ಬಾಗಲಕೋಟೆ : ಮುಧೋಳ ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ಇದೇ ರವಿವಾರ ದಿ.21 ರಂದು ಮುಂಜಾನೆ ಸಮಯದಲ್ಲಿ 153 ನೇ ರವಿವಾರದ ಸತ್ಸಂಗ ಜರುಗಲಿದೆ ಎಂದು ಶ್ರೀ ಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಪ್ರತಿನಿಧಿ ಶ್ರೀಶೈಲ ಎಸ್ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅವರು ಪತ್ರಿಕಾ ಪ್ರತಿನಿಧಿಯೊಂದಿಗೆ ಮಾತನಾಡುತ್ತಾ ಬ್ರಾಹ್ಮೀ ಮುಹೂರ್ತದಲ್ಲಿ ಸದ್ಗುರು ಶ್ರೀ ಸಿದ್ಧಾರೂಢರ ಪಾರಾಯಣ.ಸಿದ್ಧಾರೂಢರ ಪಂಚಾಮೃತ ಅಭಿಷೇಕ.ಅಷ್ಟೋತ್ತರ ನಾಮಾವಳಿ.ನಾಮಸ್ಮರಣೆ.ಮಂಗಲ.ಪ್ರಸಾದ ನಡೆಯುವದೆಂದು ಅವರು ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳ ಸಮ್ಮುಖದಲ್ಲಿ ಧಾರ್ಮಿಕ-ಸಾಂಸ್ಕತಿಕ ಆಚರಣೆಗಳು ಜರುಗುವವು ಎಂದು ಹೇಳಿದರು.
ಮಹಾಲಿಂಗೇಶ್ವರ ದೇವರ ದೇವಸ್ಥಾನದ ಪೂಜ್ಯರಾದ ಕುಮಾರ್ ಗುರುಪ್ರಸಾದ್ ಸ್ವಾಮೀಜಿ ಈ ಸಂದರ್ಭದಲ್ಲಿದ್ದರು.
- ಕರುನಾಡ ಕಂದ ಸುದ್ದಿ




















