ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಪೊಲೀಸ್ ರಿಗೆ ವಸತಿ ಗೃಹ ಭಾಗ್ಯ ಕಲ್ಪಿಸಿ,ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸರ್ಕಾರಿ ವಸತಿಗೃಹವಿಲ್ಲದೆ ಬಾಡಿಗೆ ಮನೆಗಳ ಮೇಲೆ ಅವಲಂಬನೆ.

ಬಳ್ಳಾರಿ / ಕಂಪ್ಲಿ: ಕರ್ನಾಟಕದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗೆ ವಸತಿ ಸೌಕರ್ಯ ಒದಗಿಸಲು ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ (KSPH & IDCL) ದಿಂದ ‘ಪೊಲೀಸ್ ಗೃಹ’ ಯೋಜನೆಯನ್ನು ಜಾರಿಗೆ ತರಲಾಗಿದೆ. ರಾಜ್ಯ ಸರ್ಕಾರವು ಪ್ರತಿ ಬಾರಿಯೂ ಬಜೆಟ್‌ನಲ್ಲಿ ಸಾವಿರಾರು ಕೋಟಿ ರೂ. ಗಳನ್ನು ಅನುದಾನವಾಗಿ ಮೀಸಲಿಡುತ್ತಿದ್ದು, ವಸತಿ ರಹಿತ ಹಾಗೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಸಿಬ್ಬಂದಿಗೆ ಆದ್ಯತೆಯ ಮೇರೆಗೆ ವಸತಿ ಗೃಹಗಳನ್ನು ಕಲ್ಪಿಸಲಾಗುತ್ತಿದೆ ಆದರೆ ಕಂಪ್ಲಿ ಪಟ್ಟಣ ಠಾಣೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸರ್ಕಾರಿ ವಸತಿಗೃಹವಿಲ್ಲದೆ ಬಾಡಿಗೆ ಮನೆಗಳನ್ನು ಅವಲಂಬಿಸಿದ್ದಾರೆ. ಹಳೆಯ ಠಾಣೆ ಕಟ್ಟಡ, ಪುರಸಭೆ ಹಿಂದೆ ಶಿಥಿಲಗೊಂಡ ಕ್ವಾರ್ಟಸ್‌ಗಳಿದ್ದು ತೆರವುಗೊಳಿಸಿ ಹೊಸ ವಸತಿಗೃಹ ನಿರ್ಮಿಸಬೇಕಿದೆ.

ಪೊಲೀಸರು ಸಕಾಲಕ್ಕೆ ತ್ವರಿತವಾಗಿ ಕಾರ್ಯ ನಿರ್ವಹಿಸಲು, ಕೂಡಲೆ ಕಾರ್ಯ ಪ್ರವೃತ್ತರಾಗಲು ಮತ್ತು ಕೇಂದ್ರಸ್ಥಾನದಲ್ಲಿರಲು ಸರ್ಕಾರಿ ವಸತಿಗೃಹ ಅಗತ್ಯವಿದೆ. ವಿಲೇಜ್ ಕ್ರೈಮ್ ಹಿಸ್ಟರಿ ಪ್ರಕಾರ 1936ಕ್ಕೂ ಮುನ್ನವೇ ಪಟ್ಟಣದಲ್ಲಿ ಪೊಲೀಸ್ ಠಾಣೆ ಇತ್ತು. ಸದ್ಯ ಠಾಣೆಗೆ ಒಬ್ಬ ಪಿಐ, ಇಬ್ಬರು ಪಿಎಸ್‌ಐ, ಆರು ಜನ ಎಎಸ್‌ಐ, 15 ಎಚ್‌ಸಿಗಳು, 31 ಪೇದೆಗಳು ಸೇರಿದಂತೆ ಒಟ್ಟು 55 ಹುದ್ದೆ ಮಂಜೂರಾಗಿದೆ. ಈ ಪೈಕಿ ಎರಡು ಪಿಎಸ್‌ಐ, ಎರಡು ಎಎಸ್‌ಐ ಹಾಗೂ ಎರಡು ಪೇದೆಗಳ ಹುದ್ದೆ ಖಾಲಿ ಇವೆ.

ಠಾಣಾ ವ್ಯಾಪ್ತಿ ಸುಮಾರು 25 ಕಿ.ಮೀ. ಇದ್ದು, ಪುರಸಭೆ, ಏಳು ಗ್ರಾಪಂ., ಮೂರು ತಾಪಂ., ಎರಡು ಜಿಪಂ.ವ್ಯಾಪ್ತಿಯಲ್ಲಿನ 24 ಗ್ರಾಮಗಳು ಹಾಗೂ ಐದು ಕ್ಯಾಂಪ್‌ಗಳು ಒಳಪಟ್ಟಿವೆ. ಸದ್ಯ 14 ಪೊಲೀಸ್ ವಸತಿಗೃಹಗಳಿದ್ದು, ಇನ್ನೂ 41 ವಸತಿಗೃಹ ಬೇಕಿವೆ. 24 ವಸತಿಗೃಹ ನಿರ್ಮಿಸಲು ಮಂಜೂರಾತಿ ದೊರೆತಿದ್ದು, ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆತಿಲ್ಲ.

ಪುರಸಭೆ ಹಿಂದಿರುವ ಸರ್ವೇ ನಂಬರ್ 1342-1ಬಿ, 2 ಮತ್ತು 7ರಲ್ಲಿ ಒಟ್ಟು 32,727ಚ.ಅಡಿ ಭೂಮಿಯಿದ್ದು, ಈ ಪೈಕಿ 3971 ಚ.ಅಡಿಯಲ್ಲಿ ಪೊಲೀಸ್ ಸಿಬ್ಬಂದಿಗಾಗಿ ಎಂಟು ವಸತಿಗೃಹಗಳನ್ನು ನಿರ್ಮಿಸಿದ್ದು, ಇವು ಶಿಥಿಲಗೊಂಡು ಹಾಳು ಬಿದ್ದಿವೆ. ಇವುಗಳನ್ನು ತೆರವುಗೊಳಿಸಿ ವಸತಿಗೃಹ ನಿರ್ಮಿಸಬೇಕಿದೆ.

ಠಾಣೆಯ ಹಳೆಯ ಕಟ್ಟಡ 114 ವರ್ಷಗಳ ಹಿಂದಿನದಾಗಿದ್ದು ಇದು ಕೂಡಾ ಶಿಥಿಲಗೊಂಡಿದೆ. ಇದರಿಂದಾಗಿ ಠಾಣೆ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಠಾಣೆಯ ಹಳೆಯ ಕಟ್ಟಡದಲ್ಲಿ ಅಥವಾ ಪುರಸಭೆ ಹಿಂಬದಿಯ ಕ್ವಾರ್ಟರ್ಸ್‌ಗಳನ್ನು ತೆರವುಗೊಳಿಸಿ ಹೊಸದಾಗಿ ಪೊಲೀಸ್ ಕ್ವಾರ್ಟರ್ಸ್ ನಿರ್ಮಿಸಬಹುದಾಗಿದೆ.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!