ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಅಪ್ಪನೆಂಬ ಆಕಾಶ, ವಿಶ್ವ ತಂದೆಯಂದಿರ ದಿನವನ್ನು ಆಚರಿಸುವುದೇಕೆ ?

ವಿಶೇಷ ಲೇಖನ : ಜಿಲಾನಸಾಬ್ ಬಡಿಗೇರ್

ಜೀವನದಲ್ಲಿ ನಮಗೆ ಯಾವಾಗಲೂ ಪ್ರೇರಣೆಯಾಗಬೇಕಾಗಿರುವವರು ನಮ್ಮ ತಂದೆತಾಯಿ ಎನ್ನುವುದನ್ನು ಮರೆಯಬಾರದು. ಅವರು ಪಡುವ ಕಷ್ಟ, ಜವಾಬ್ದಾರಿಗಳ ನಿರ್ವಹಣೆ ಹೀಗೆ ಹಲವಾರು ವಿಚಾರಗಳಿಂದ ನಾವು ಕಲಿಯಬೇಕಾಗಿದೆ. ಅದರಲ್ಲೂ ಪುರುಷರು ವಿವಾಹವಾಗಿ ಒಂದು ಮಗುವಿನ ತಂದೆಯಾದ ಬಳಿಕ ಅವರಲ್ಲಿ ಮಹತ್ತರ ಜವಾಬ್ದಾರಿಯು ಹೆಗಲ ಮೇಲೇರುವುದು. ಆ ಮಗು ಗಂಡು ಅಥವಾ ಹೆಣ್ಣು ಎನ್ನುವ ಭೇದ ಮಾಡದೆ ಸಮಾನವಾಗಿ ನೋಡಿಕೊಂಡು ಅವರನ್ನು ಜೀವನದಲ್ಲಿ ಏನಾದರೂ ಸಾಧನೆಗೆ ಯೋಗ್ಯರನ್ನಾಗಿ ಮಾಡುವರು. ಇಂತಹ ತಂದೆಗೆ ಗೌರವ ಸೂಚಿಸಲು ಮತ್ತು ಅವರ ಬಗ್ಗೆ ಪ್ರೀತಿಯಿಂದ ಒಂದು ದಿನ ಕಳೆಯಲು`ಫಾದರ್ಸ್ ಡೇ” ಆಚರಿಸಲಾಗುತ್ತದೆ. ಈ ವರ್ಷ ಜೂನ್ 21ರಂದು ಇದನ್ನು ಆಚರಿಸಲಾಗುತ್ತಿದೆ. ಪ್ರತೀ ವರ್ಷ ಜೂನ್ ನ ಮೂರನೇ ಭಾನುವಾರದಂದು ಇದನ್ನು ಆಚರಿಸಲಾಗುತ್ತದೆ.

ಅಪ್ಪ ಆ ಪದದಲ್ಲೇ ಒಂದು ರೀತಿಯ ಗಾಂಭೀರ್ಯ ಮತ್ತು ಒಂದು ಗೌರವವಿದೆ. ಪ್ರೀತಿ ಎಂಬುದು ಅಮ್ಮನ ಮುಂದೆ ಸಲುಗೆ, ಶಬ್ದ ರೂಪದಲ್ಲಿ ವ್ಯಕ್ತವಾದರೆ, ಅಪ್ಪನ ಮುಂದೆ ಅದು ಗೌರವ ಮತ್ತು ಭಯದ ರೂಪದಲ್ಲಿ ಅಭಿವ್ಯಕ್ತವಾಗುತ್ತದೆಯಂತೆ. ಅಮ್ಮನ ಮಮತೆ, ವಾಕ್ಟರಿ ಮತ್ತು ಅತಿ ಕಾಳಜಿ ಯಲ್ಲಿ ಹೊಮ್ಮಿದರೆ, ಅಪ್ಪನ ವಾತ್ಸಲ್ಯ ಗಾಂಭೀರ್ಯ ಮತ್ತು ಕರ್ತವ್ಯದ ರೂಪದಲ್ಲಿ ಹೊರಹೊಮ್ಮುತ್ತದೆ.

