ಬಳ್ಳಾರಿ : ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳ್ಳಂಬೆಳಿಗ್ಗೆ ಕಾರ್ಯಾಚರಣೆಗೆ ಇಳಿದಿದ್ದು, ಆದಾಯ ಮೀರಿ ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇರೆಗೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪದ ಆರ್ಡಿಪಿಆರ್ ಇಲಾಖೆಯ ಎಇಇ ತಿಪ್ಪೇಸ್ವಾಮಿ ಮನೆ ಮೇಲೆ ದಾಳಿ ಮಾಡಿ, ಪರಿಶೀಲನೆ ನಡೆಸಿದ್ದಾರೆ.
ಸಿರುಗುಪ್ಪ ಕಚೇರಿ ಮತ್ತು ಎಇಇ ತಿಪ್ಪೇಸ್ವಾಮಿಯ ಬಳ್ಳಾರಿಯ ಹನುಮಾನ್ ನಗರದ ಮನೆ ಮತ್ತು ಕುಡುತಿನಿ ಪಟ್ಟಣದ ನಿವಾಸ ಸೇರಿ ಮೂರು ಕಡೆ ಏಕಾಕಾಲಕ್ಕೆ ಲೋಕಾಯುಕ್ತರು ದಾಳಿ ಮಾಡಿದ್ದಾರೆ.
ಲೋಕಾಯುಕ್ತ ಎಸ್ಪಿ ವಾಸುದೇವ ಅವರ ನೇತೃತ್ವದಲ್ಲಿ ದಾಳಿಗೆ ಸಜ್ಜಾಗಿದ್ದ ಪ್ರತ್ಯೇಕ ಮೂರು ತಂಡಗಳು ಇಂದು ಬೆಳಿಗ್ಗೆ ಕಾರ್ಯಾಚರಣೆ ಮಾಡಿ, ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್



















