಪ್ರಚಾರ ಸಭಾ, ಮದ್ರಾಸ್ ದ ‘ಪ್ರಥಮಾ ‘ ಪರೀಕ್ಷೆಯನ್ನು 1949 ರಲ್ಲಿ ಪಾಸಾದರು, ಎರಡನೇ ಪರೀಕ್ಷೆಯಾದ ‘ಮಾಧ್ಯಮಾ’ ವನ್ನು ಬಾಗಲಕೋಟೆಯಲ್ಲಿ ಬರೆದು ಇಡೀ ಬಾಗಲಕೋಟೆ ಕೇಂದ್ರಕ್ಕೆ ಪ್ರಥಮರಾಗಿ ತೇರ್ಗಡೆ ಆದರು. ಅವರು ಹಿಂದಿ ಕಲಿಕೆಯನ್ನು ಮುಂದುವರಿಸಿ ‘ರಾಷ್ಟ್ರಭಾಷಾ’ ಪರೀಕ್ಷೆಯನ್ನು ಮುಧೋಳದಲ್ಲಿ ಬರೆದು ಅದನ್ನು ಎರಡನೇ ಶ್ರೇಣಿಯಲ್ಲಿ ತೇರ್ಗಡೆಯಾದರು.
ಅವರು ಸಂಸ್ಕೃತ ಭಾಷೆಯನ್ನು ತಮ್ಮ ನಿವೃತ್ತಿಯ ನಂತರ ಕಲಿತರು. ಹೀಗೆ ಅವರಿಗೆ 6 ಭಾಷೆಗಳು, ಅಂದರೆ ಹಿಂದಿ ಮರಾಠಿ, ಇಂಗ್ಲಿಷ್, ಕನ್ನಡ, ಉರ್ದು, ಸಂಸ್ಕೃತ, ಭಾಷೆಗಳು ಬರುತ್ತಿದ್ದವು. ಹೀಗೆ ಭಾಷೆಗಳು ಅವರ ಆಸ್ತಿಯಾಗಿತ್ತು.
( ಹಿಂದಿ ಪರೀಕ್ಷೆಯ ಪ್ರಮಾಣಪತ್ರವನ್ನು ಲಗತ್ತಿಸಲಾಗಿದೆ- ಅವರು ಉರ್ದುವಿನಲ್ಲಿ 10 ರಲ್ಲಿ 9 ಅಂಕಗಳನ್ನು ಗಳಿಸಿದ್ದರು).
Asset 20 : ಗಳಿಸಿದ ಹಣವನ್ನು ಯಾರೋ ಕಿತ್ತುಕೊಳ್ಳಬಹುದು, ಆದರೆ ಸಂಪಾಸಿದ ಜ್ಞಾನವನ್ನು ಬೇರೆಯವರು ಕಿತ್ತುಕೊಳ್ಳುವುದು ಅಸಾಧ್ಯ.ಜ್ಞಾನವೇ ನಿಜವಾದ ಆಸ್ತಿ. ಅದನ್ನು ಹಂಚಿದಷ್ಟೂ ವೃದ್ಧಿ ಆಗುತ್ತಲೇ ಇರುತ್ತದೆ. ಅದಕ್ಕೇ ಏನೋ ನಮ್ಮಲ್ಲಿ ವೇದಾಧ್ಯಯನಕ್ಕೆ ಇತ್ತೀಚೆಗೆ ಶಿಕ್ಷಣಕ್ಕೆ ಹೆಚ್ಚು ಪ್ರಾಶಸ್ತ್ಯ!!ಸರಸ್ವತಿ ಇದ್ದಲ್ಲಿ ಲಕ್ಷ್ಮೀ ಬೆನ್ನುಹತ್ತಿ ಬರುತ್ತಾಳೆ!.
- Matsendra Joshi, RBI Layout J P nagar Bangalore.
Asset 20 ಸರ್ ನಾನು ನಿಮ್ಮ ತಂದೆ ತಾಯಿಗಳ ಆಶೀರ್ವಾದ ಪುಸ್ತಕವನ್ನು ಸಂಪೂರ್ಣವಾಗಿ ಓದಿದ್ದೇನೆ. ಇಂದಿನ ಪೀಳಿಗೆಗೆ ಬೇಕಾಗಬಹುದಾದಂತ ಬೇಕಾದಷ್ಟು ಮೌಲ್ಯಗಳು ಆ ಪುಸ್ತಕದಲ್ಲಿಇವೆ. ಬಹು ಉಪಯುಕ್ತವಾದ ಪುಸ್ತಕ. ನಾನು ಬಹು ಮನಸಿಟ್ಟು ಓದಿದ ಕೆಲವು ಪುಸ್ತಕಗಳಲ್ಲಿ ಇದು ಕೂಡ ಒಂದು.
- Smt. Geeta Iddalgi, Teacher, Hungund.
Asset 20 ನಿಮಗೆ ನಿಮ್ಮ ತಂದೆ ತಾಯಿಯರ ಬಗ್ಗೆ ಇರುವ ಗೌರವ ನೋಡಿ ನನ್ನ ಹೃದಯ ತುಂಬಿ ಬಂತು , ನಿಮ್ಮ ಬಗ್ಗೆ ಗೌರವ ಇನ್ನೂ ಹೆಚ್ಚಾಯಿತು.
ಮಾನ್ಯ ಪಿ, ಎಸ್, ಕುಲಕರ್ಣಿ ಅವರೇ, ಎಲ್ಲಾ ತಂದೆ ತಾಯಿಗಳ ಹಾಗೆ ನಿಮ್ಮ ತಂದೆ ತಾಯಿಗಳು ಅವರ ಕರ್ತವ್ಯ ವನ್ನು ನಿಭಾಯಿಸಿದ್ದಾರೆ. ಆದರೆ ನೀವು ಅದನ್ನು ಧನಾತ್ಮಕ ರೀತಿಯಲ್ಲಿ ನೋಡಿ, ಜೀವನದಲ್ಲಿ ಅಳವಡಿಸಿ, ಒಳ್ಳೆಯ ಮಾರ್ಗದಲ್ಲಿ ನಡೆಯುತ್ತಿದ್ದೀರಿ. ಅದು ನಿಮ್ಮ ದೊಡ್ಡ ಗುಣ. ನಿಮ್ಮ ತಂದೆ ತಾಯಿಗಳು ನಿಮ್ಮನ್ನು ಹರಸುತ್ತಾರೆ. ನಿಮ್ಮ ಪುಸ್ತಕವನ್ನು ಎಲ್ಲರೂ ಓದಿ ಸ್ವಲ್ಪವಾದರೂ ಅವರವರ ತಂದೆ ತಾಯಿಗಳಿಗೆ ಗೌರವ ಕೊಟ್ಟರೆ ನಿಮ್ಮ ಬರಹ ಸಾರ್ಥಕವಾಗುತ್ತದೆ.
– ಇಂತಿ
ನಿಮ್ಮಅಭಿಮಾನಿ
ಗಂಗಾ ನಾಡಿಗೇರ
( ಕುಲಕರ್ಣಿ), Bangalore.
- ಪ್ರಮೋದ್ ಕುಲಕರ್ಣಿ




