ಮಕ್ಕಳ ಪಾಲಿಗೆ ತಂದೆಯೇ ಮೊದಲ ಸೂಪರ್‌ ಹೀರೋ. ತಂದೆಯಂದಿರು ತಮ್ಮ ಮಕ್ಕಳ ಜೀವನವನ್ನು ಮುನ್ನಡೆಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ಹೌದು ಮಕ್ಕಳು ಹುಟ್ಟಿ ಅವರು ದೊಡ್ಡವರಾಗುವವರೆಗೂ ಅವರ ಒಳಿತಿಗಾಗಿ, ಏಳಿಗೆಗಾಗಿ ಜೀವ ತೇಯುತ್ತಾರೆ. ಕುಟುಂಬದ ಜವಾಬ್ದಾರಿಗಳನ್ನು ಹೊರುವುದಲ್ಲದೆ ಮಕ್ಕಳಿಗೆ ಉತ್ತಮ ಜೀವನವನ್ನು ರೂಪಿಸಲು ಹಗಲಿರುಳು ಶ್ರಮಿಸುತ್ತಾರೆ. ಆದರೆ ತಾಯಿಯ ವಾತ್ಸಲ್ಯಕ್ಕೆ ಸಿಗುವ ಮನ್ನಣೆ ಅಪ್ಪನ ತ್ಯಾಗಕ್ಕೆ ಮಾತ್ರ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ಅಪ್ಪಂದಿರ ಪ್ರೀತಿ ಮತ್ತು ತ್ಯಾಗವನ್ನು ಸ್ಮರಿಸುವ ಉದ್ದೇಶದಿಂದ ಪ್ರತಿವರ್ಷ ಜೂನ್‌ 3 ನೇ ಭಾನುವಾರದಂದು ವಿಶ್ವ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಜೂನ್‌ 21 ರಂದು ಈ ದಿನವನ್ನು ಆಚರಿಸಲಾಗುತ್ತಿದೆ.

ಈ ಆಚರಣೆಯ ಹಿನ್ನೆಲೆ :
ಈ ಆಚರಣೆ ಮೊದಲು ಅಮೆರಿಕದಲ್ಲಿ ಪ್ರಾರಂಭವಾಯಿತು. ತಂದೆಯ ದಿನವನ್ನು ಪ್ರಾರಂಭಿಸಿದ ಕೀರ್ತಿ ಅಮೆರಿಕದ ಸೋನೋರಾ ಸ್ಮಾರ್ಟ್ ಡಾಡ್ ಎಂಬ ಮಹಿಳೆಗೆ ಸಲ್ಲುತ್ತದೆ. ಅವರ ತಂದೆ ಸೈನಿಕರಾಗಿದ್ದರು, ಡಾಡ್ ಮತ್ತು ಅವರ ಐವರು ಒಡಹುಟ್ಟಿದವರ ತಾಯಿ ಹೆರಿಗೆಯ ಸಮಯದಲ್ಲಿ ಮರಣ ಹೊಂದಿದಾಗ ಅವರನ್ನು ತಂದೆಯೇ ಬೆಳೆಸಿದರು. ಹಾಗಾಗಿ ಡಾಡ್‌ 1909 ರಲ್ಲಿ ತಾಯಂದಿರ ದಿನದ ಸಂದರ್ಭದಲ್ಲಿ ತಾಯಂದಿರ ದಿನವನ್ನು ಆಚರಿಸುವಂತೆಯೇ, ತಂದೆಯ ದಿನವನ್ನು ಸಹ ಅದೇ ರೀತಿಯಲ್ಲಿ ಏಕೆ ಆಚರಿಸಬಾರದು ಎಂಬ ಕಲ್ಪನೆ ಅವರಲ್ಲಿ ಮೂಡಿತು. ನಂತರ ಸ್ಥಳೀಯ ಮುಖಂಡರು ಡಾಡ್ ಅವರ ಕಲ್ಪನೆಯನ್ನು ಬೆಂಬಲಿಸಿದರು. ಬಳಿಕ ಮೊದಲ ಬಾರಿಗೆ ತಂದೆಯಂದಿರ ದಿನವನ್ನು ಜೂನ್ 19, 1910 ರಂದು ಆಚರಿಸಲಾಯಿತು. ನಂತರ 1924 ರಲ್ಲಿ, ಯುಎಸ್ ಅಧ್ಯಕ್ಷ ಕ್ಯಾಲ್ವಿನ್ ಕೂಲಿಡ್ಜ್ ಕೂಡ ಇದಕ್ಕೆ ತಮ್ಮ ಬೆಂಬಲವನ್ನು ನೀಡಿದರು. 1966 ರಲ್ಲಿ, ಅಧ್ಯಕ್ಷ ಲಿಂಡನ್ ಬಿ. ಜಾನ್ಸನ್ ಈ ದಿನವನ್ನು ಗುರುತಿಸುವ ಘೋಷಣೆಯನ್ನು ಮಾಡಿದರು. 1972 ರಲ್ಲಿ ಆಗಿನ ಅಧ್ಯಕ್ಷ ರಿಚರ್ಡ್ ನಿಕ್ಸನ್ ಜೂನ್ ಮೂರನೇ ಭಾನುವಾರವನ್ನು ತಂದೆಯ ದಿನವೆಂದು ಗೊತ್ತು ಪಡಿಸುವ ಕಾನೂನಿಗೆ ಸಹಿ ಹಾಕಿದರು. ಅಂದಿನಿಂದ ಪ್ರತಿವರ್ಷ ಈ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ಫಾದರ್ಸ್ ಡೇ ಆಚರಿಸುವ ವಿಧಾನಗಳು:

ತಂದೆಯ ಜತೆಗೆ ಸಮಯ ಕಳೆಯಿರಿ :
ಕೇವಲ ತಂದೆಯ ಜತೆಗೆ ಮಾತನಾಡುವುದು ಮಾತ್ರವಲ್ಲದೆ, ಅವರನ್ನು ಹೊರಗಡೆ ಕರೆದುಕೊಂಡು ಹೋಗಿ ಅವರ ಜತೆಗೆ ಊಟ ಮಾಡುವುದು. ಈ ಸಂದರ್ಭದಲ್ಲಿ ಇಬ್ಬರೂ ಕೂಡ ಪರಸ್ಪರರ ಸಂಘವನ್ನು ಆನಂದಿಸಬೇಕು.

