ಕೊಪ್ಪಳ : ಆಯುಷ್ ಇಲಾಖೆ ಕೊಪ್ಪಳ ಆಯುಷ್ಮಾನ್ ಆರೋಗ್ಯ ಮಂದಿರ ನಂದಿಹಳ್ಳಿ ಇವರ ನೇತೃತ್ವದಲ್ಲಿ 12ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಮೊರಾರ್ಜಿ ದೇಸಾಯಿ ವಸತಿ ಶಾಲೆ ಜಮಾಪುರನಲ್ಲಿ ವೃಕ್ಷಾಸನ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಈ ಒಂದು ವೃಕ್ಷಾಸನ ಸ್ಪರ್ಧೆಯಲ್ಲಿ 180 ಸ್ಪರ್ಧಾಳುಗಳು ಭಾಗವಹಿಸಿದ್ದು ಈ ಒಂದು ಸ್ಪರ್ಧೆಯಲ್ಲಿ ಹೆಣ್ಣು ಮಕ್ಕಳು 55 ನಿಮಿಷಗಳ ಕಾಲ ಹಾಗೂ ಗಂಡು ಮಕ್ಕಳು ಒಂದು ತಾಸು ಐದು ನಿಮಿಷಗಳ ಕಾಲ (1.ಘಂಟೆ 5ನಿಮಿಷಗಳ) ನಿರಂತರವಾಗಿ ಒಂದೇ ಆಸನದ ಭಂಗಿಯಲ್ಲಿ ನಿಂತು ಸಾಧನೆ ಮಾಡಿದ್ದಾರೆ. ಈ ವೃಕ್ಷಾಸನದಿಂದ ಮನಸ್ಸಿನ ಏಕಾಗ್ರತೆ ಸ್ನಾಯುಗಳ ಬಲಾಢ್ಯತೆ ಮನಸ್ಸನ್ನು ಚಂಚಲತೆಯನ್ನು ಹೋಗಲಾಡಿಸಲು ಈ ಆಸನ ಪ್ರಮುಖವಾದದ್ದು ಎಂದು ಶಾಲೆಯ ಪ್ರಾಂಶುಪಾಲರಾದ ಶ್ರೀ ಶರಣಪ್ಪ ಮೇಟಿ ಮತ್ತು ನಿಲಯ ಪಾಲಕರಾದ ಶ್ರೀ ಶರಣಪ್ಪ ಇವರು ಮಕ್ಕಳ ಸಾಧನೆಯನ್ನು ಕೊಂಡಾಡಿದ್ದಾರೆ. ಹಾಗೆ ನಿಮ್ಮ ಮುಂದಿನ ಸಾಧನೆ ಅಂತರಾಷ್ಟ್ರೀಯ ಮಟ್ಟಕ್ಕೆ ಯಶಸ್ವಿಗೊಳ್ಳಲಿ ಎಂದು ಶುಭ ಹಾರೈಸಿದರು.
ಈ ಒಂದು ಕಾರ್ಯಕ್ರಮದಲ್ಲಿ ಯೋಗ ತರಬೇತುದಾರರಾದ ಶ್ರೀ ಬಸವರಾಜ್ ನೀರಗಂಟಿ ಆಯುಷ್ಮಾನ ಆರೋಗ್ಯ ಮಂದಿರ ನಂದಿಹಳ್ಳಿ ಹಾಗೂ ಶ್ರೀಯುತ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಚಂದ್ರಶೇಖರ್ ಬಿ ದೊಣ್ಣೆಗುಡ್ಡ, ಶ್ರೀ ಶರಣಪ್ಪ ಸಾಗರ್ ಶ್ರೀಕೆ.ಈರಣ್ಣ ಶ್ರೀ ವಿಠಲ್ ಆರ್ ಗಾಣಿಗೇರ್ ಶ್ರೀ ರವಿಕುಮಾರ ಗುಂದಗಿ ಶ್ರೀ ಶಿವಕುಮಾರ್ ಪಚ್ಚಿ ಶ್ರೀ ದುರ್ಗೇಶ್ ಡಗ್ಗಿ ಶ್ರೀ ಅಶೋಕ್ ಮಾಲಿ ಪಾಟೀಲ ಶ್ರೀ ಪ್ರವೀಣ್ ಕುಮಾರ್ ಸರ್ ಗೊಂಡಬಾಳ ಶ್ರೀಮತಿ ವಿಜಯಲಕ್ಷ್ಮಿ ಶ್ರೀ ನಾಗರಾಜ್ ಮಾರುತಿ, ಕುಮಾರ್, ತಿರುಮಲ ರೆಡ್ಡಿ, ಭಾಷಾ ಎಲ್ಲಾ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಮಕ್ಕಳ ಸಾಧನೆಯನ್ನು ಕಂಡು ಹರ್ಷ ವ್ಯಕ್ತಪಡಿಸಿದರು.
- ಕರುನಾಡ ಕಂದ ಸುದ್ದಿ




















