ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕೊಡಗು ವಿಶ್ವ ವಿದ್ಯಾಲಯದಲ್ಲಿ ನಾಣ್ಯ ನೋಟುಗಳ ಪ್ರದರ್ಶನ

ಮಡಿಕೇರಿ : ನಗರದ ಕೊಡಗು
ವಿದ್ಯಾಲಯದಲ್ಲಿ ಹೆಸರಾಂತ ನಾಣ್ಯ ಸಂಗ್ರಹಕಾರ
ಪಿ.ಕೆ. ಕೇಶವಮೂರ್ತಿ ಅವರಿಂದ 177ನೇ ನಾಣ್ಯ
ಮತ್ತು ನೋಟುಗಳ ಪ್ರದರ್ಶನ ಆಯೋಜಿತವಾಗಿತ್ತು.
ಕೊಡಗು ವಿದ್ಯಾಲಯದ ಗ್ರಂಥಾಲಯದಲ್ಲಿ ಖ್ಯಾತ
ನಾಣ್ಯಶಾಸ್ತ್ರಜ್ಞ ಹಾಗೂ ಅಂಚೆಚೀಟಿ ಸಂಗ್ರಹಕಾರರಾದ
ಪಿ.ಕೆ. ಕೇಶವಮೂರ್ತಿ ತಮ್ಮ 177ನೇ ನಾಣ್ಯ ಮತ್ತು
ನೋಟುಗಳ ಪ್ರದರ್ಶನವನ್ನು ಆಯೋಜಿಸಿದ್ದರು.
1ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಹಾಗೂ
ಶಿಕ್ಷಕರು ಅಪರೂಪದ ಹಾಗೂ ಐತಿಹಾಸಿಕ
ಮಹತ್ವವುಳ್ಳ ನಾಣ್ಯಗಳು ಮತ್ತು ಕರೆನ್ಸಿ ನೋಟುಗಳನ್ನು ವೀಕ್ಷಿಸಿದರು. ವಿವಿಧ ಕಾಲಘಟ್ಟಗಳ ಇತಿಹಾಸ, ಸಂಸ್ಕೃತಿ ಹಾಗೂ ಆರ್ಥಿಕ ಬೆಳವಣಿಗೆಗಳ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ಪ್ರದರ್ಶನ ನೆರವಾಯಿತು. ಹಳೆಯ ನಾಣ್ಯಗಳು ಮತ್ತು ಕರೆನ್ಸಿ ನೋಟುಗಳ ಐತಿಹಾಸಿಕ ಹಾಗೂ ಸಾಂಸ್ಕೃತಿಕ
ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು
ಮೂಡಿಸುವುದು ಈ ಪ್ರದರ್ಶನದ ಮುಖ್ಯ
ಉದ್ದೇಶವಾಗಿತ್ತು. ಸಂಗ್ರಹವನ್ನು ವೀಕ್ಷಿಸಿದ
ವಿದ್ಯಾರ್ಥಿಗಳು ಸ್ಫೂರ್ತಿ ಹೊಂದಿ, ತಮ್ಮ ಅಧ್ಯಯನಕ್ಕೆ
ಪೂರಕವಾದ ಅಮೂಲ್ಯ ಮಾಹಿತಿಯನ್ನು ಪಡೆದುಕೊಂಡರು. ಡಾ. ಅಂಜಲಿ ಬೋಪಯ್ಯ ಹಾಗೂ ಡಾ. ಎಂ.ಜಿ. ಪಾಟಕ್ ಅವರ ಪುತ್ರಿ ಸಲೀಲಾ ಭೇಟಿ ನೀಡಿ ಪ್ರದರ್ಶನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಪಿ.ಕೆ. ಕೇಶವಮೂರ್ತಿಯವರು ತಮ್ಮ ನಾಣ್ಯ ಸಂಗ್ರಹದಲ್ಲಿನ ಕೆಲವು ಅಪರೂಪದ ನಾಣ್ಯಗಳನ್ನು ಹಾಗೂ ನಾಣ್ಯಶಾಸ್ತ್ರಕ್ಕೆ ಸಂಬಂಧಿಸಿದ ಮೂರು ಅಮೂಲ್ಯ ಪುಸ್ತಕಗಳನ್ನು ಶಾಲೆಯ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿ, ಶಾಲಾ ಪ್ರಾಂಶುಪಾಲರಾದ ಸುಮಿತ್ರಾ ಅವರಿಗೆ ಹಸ್ತಾಂತರಿಸಿದರು.

ವರದಿ: ಪ್ರಿತುನ್ ಪೂವಣ್ಣ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!