ಉಡುಗೊರೆ ನೀಡಿ:
ತಂದೆಗೆ ನೀವು ಅವರ ಮೆಚ್ಚಿನ ಆಹಾರ ಅಥವಾ ಅವರಿಗೆ ವೈಯಕ್ತಿಕ ಉಡುಗೊರೆ ನೀಡಬಹುದು. ಇದರ ಜತೆಗೆ ಒಂದು ಪತ್ರ ಅಥವಾ ಕಾರ್ಡ್ ಇಟ್ಟುಬಿಡಿ.

ಅವರಿಗೆ ಇಷ್ಟವಾಗುವುದನ್ನು ಮಾಡಿ:
ತಂದೆಗೆ ಓದುವುದು ಇಷ್ಟವಾಗಿದ್ದರೆ, ಆಗ ನೀವು ಅವರನ್ನು ಲೈಬ್ರೇರಿಗೆ ತೆಗೆದುಕೊಂಡು ಹೋಗಿ. ಅವರಿಗೆ ಗಾಲ್ಫ್ ಆಡಲು ಇಷ್ಟವಾದರೆ ಆಗ ನೀವು ಅವರೊಂದಿಗೆ ಆಡಿ. ಅವರಿಗೆ ಇಷ್ಟವಿರುವ ಕೆಲಸದಲ್ಲಿ ನೀವು ಕೂಡ ಭಾಗಿಯಾಗಿ, ಅವರು ನಿಮಗೆ ತುಂಬಾ ವಿಶೇಷ ಎಂದು ತೋರಿಸಿಕೊಡಿ.

ಫೇವರಿಟ್ ಅಡುಗೆ ಮಾಡಿ :
ತಂದೆಗೆ ಖಾದ್ಯಗಳು ಇಷ್ಟವಾಗಿದ್ದರೆ, ಆಗ ನೀವಾಗಿಯೇ ಮನೆಯಲ್ಲಿ ಅವರಿಗೆ ಇಷ್ಟವಾದ ತಿಂಡಿ ತಯಾರಿಸಿ ಬಡಿಸಿ. ಇದರಿಂದ ಅವರಿಗೆ ಇನ್ನಷ್ಟು ಖುಷಿಯಾಗುವುದು.

ನೆನೆಪಿನ ಪುಸ್ತಕ ನೀಡಿ :
ತಂದೆಯೊಂದಿಗೆ ಕಳೆದಿರುವಂತಹ ನೆನಪಿನ ಕ್ಷಣಗಳನ್ನು ಒಂದು ಪುಸ್ತಕ ರೂಪಕ್ಕೆ ತನ್ನಿ. ಎಲ್ಲಾ ಫೋಟೊ, ಪತ್ರ ಮತ್ತು ಇತರ ವಿಚಾರಗಳನ್ನು ಜತೆಯಾಗಿ ಒಂದು ಪುಸ್ತಕದಲ್ಲಿ ತನ್ನಿ.

ಒಂದು ಮರ ನೆಡಿ :
ಅವರಿಗೆ ಇಷ್ಟವಾಗಿರುವ ಜಾಗದಲ್ಲಿ ಒಂದು ಒಳ್ಳೆಯ ಮರವನ್ನು ನೆಟ್ಟರೆ ಆಗ ಅದರಿಂದ ವರ್ಷಗಳು ಉರುಳಿದರೂ ಅವರಿಗೆ ಇದು ನೆನಪಿನಲ್ಲಿ ಉಳಿಯುವುದು.

ಈ ಫಾದರ್ಸ್ ಡೇಗೆ ನಿಮ್ಮಪ್ಪನಿಗೆ ಲವ್ ಯೂ ಅಂತ ಹೇಳೋದು ಮರ್ತಿದ್ರೂ ಪರವಾಗಿಲ್ಲ, ಗಿಫ್ಟ್ ಕೊಡೋದು ಬಿಟ್ಟಿದ್ರೂ ಪರವಾಗಿಲ್ಲ. ಆದರೆ, ಅವರಿಗೆ ನೋವಾಗೋ ತರ ಯಾವ ಕೆಲಸ ಮಾಡಬೇಡಿ. ಅವರ ಜೊತೆ ಸ್ವಲ್ಪ ಸಮಯ ಕಳೆಯಿರಿ, ಅವರ ಕಷ್ಟ ಸುಖ ಮಾತಾಡಿ. ಅದೇ ನೀವು ಅವರಿಗೆ ಕೊಡೋ ದೊಡ್ಡ ಗಿಫ್ಟ್…

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!