
ವಿಜಯಪುರ ಜಿಲ್ಲೆಯ ತಾಳಿಕೋಟೆ : ಗಡಿ ಸೋಮನಾಳ ರಸ್ತೆಯಲ್ಲಿರುವ ನೂತನ ಅಗ್ನಿಶಾಮಕ ಹಾಗೂ ತುರ್ತು ಸೇವಾ ಕಟ್ಟಡ ಹಾಗೂ ನೂತನ ಅಗ್ನಿಶಾಮಕ ವಾಹನಕ್ಕೆ ದಿನಾಂಕ 11- 6- 2026 ಗುರುವಾರದಂದು ಮೊದಲು ಅಗ್ನಿ ಶಾಮಕ ದಳದ ಸಿಬ್ಬಂದಿಗಳು ವಾಹನ ಉದ್ಘಾಟಕರಾಗಿ ಆಗಮಿಸಬೇಕೆಂದು ಸ್ಥಳೀಯ ಶಾಸಕರಾದ ಶ್ರೀ ಮಾನ್ಯ ಸಿ ಎಸ್ ನಾಡಗೌಡರಿಗೆ ತಮ್ಮ ಪೆರೇಡ್ ಮುಖಾಂತರ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಪುರಸಭೆ ಮಾಜಿ ಸದಸ್ಯರುಗಳಾದ ಪ್ರಭುಗೌಡ ಮದರ್ಕಲ್, ಎಪಿಎಂಸಿ ಮಾಜಿ ಅಧ್ಯಕ್ಷರಾದ ಎಂ. ಜಿ. ಪಾಟೀಲರು, ಮಾಜಿ ತಾಳಿಕೋಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿದ್ದನಗೌಡ ಪಾಟೀಲರು, ಬಿಂಜಲಬಾವಿ ಸುರೇಶ ನಾಡಗೌಡರು, ಹೆಚ್. ಎಂ.ನಾಯ್ಕ ಹಾಗೂ ಪುರಸಭೆ ಮಾಜಿ ಸದಸ್ಯರಾದ ಮನ್ಸೂರ್ ಅವರು ಸ್ಥಳೀಯ ಗುತ್ತಿಗೆದಾರರಾದ ಕೆಂಭಾವಿಯವರು, ಮುಸ್ಲಿಂ ಬಾಂಧವರ ಗುರುಗಳಾದ ಸಯ್ಯದ್ ಅವರು, ಸ್ಥಳೀಯ ತಾಲೂಕು ಆಡಳಿತ ವರ್ಗದವರು, ಸ್ಥಳೀಯ ಆರಕ್ಷಕ ಸಿಬ್ಬಂದಿಯವರು, ವಿಜಯಪುರ ಹಾಗೂ ಮುದ್ದೇಬಿಹಾಳದ ಅಗ್ನಿ ಶಾಮಕ ದಳದ ಮೇಲಾಧಿಕಾರಿಗಳು ,ಸಹ ಸಿಬ್ಬಂದಿಗಳು, ಶಾಸಕರ ಅಭಿಮಾನಿಗಳು, ಸ್ಥಳೀಯ ಹೋಂ ಗಾರ್ಡ್ ಸಿಬ್ಬಂದಿಗಳು ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಸದಸ್ಯರುಗಳು ಭಾಗವಹಿಸಿ ಈ ಉದ್ಘಾಟನೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರು.
ವರದಿ ಸಂಗಮೇಶ ಸಿ. ಚೌದ್ರಿ




















