ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಗದ್ದನಕೇರಿಯ ಲಡ್ಡು ಮುತ್ಯಾರ ಮಠದಲ್ಲಿ ವಿಶ್ವ ಸಂಗೀತ ದಿನಾಚರಣೆ ಸಂಭ್ರಮ

ಬಾಗಲಕೋಟೆ -ಮುಧೋಳ : ಇದೇ ಜೂನ್ 21 ರಂದು ಮುಂಜಾನೆ 10-30 ಕ್ಕೆ ಕನಾ೯ಟಕ ರಾಜ್ಯ ಸರ್ವ ಕಲಾವಿದರ ಒಕ್ಕೂಟ ಬಾಗಲಕೋಟೆ ಇವರ ಆಶ್ರಯದಲ್ಲಿ ವಿಶ್ವ ಸಂಗೀತ ದಿನಾಚರಣೆ ಸಂಭ್ರಮ ಕಾರ್ಯಕ್ರಮವು ಅದ್ದೂರಿಯಾಗಿ ಜರುಗಲಿದೆ ಎಂದು ಸವ೯ಕಲಾವಿದರ ಒಕ್ಕೂಟದ ಅಧ್ಯಕ್ಷ ಪ.ಪೂ.ಶರಣಬಸವ ಶಾಸ್ತ್ರಿಗಳು ಹೇಳಿದರು.
ಗುರುವಾರ ದಿ.18 ರಂದು ಸವ೯ಕಲಾವಿದರ ಒಕ್ಕೂಟದ ಸಭೆಯಲ್ಲಿ ಅಧಿಕೃತ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ ಭಾಗವಹಿಸಿದ ಕಲಾತಂಡಗಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು ಎಂದರು.
ಕಾಯ೯ದಶಿ೯ ಪವಿತ್ರ ಜಕ್ಕಪ್ಪನವರ ಮಾತನಾಡಿ ಮುರನಾಳದ ಮಳೇರಾಜೇಂದ್ರ ಶ್ರೀಗಳು ಪಾವನ ಸಾನಿಧ್ಯ ವಹಿಸುವರು.
ವಿಶ್ರಾಂತ ಸಹಾಯಕ ನಿರ್ದೇಶಕ ಶ್ರೀಶೈಲ ಕರಿಶಂಕರಿ ಉದ್ಘಾಟಿಸುವರು.
ಸಭೆಯ ಅಧ್ಯಕ್ಷತೆಯನ್ನು ಸವ೯ಕಲಾವಿದರ ಒಕ್ಕೂಟದ ಅಧ್ಯಕ್ಷ ಹಾಗೂ ಮುಗಳಖೋಡದ ಶ್ರೀಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶ್ರೀ ಶರಣಬಸವ ಶಾಸ್ತ್ರಿಗಳು ವಹಿಸುವರು.
ಮುಖ್ಯ ಅತಿಥಿಗಳಾಗಿ ಲಡ್ಡು ಮುತ್ಯಾರ ಟ್ರಸ್ಟ್ ಅಧ್ಯಕ್ಷ ಷಣ್ಮುಖಪ್ಪ ಹದ್ಲಿ ಮತ್ತು ಹಿರಿಯ ಕಲಾವಿದ ಚಿನ್ನಪ್ಪ ಗೌಡ ಗಿಡ್ಡಪ್ಪಗೋಳ, ಶಂಕ್ರಪ್ಪ ತಂಬಾಕದ ಪಾಲ್ಗೊಳ್ಳುವರು, ಸಂಗೀತ ಹಾಗೂ ಜನಪದ ಸಂಗೀತ ದಿಗ್ಗಜರಿಂದ ವಿಶ್ವ ಸಂಗೀತ ದಿನಾಚರಣೆ ಸಂಭ್ರಮ ನಡೆಯಲಿದೆ ಎಂದರು. ಮುಖಂಡರಾದ ಯಲ್ಲಪ್ಪ ಪೂಜಾರಿ, ಈಶ್ವರ ಹೊರಟ್ಟಿ, ರಾಮಣ್ಣ ಗಲಗಲಿ, ಶಾಂತಾಬಾಯಿ ಗಿಡ್ಡಪ್ಪಗೋಳ, ಲಿಂಗನೂರಿನ ಕರೆಪ್ಪ ಪೂಜಾರಿ, ಮಲ್ಲಪ್ಪ ದ್ಯಾವನ್ನವರ ಸೇರಿದಂತೆ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!