
ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಕೊಡಗೇನಹಳ್ಳಿ ಹೋಬಳಿಯ ಸಿಂಗನಹಳ್ಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಬರುವ ಎಲ್ಲಾ ಸರ್ಕಾರಿ ಶಾಲೆಗಳಿಗೆ ನೋಟ್ ಬುಕ್ ಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು.
ಸಮಾಜಕ್ಕೆ ಸೇವೆ ಸಲ್ಲಿಸು ಉದ್ದೇಶಕ್ಕಾಗಿಯೇ ನಮ್ಮ ಕ್ಷೇತ್ರದ ಶಾಸಕರಾದ ಕೆ ಎನ್ ರಾಜಣ್ಣನವರು ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ಆರ್ಥಿಕವಾಗಿ ಒರೆಯಾಗಬಾರದೆಂದು ನೋಟ್ ಬುಕ್ ಹಾಗೂ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಟ್ರ್ಯಾಕ್ ಸೂಟ್ ಶೂಗಳನ್ನು ಉಚಿತವಾಗಿ ನೀಡುತ್ತಿದ್ದಾರೆ. ಈ ಕಾರ್ಯಕ್ರಮದಿಂದ ಗ್ರಾಮೀಣ ಭಾಗದ ಮಕ್ಕಳು ವಿದ್ಯಾರ್ಥಿಗಳಿಗೂ ಅವರ ಪೋಷಕರಿಗೂ ತುಂಬಾ ಅನುಕೂಲವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಿಂಗನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿನೋದ್ ಕುಮಾರ್ ರವರು ನಮ್ಮ ಭಾಗದ ಪೋಷಕರ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅವರು ಪಡುವ ಕಷ್ಟಗಳನ್ನು ನೋಡಿ ನಮ್ಮ ಶಾಸಕರು ಮಾಡಿರುವ ಈ ಯೋಜನೆಯು ತುಂಬಾ ಅನುಕೂಲವಾಗಿದೆ. ನಮ್ಮ ಶಾಸಕರು ನಮಗಾಗಿ ನಾವು ಏನು ಮಾಡಿದ್ದೇವೆ ಎಂಬುದು ಮುಖ್ಯವಲ್ಲ ಬೇರೆಯವರಿಗೆ ನಮ್ಮ ಕ್ಷೇತ್ರದ ಜನರಿಗೆ ಏನು ಮಾಡಿದರೆ ಉಪಯೋಗವಾಗುತ್ತದೆ ಎಂಬುದು ಮುಖ್ಯ. ಅದು ವಿದ್ಯಾರ್ಥಿಗಳ ಜೀವನವನ್ನು ಶಾಶ್ವತವಾಗಿ ಸಾರ್ಥಕ ಆಗುವಂತೆ ಮಾಡುವುದು ವಿದ್ಯೆ ಅದರ ಅನುಕೂಲಕ್ಕಾಗಿ ನಾವು ಕೈಜೋಡಿಸಬೇಕು.ಇದರಿಂದ ವಿದ್ಯಾರ್ಥಿಗಳ ಜೀವನದಲ್ಲಿ ಬೆಳಕು ಹರಡುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮದ ಮಹಿಳೆಯರು, ಮತ್ತು ಶಾಲಾ ಮಕ್ಕಳು ನೋಟ್ ಬುಕ್ ಗಳನ್ನು ಪಡೆದು ಸರ್ಕಾರಿ ಶಾಲೆಗಳಿಗೆ ನಿಮ್ಮ ಮಕ್ಕಳನ್ನು ಸೇರಿಸಿ ಸರ್ಕಾರಿ ಶಾಲೆಗಳನ್ನು ಉಳಿಸಿ ಎಂದು ಜೈಕಾರ ಕೂಗಿದರು.
ವರದಿ. ಪ್ರಸನ್ನಕುಮಾರ್. ಎಸ್. ಕೊರಟಗೆರೆ




















