ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಸವಕಲ್ಯಾಣದಲ್ಲಿ ಬಸವ ತತ್ವಕ್ಕೆ ವಿರುದ್ಧವಾದ ಕಾರ್ಯಕ್ರಮ ಬೇಡ -ಬಸವಪರ ಸಂಘಟನೆಗಳಿಂದ ಜಿಲ್ಲಾಡಳಿತಕ್ಕೆ ಮನವಿ.

ಚಿಟಗುಪ್ಪ: ಬಸವಕಲ್ಯಾಣವು ಜಗತ್ತಿಗೆ ಸಮಾನತೆ, ಕಾಯಕ ಮತ್ತು ದಾಸೋಹದ ಸಂದೇಶ ನೀಡಿದ ಬಸವಣ್ಣನವರ ನೆಲ. ಇಂತಹ ಪವಿತ್ರ ನೆಲದಲ್ಲಿ ಬಸವಾದಿ ಶರಣರ ಮೂಲ ತತ್ವಗಳಿಗೆ ವಿರುದ್ಧವಾದ ಯಾವುದೇ ಕಾರ್ಯಕ್ರಮಗಳು ನಡೆಯಬಾರದು ಎಂದು ಬಸವ ತತ್ವ ಪ್ರಚಾರಕಿ ಶರಣೆ ಇಂದುಮತಿ ಗಾರಂಪಳ್ಳಿ ಅಕ್ಕನವರು ಹೇಳಿದರು.

ಪಟ್ಟಣದಲ್ಲಿ ಮಾನ್ಯ ತಹಶೀಲ್ದಾರ್ ಅವರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಮಾತನಾಡಿದ ಅವರು ಬಸವಾದಿ ಶರಣರ ಮೌಲ್ಯಗಳು ಎಂದರೆ ಮಾನವೀಯತೆ, ಸಹಬಾಳ್ವೆ, ಸಮಾನತೆ ಮತ್ತು ಶಾಂತಿ. ಈ ಮೌಲ್ಯಗಳಿಗೆ ಧಕ್ಕೆ ತರುವ ಯಾವುದೇ ಪ್ರಯತ್ನವನ್ನು ಮಾಡುವುದು ತಾಲೂಕಿನ ಬಸವಪರ ಸಂಘಟನೆಗಳು ಖಂಡಿಸುತ್ತೇವೆ. “ಅನುಭವ ಮಂಟಪ” ಹೆಸರೇ ಹೇಳುವ ಹಾಗೆ – ಇಲ್ಲಿ ಎಲ್ಲಾ ಮತ, ಜಾತಿ, ಭಾಷೆಯ ಜನರಿಗೆ ಒಂದೇ ಆಸನ. ಈ ಪರಂಪರೆಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ.
ಕಾರಣ ಬಸವಕಲ್ಯಾಣದಲ್ಲಿ ಇದೆ ತಿಂಗಳು 28 ರಂದು ನಡೆಯಲಿರುವ ಬಸವಾದಿ ಶರಣರ ಹಿಂದೂ ಸಮಾವೇಶವನ್ನು ರದ್ದುಗೊಳಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿದೆ. ಆದ್ದರಿಂದ ಬಸವಕಲ್ಯಾಣದ ಪಾವಿತ್ರ್ಯಕ್ಕೆ ಚ್ಯುತಿ ಬಾರದಂತೆ, ಬಸವ ತತ್ವಗಳ ರಕ್ಷಣೆಗಾಗಿ, ಸಾಮಾಜಿಕ ಸೌಹಾರ್ದತೆ ಕಾಪಾಡಲು ಸಂಬಂಧಿಸಿದ ಕಾರ್ಯಕ್ರಮದ ಬಗ್ಗೆ ಕರ್ನಾಟಕ ಸರ್ಕಾರ ಮತ್ತು ಜಿಲ್ಲಾಡಳಿತವು ಕೂಲಂಕುಷವಾಗಿ ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ವಿನಂತಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸಂಗಮೇಶ ಎನ್ ಜವಾದಿ ಮಾತನಾಡಿ ನಮ್ಮ ಹೋರಾಟ ಯಾವುದೇ ವ್ಯಕ್ತಿ ಅಥವಾ ಸಮುದಾಯದ ವಿರುದ್ಧವಲ್ಲ,ಬಸವಣ್ಣನವರ ತತ್ವಗಳ ರಕ್ಷಣೆ ಮತ್ತು ಸಾಮಾಜಿಕ ಸೌಹಾರ್ದತೆಯ ಪರವಾಗಿದೆ.
ಹಿಂದೂ ಧರ್ಮದ ಸಮಾವೇಶಕ್ಕೆ ನಮ್ಮ ವಿರೋಧವಿಲ್ಲ,ನಾವು ಭಾಗವಹಿಸುತ್ತೇವೆ, ಆದರೆ ಬಸವಾದಿ ಶರಣರ ಹಿಂದೂ ವಿರೋಧಿ ಸಮಾವೇಶಕ್ಕೇ ನಮ್ಮ ಸಂಪೂರ್ಣ ವಿರೋಧ ಇದೆ, ಬಸವಣ್ಣನವರ ,ಬಸವ ತತ್ವ ಸಿದ್ದಾಂತವನ್ನು ಅವಮಾನ ಮಾಡುವುದನ್ನು ಖಂಡಿತವಾಗಿಯೂ ನಾವ್ಯಾರು ಸಹಿಸುವುದಿಲ್ಲ.ನಮ್ಮ ಹೋರಾಟ ಯಾವುದೇ ವ್ಯಕ್ತಿ, ಸಮುದಾಯ ಅಥವಾ ಧರ್ಮದ ವಿರುದ್ಧವಲ್ಲ. ನಮ್ಮ ಹೋರಾಟ ಬಸವಣ್ಣನವರ ಸಾರ್ವಕಾಲಿಕ ತತ್ವಗಳ ರಕ್ಷಣೆಗಾಗಿ ಮತ್ತು ಬಸವಕಲ್ಯಾಣದ ಸೌಹಾರ್ದತೆಯ ಪರವಾಗಿ ಸದಾ ಕಾಲ ಮಾತ್ರ ಇರುತ್ತದೆ ಎಂದರು.

ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರ ಚಂದ್ರಶೇಖರ ತಂಗಾ ಮಾತನಾಡಿ ಬಸವಕಲ್ಯಾಣವು ಕೇವಲ ಒಂದು ಊರಲ್ಲ. ಇದು 12ನೇ ಶತಮಾನದಲ್ಲಿ ಜಗತ್ತಿಗೆ “ವಿಶ್ವಮಾನವ ಸಂದೇಶ” ನೀಡಿದ ಅನುಭವ ಮಂಟಪದ ನೆಲ.
“ಜಾತಿ ಇಲ್ಲ, ಧರ್ಮ ಇಲ್ಲ, ಉನ್ನತ-ಕೀಳಿಲ್ಲ” – ಈ ಸಮಾನತೆಯ ತತ್ವಕ್ಕೆ ಬಸವಕಲ್ಯಾಣವೇ ಜನ್ಮ ನೀಡಿತು. “ಕಾಯಕವೇ ಕೈಲಾಸ, ದಾಸೋಹವೇ ಧರ್ಮ” ಎಂದು ಶ್ರಮಜೀವಿಗಳನ್ನು ಕೈ ಎತ್ತಿ ಸ್ವಾಗತಿಸಿದ ಪವಿತ್ರ ಭೂಮಿ ಇದು.ಆದ್ದರಿಂದ ಇಂತಹ ಪವಿತ್ರ ನೆಲದಲ್ಲಿ ಬಸವಾದಿ ಶರಣರ ಮೂಲ ತತ್ವಗಳಿಗೆ ವಿರುದ್ಧವಾದ, ವಿಭಜನೆ ಮಾಡುವ, ದ್ವೇಷ ಹರಡುವ ಯಾವುದೇ ಕಾರ್ಯಕ್ರಮಗಳು ನಡೆಯಬಾರದು ಎಂದರು.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!