ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಂಪ್ಲಿ ತಾಲ್ಲೂಕಿನ ಸುಗ್ಗೇನಹಳ್ಳಿಯಲ್ಲಿ ಸಂಭ್ರಮದ ಮೊಹರಂ ಹಬ್ಬ.- ಮೌಲಾಲಿತಾತನ ಕಾರಣಿಕ : ಕೆಂಪು-ಬಿಳಿ ಕುದುರೆ ಹಿಂದಕ್ಕೆ ಮುಂದಕ್ಕೆ ಹೋಗಿ ಗಗನಕ್ಕೆ ಹಾರಿತು.!

ಬಳ್ಳಾರಿ / ಕಂಪ್ಲಿ : ‘ಸಣ್ಣ ಮಕ್ಕಳಿಗೆ ಬಲತ್ಕಾರ ಕಡಿಮೆ ಆಯಿತು, ನರಮಾನವನ ಅಹಂಕಾರದಿಂದ ಭೂಮಿ ತಾಯಿ ಬಾಯಿತೆಗೆದಾಳು. ದೈವದ ಮಳೆ ದೈವದ ಬೆಳೆ, ಕೆಂಪು ಕುದುರೆ, ಬಿಳಿ ಕುದರೆ ಹಿಂದಕ್ಕೆ, ಮುಂದಕ್ಕೆ ಹೋಗಿ ಗಗನಕ್ಕೆ ಹಾರಿತು……!
ತಾಲ್ಲೂಕಿನ ಸುಗ್ಗೇನಹಳ್ಳಿ ಗ್ರಾಮದಲ್ಲಿ ಮೊಹರಂ ಅಂಗವಾಗಿ ಅಲಾಯಿ ಕುಣಿ (ಅಗ್ನಿಕುಂಡ) ಹಾಯುವ ಮುನ್ನ ಮೌಲಾಲಿ ತಾತನನ್ನು ಹೊತ್ತಿದ್ದ ಗ್ರಾಮದ ರಫಿಕ್ ತಾತ ಅವರು ನುಡಿದ ಕಾರ್ಣೀಕೋತ್ಸವದ ಭವಿಷ್ಯವಾಣಿ ಇದು.
ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ.ಪರಿಸರ ಮುನಿಸಿಕೊಂಡು ಮಳೆ ಬೆಳೆ ಕಡಿಮೆಯಾಗಬಹುದು,ನ್ಯಾಯನೀತಿಯಿಂದ ನಡೆದಕೊಂಡವರಿಗೆ ದೈವ ಕೈಹಿಡಿಯುತ್ತದೆ.ಮೆಣಸಿನಕಾಯಿ,ಅಕ್ಕಿ,ಹತ್ತಿದರ ಹೆಚ್ಚಳ ಸಾಧ್ಯತೆ ಇದೆ ಎಂದು ಹಬ್ಬದಲ್ಲಿ ನೆರೆದಿದ್ದ ಜನರು ವಿಶೇಷವಾಗಿ ರೈತರು ವ್ಯಾಖ್ಯಾನಿಸಿದರು. ಮೊಹರಂ ಹಬ್ಬದ ನಿಮಿತ್ತ ಅಲಾಯಿ ಕುಣಿ ಹಾಯುವುದು, ತನಗೊಡ ತರುವುದು, ಪಲ್ಲಕ್ಕಿ,ಗಂಗೆಸ್ಥಳ ಮೆರವಣಿಗೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧೆ,ಭಕ್ತಿಯಿಂದ ಜರುಗಿದವು.ಗ್ರಾಮದ ಕೆಲವರು ವಿವಿಧ ರೀತಿಯ ಹರಕೆಗಳನ್ನು ತೀರಿಸಿದರು.
ಮೊಹರಂದ ಹಬ್ಬದ್ ನಿಮಿತ್ತ ಮಸೀದಿಯಲ್ಲಿ ಪ್ರತಿಷ್ಠಾಪಿಸಿದ್ದ ಮೌಲಾಲಿತಾತ ಸೇರಿದಂತೆ ವಿವಿಧ ಪೀರಲದೇವರುಗಳ ಅದ್ದೂರಿ ಮೆರವಣಿಗೆಮತ್ತು ವಿಸರ್ಜನೆ ಶುಕ್ರವಾರ ಸಂಜೆ ಸಂಭ್ರಮದಿಂದ ಜರುಗಿದವು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!